ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಪರಿಸರ ಸಂರಕ್ಷಣೆ ಹಾಗೂ ಹಸಿರು ಆವರಣ ನಿರ್ಮಾಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಕ್ಕಾಗಿ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.
ಕನ್ನಡಪ್ರಭ ವಾರ್ತೆ ಹಳಿಯಾಳ
ಪಟ್ಟಣದ ಕೆ.ಎಲ್.ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಪರಿಸರ ಸಂರಕ್ಷಣೆ ಹಾಗೂ ಹಸಿರು ಆವರಣ ನಿರ್ಮಾಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಕ್ಕಾಗಿ ಪ್ಲಾಟಿನಂ ಸುಸ್ಥಿರ ಕ್ಯಾಂಪಸ್ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ.
ಈ ಕುರಿತು ಮಹಾವಿದ್ಯಾಲಯವು ಪತ್ರಿಕೆಗಳಿಗೆ ಮಾಹಿತಿ ಬಿಡುಗಡೆ ಮಾಡಿದೆ. ರಿಸರ್ಚ್ ಹೈಟ್ಸ್ ಫೌಂಡೇಶನ್ ವತಿಯಿಂದ ಇ.ಪಿ.ಟಿ.ಆರ್.ಐ ಸಹಯೋಗದಲ್ಲಿ ಭೂಮಿ ವಾರದ ಅಂಗವಾಗಿ ಏಪ್ರಿಲ್ 22ರಿಂದ 29ರವರೆಗೆ ಆಯೋಜಿಸಲಾದ ಭಾರತ ಏನ್ವಿರಾನ್ಮೆಂಟ್ ಪ್ರೋಗ್ರಾಂ ಎ ಭಾರತ ಸಸ್ಟೇನಬಿಲಿಟಿ ಕ್ಯಾಂಪಸ್ ಮಿಷನ್ 2026 ಅಡಿಯಲ್ಲಿ ಈ ಗೌರವ ಪ್ರಾಪ್ತವಾಗಿದೆ.
ಮಹಾವಿದ್ಯಾಲಯವು ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆ, ಪರಿಸರ ಜಾಗೃತಿ ಹಾಗೂ ಹಸಿರು ಆವರಣ ಅಭಿವೃದ್ಧಿಗೆ ಕೈಗೊಂಡಿರುವ ನಿರಂತರ ಪ್ರಯತ್ನಗಳನ್ನು ಮತ್ತು ಕಾರ್ಯಕ್ರಮಗಳನ್ನು ಪರಿಗಣಿಸಿ ಆರ್.ಎಚ್.ಎಫ್ ಸಂಸ್ಥೆಯು ಈ ವಿಶೇಷ ಪ್ರಶಸ್ತಿಯನ್ನು ಅಧಿಕೃತವಾಗಿ ಘೋಷಿಸಿದೆ. ಜೂ. 1ರಂದು ಹೈದರಾಬಾದನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನಿಸಲಾಗುವುದು.
ಹಸಿರು ಕ್ಯಾಂಪಸ್:
ಮಹಾವಿದ್ಯಾಲಯದ ಆವರಣದಲ್ಲಿ 310ಕ್ಕೂ ಹೆಚ್ಚು ವಿವಿಧ ಬಗೆಯ ಸಸ್ಯ ಹಾಗೂ ಮರಗಳ ಜಾತಿಗಳು ಇದ್ದು, ವಿವಿಧ ಔಷಧೀಯ ವನಸ್ಪತಿ ಸಸ್ಯಗಳ ಸಂರಕ್ಷಣೆಯ ಮೂಲಕ ಜೀವ ವೈವಿಧ್ಯತೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಮಹಾವಿದ್ಯಾಲಯವು ಹಸಿರು ಮತ್ತು ಸುಸ್ಥಿರ ಆವರಣ ನಿರ್ಮಾಣದ ಉದ್ದೇಶದಿಂದ ಹಲವಾರು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಮಹಾವಿದ್ಯಾಲಯದಲ್ಲಿ ನೀರಿನ ಸಂರಕ್ಷಣೆ ಮತ್ತು ಮರುಬಳಕೆಗೆ ಎಸ್.ಟಿ.ಪಿ ವ್ಯವಸ್ಥೆ ಹಾಗೂ ಭೂಗರ್ಭ ಜಲಮಟ್ಟ ಹೆಚ್ಚಿಸಲು ಡೀಪ್ ರೇನ್ ವಾಟರ್ ಹಾರ್ವೆಸ್ಟಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.ಜೀವಜಲದ ಸಂರಕ್ಷಣೆ:
ಮಹಾವಿದ್ಯಾಲಯವು ಪರಿಸರ ಸಂರಕ್ಷಣೆಗೆ ವನಮಹೋತ್ಸವ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್, ಮಳೆ ಕೊಯ್ಲು, ಕಲುಷಿತ ನೀರನ್ನು ಶುದ್ಧೀಕರಿಸಿ ಮರುಬಳಕೆ ಘಟಕ, ನೀರು ಮಿತ ಬಳಕೆಗೆ ಸೆನ್ಸರ್ ಆದಾರಿತ ನಲ್ಲಿಗಳ ಜೋಡಣೆ, ಸೌರಶಕ್ತಿ ಬಳಕೆ, ಪರಿಸರ ಸ್ನೇಹಿ ಕ್ರಮಗಳು, ಸಸ್ಟೇನಬಲ್ ಡೆವಲಪ್ಮೆಂಟ್ ಗೋಲ್ಸ್ ಅನುಷ್ಠಾನ, ಪರಿಸರ ಸ್ನೇಹಿ ಬಯೋಕಲ್ಚರ್ ಬಳಕೆ, ನೈಸರ್ಗಿಕ ಕೆರೆಗಳ ಸಂರಕ್ಷಣೆ ಮುಂತಾದ ಕಾರ್ಯಕ್ರಮ ಕೈಗೊಂಡಿದೆ.ಉತ್ತಮ ಕಾರ್ಯ:
ಮಹಾವಿದ್ಯಾಲಯಕ್ಕೆ ಈ ಪ್ರಶಸ್ತಿ ದೊರಕಿರುವುದು ಹೆಮ್ಮೆಯ ವಿಷಯವೆಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ, ಪ್ರಾಚಾರ್ಯ ಡಾ.ವಿ.ಎ. ಕುಲಕರ್ಣಿ ಸಂತಸ ವ್ಯಕ್ತಪಡಿಸಿದ್ದಾರೆ. ಮಹಾವಿದ್ಯಾಲಯದ ಇಕೋ ಕ್ಲಬ್ ಸಂಯೋಜಕ ಪ್ರೊ. ರಾಕೇಶ ಪಾಟೀಲ್, ಸದಸ್ಯರಾದ ಪ್ರೊ.ರೋಹಿಣಿ ಕಲ್ಲೂರ, ಪ್ರೊ. ನವೀನ ಹಿರೇಮಠ, ಪ್ರೊ. ಸುನೀತಾ ಕಲ್ಲು, ಡಾ. ಸ್ನೇಹಾ ಕುಲಕರ್ಣಿ, ಪ್ರೊ. ಅಮರನಾಥ ಸ್ವಾಮಿ ಮತ್ತ ಗದಿಗೆಪ್ಪಾ ಯಳ್ಳೂರ ಮತ್ತು ವಿದ್ಯಾರ್ಥಿ ವೃಂದವು ಹರ್ಷ ವ್ಯಕ್ತಪಡಿಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.