ಹರಪನಹಳ್ಳಿ: ವಿಬಿಜಿ ರಾಮ್ ಜಿ ಎನ್ನುವುದು ರೂಪಾಂತರಗೊಂಡಂತಹ ಕೇಂದ್ರ ಸರ್ಕಾರದ ಒಂದು ಹೊಸ ಯೋಜನೆಯಾಗಿದೆ. ಬಡವರ ಬಗ್ಗೆ ನಿಜವಾದ ಕಾಳಜಿ ಹೊಂದಿರುವಂತಹ ಯೋಜನೆಯಾಗಿದೆ. ಆದರೆ ರಾಜ್ಯ ಸರ್ಕಾರ ಕೇವಲ ಹೆಸರಿನ ಕಾರಣದಿಂದ ಇದನ್ನು ವಿರೋಧಿಸುತ್ತಿರುವುದು ಖಂಡನೀಯ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ನಿರ್ದೇಶಕ ಆರುಂಡಿ ನಾಗರಾಜ ಹೇಳಿದ್ದಾರೆ.ಅವರು ತಾಲೂಕಿನ ವಿವಿಧೆಡೆ ಸಂಚರಿಸಿ ಗ್ರಾಮೀಣ ಜನರಿಗೆ ವಿಬಿಜಿ ರಾಮ್ ಜಿ ಕುರಿತು ಅರಿವು ಮೂಡಿಸಿ ಮಾತನಾಡಿದರು.
ಈ ಯೋಜನೆಯು ಕಡು ಬಡವರಿಗೆ ಅತ್ಯಂತ ಉಪಯುಕ್ತವಾಗಿದೆ. ಫಲಾನುಭವಿಗಳಿಗೆ ಅತಿಹೆಚ್ಚು ಲಾಭವನ್ನು ತರುವ ಚಿಂತನೆ ಒಳಗೊಂಡಿದೆ. ಹಿಂದಿ ನರೇಗಾದಲ್ಲಿ ಕೂಲಿಗಾಗಿ ಕಾಳು ಎಂಬ ಘೋಷವಾಕ್ಯ ಇತ್ತು. ಆದರೆ ಇದರಲ್ಲಿ ಬಡವರ ಬದುಕಿನ ಊರುಗೋಲು, ವಿಬಿಜಿ ರಾಮ್ ಜಿ ಎಂಬುದಾಗಿದೆ ಎಂದು ತಿಳಿಸಿದರು.
ಇದರಲ್ಲಿ ದಿನಗೂಲಿ ಹೆಚ್ಚಿಸಲಾಗಿದೆ. ಜಾಬ್ ಕಾರ್ಡ್ ಕಡ್ಡಾಯವನ್ನು ಸಡಿಲಗೊಳಿಸಲಾಗಿದೆ. ಸೀಮಿತವಾಗಿದ್ದ ಕಾರ್ಯಭಾರದ ದಿನಗಳ ಸಂಖ್ಯೆ ಹೆಚ್ಚಿಸಲಾಗಿದೆ. ಇಂತಹ ಅನೇಕ ಉಪಯೋಗಗಳನ್ನು ಇದು ಹೊಂದಿದ್ದು ಹೆಚ್ಚಿನ ಹಣಕಾಸಿನ ನೆರವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿದೆ. ಗ್ರಾಪಂಗಳ ಎಲ್ಲ ಸದಸ್ಯರು ಇದನ್ನುಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದ್ದಾರೆ.ಮಾಜಿ ಜಿಪಂ ಸದಸ್ಯರಾದ ಡಾ.ಸುವರ್ಣ ಆರುಂಡಿ ನಾಗರಾಜ್ ಪಾಲ್ಗೊಂಡಿದ್ದರು.
ಹರಪನಹಳ್ಳಿ ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಬಿಜೆಪಿ ಮುಖಂಡ ಆರುಂಡಿ ನಾಗರಾಜ ಜಿ ರಾಮ್ ಜಿ ಬಗ್ಗೆ ಜನರಿಗೆ ಅರಿವು ಮೂಡಿಸಿದರು.