ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ವಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 106 ವರ್ಷಗಳಲ್ಲಿ ವಿಡಿಸಿಸಿ ಬ್ಯಾಂಕ್ ಸಾಕಷ್ಟು ಜನಸೇವೆಯನ್ನು ಒದಗಿಸಿದ್ದು, ಅಭಿವೃದ್ಧಿಪಥದತ್ತ ಸಾಗಿದೆ. ಬ್ಯಾಂಕಿನ ಸಾಂಪತ್ತಿಕ ಸ್ಥಿತಿಯು ಎಲ್ಲ ಆರ್ಥಿಕ ಅಂಶಗಳಲ್ಲಿ ಹೆಚ್ಚಿನ ಸಾಧನೆಯಾಗಿದೆ ಎಂದರು.
ಸ್ವಂತ ಬಂಡವಾಳ ₹540 ಕೋಟಿ ಇದ್ದಿದ್ದು, ಈ ಬಾರಿ ₹598 ಕೋಟಿಗಳಷ್ಟಾಗಿದ್ದು, ₹58 ಕೋಟಿ ಹೆಚ್ಚಳವಾಗಿದೆ. ಠೇವಣಿ ₹3495 ಕೋಟಿಗಳಿಂದ ₹3814 ಕೋಟಿಗಳಷ್ಟಾಗಿದ್ದು, ಈ ಬಾರಿ ಠೇವಣಿಯಲ್ಲಿ ₹319 ಕೋಟಿ ಹೆಚ್ಚಳವಾಗಿದೆ. ದುಡಿಯುವ ಬಂಡವಾಳ ₹4701ರಿಂದ ₹4902 ಕೋಟಿಗಳಷ್ಟಾಗಿದ್ದು, ₹201 ಕೋಟಿ ಏರಿಕೆಯಾಗಿದೆ. ಸಾಲ ವಿತರಣೆ ಕೃಷಿಗೆ ₹1864 ಹಾಗೂ ಕೃಷಿಯೇತರ ಸಾಲ ₹1106 ಕೋಟಿ ಸೇರಿ ಒಟ್ಟು ₹2970 ಕೋಟಿ ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.ರೈತರಿಗೆ ತೋಟದ ಮನೆ ಕಟ್ಟಲು ಗರಿಷ್ಠ ₹20 ಲಕ್ಷದವರೆಗೆ ಶೇ.10ರ ಬಡ್ಡಿದರದಲ್ಲಿ ಸಾಲ ವಿತರಿಸುವ ಯೋಜನೆಯನ್ನು ರಾಜ್ಯದಲ್ಲೇ ಮೊದಲು ಜಾರಿಗೆ ತರಲಾಗಿದೆ. ಸಾಲ ಮುಂಗಡಗಳ ಬಾಕಿ ಬರತಕ್ಕದ್ದು ₹3281 ಕೋಟಿ ಇದ್ದು, ಕಳೆದ ವರ್ಷದ ₹3112 ಕೋಟಿಗೆ ಹೋಲಿಸಿದಾಗ ₹169 ಕೋಟಿ ಹೆಚ್ಚಾಗಿದೆ. ಹೂಡಿಕೆಗಳು ₹1233 ಕೋಟಿ ಹೆಚ್ಚುವರಿ ಹೂಡಿಕೆ ಮಾಡಲಾಗಿದೆ. ಲಾಭದಲ್ಲಿ ₹8.53 ಕೋಟಿ ಆದಾಯ ತೆರಿಗೆ ಕಟ್ಟಿದ ಬಳಿಕ ₹25.18 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಲಾಭವು ಬ್ಯಾಂಕಿನ ಇತಿಹಾಸದಲ್ಲೇ ಅತಿ ಹೆಚ್ಚಿನ ಲಾಭವಾಗಿದೆ. ಒಟ್ಟು ವ್ಯವಹಾರವು ₹6607 ಕೋಟಿಗಳಷ್ಟಿದ್ದು, ಈ ವರ್ಷಾಂತ್ಯಕ್ಕೆ ₹7095 ಕೋಟಿಯಾಗಿದ್ದು, ₹488 ಕೋಟಿ ಹೆಚ್ಚಳವಾಗಿದೆ. ಅನುತ್ಪಾದಕ ಆಸ್ತಿ ₹3281 ಕೋಟಿಗಳಲ್ಲಿ ನಿಷ್ಕ್ರಿಯ ಆಸ್ತಿ ₹179.59 ಕೋಟಿಗಳಷ್ಟಿದೆ. ಎನ್‌ಪಿಎ ಪ್ರಮಾಣ ಶೇ.5.20ರಷ್ಟಿದ್ದು, ನೆಟ್ ಎನ್‌ಪಿಎ ಪ್ರಮಾಣ ಶೂನ್ಯವಾಗಿದೆ. ಬಂಡವಾಳ ಅನುಪಾತ ಸಿಆರ್‌ಎಆರ್ ಶೇ.9ರಷ್ಟು ಇರಬೇಕಿದ್ದು, ಶೇ.13.22ರಷ್ಟಿದೆ ಎಂದರು.
ನಿರ್ದೇಶಕರಾದ ಚಂದ್ರಶೇಖರಗೌಡ ಪಾಟೀಲ ಮನಗೂಳಿ, ಸುರೇಶ ಬಿರಾದಾರ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಸಿಇಒ ಎಸ್.ಎ.ಢವಳಗಿ, ಸಹಕಾರಿ ಸಂಘಗಳ ಉಪನಿಭಂದಕಿ ಎಸ್.ಕೆ.ಭಾಗ್ಯಶ್ರೀ, ಆಡಳಿತ ಮಂಡಳಿ ಸಲಹೆಗಾರ ಕೆ.ಕೊಟ್ರೇಶ ಉಪಸ್ಥಿತರಿದ್ದರು.