ಕನ್ನಡಪ್ರಭ ವಾರ್ತೆ ಹುಣಸೂರು
ತಾಲೂಕಿನ ಗಡಿಗ್ರಾಮ ಸಿಂಗರಮಾರನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯ ಹಲವು ನ್ಯೂನತೆಗಳನ್ನು ಸರಿಪಡಿಸಿ ಸಂಸತ್ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಕಾಯ್ದೆ ಜಾರಿಗೊಳಿಸಲಾಗಿದೆ. ಅತ್ಯಂತ ಪಾರದರ್ಶಕ ಮತ್ತು ಉತ್ತಮ ಯೋಜನೆಯಾಗಿ ವಿಬಿ ಜಿರಾಮ್‌ಜಿ ಜಾರಿಗೊಂಡಿದೆ. ನರೇಗಾ ಯೋಜನೆಯಡಿ ಈ ಹಿಂದೆ 100 ದಿನಗಳ ಕೂಲಿ ದಿನ ಇತ್ತು. ಇದೀಗ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಗ್ರಾಪಂಗಳಿಗೆ ತಮ್ಮ ಗ್ರಾಮೆದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕಾಯ್ದೆ ಸಂಪೂರ್ಣ ಅಧಿಕಾರ ನೀಡಿದೆ. ನಿಮ್ಮೂರಿನ ರಸ್ತೆ, ಚರಂಡಿ, ಸೇತುವೆ, ಕಾಡಂಚಿನ ಗ್ರಾಮಗಳಲಿ ತಡೆಗೋಡೆ ಇನ್ನಾವುದೇ ಕಾಮಗಾರಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಯೋಜನೆಗಳಿಗೆ ವಿಬಿ ಜಿ ರಾಮ್‌ಜೀ ಕಾಯ್ದೆ ಬಳಸಿಕೊಳ್ಳಬಹುದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ. ಹರೀಶ್ ಗೌಡ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಯಿಂದಾದ ಆರ್ಥಿಕ ಕೊರತೆಗಳ ನಡುವೆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಸಿಗುತ್ತಿಲ್ಲ. ಈ ನಡುವೆಯೂ ಸಂಸದರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಸಿಂಗರಮಾರನಹಳ್ಳಿ ರಸ್ತೆ ಅಭಿವೃದ್ಧಿಗೆ 40 ಲಕ್ಷ ರು.ಗಳು ಸೇರಿದಂತೆ ಸಮುದಾಯ ಭವನಗಳ ನಿರ್ಮಾಣಕ್ಕೆ ಒಟ್ಟು 40 ಲಕ್ಷ ರು.ಗಳು ಹಾಗೂ ಸಿಂಗರಮಾರನಹಳ್ಳೀ ಕೆರೆ ತುಂಬಿಸುವ ಕಾಮಗಾರಿಗೆ 80 ಲಕ್ಷ ರು.ಗಳ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.ಗ್ರಾಪಂ ಅಧ್ಯಕ್ಷರಾದ ದೇವರಾಜ್, ಮಹದೇವ್, ಉಪಾಧ್ಯಕ್ಷೆ ಮಂಜುಳಾ, ಜ್ಯೋತಿ, ಸದಸ್ಯ ಅಣ್ಣೇಗೌಡ, ಮುಖಂಡರಾದ ಗಣೇಶ್ ಕುಮಾರಸ್ವಾಮಿ, ಸತೀಶ್ ಪಾಪಣ್ಣ, ಸುರೇಂದ್ರ, ಸತೀಶ್ ಕುಮಾರ್ ಇದ್ದರು.
ಇದೇ ವೇಳೆತಾಲೂಕಿನ ಧರ್ಮಾಪುರಗ್ರಾಮದಲ್ಲಿ 13 ಲಕ್ಷ ರು. ವೆಚ್ಚದಡಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ, ಹರವೆ ಗ್ರಾಮದಲ್ಲಿ ನೂತನ ಗ್ರಾಪಂ ಕಟ್ಟಡ ಹಾಗೂ ಮೋದೂರು ಗ್ರಾಮದಲ್ಲಿ ಗ್ರಾಪಂ ಕಟ್ಟಡವನ್ನು ಸಂಸದ ಮತ್ತು ಶಾಸಕರು ಉದ್ಘಾಟಿಸಿದರು.