ವೈದಿಕರು ಸನ್ಮಾರ್ಗದ ಪ್ರವರ್ತಕರಾಗಬೇಕು: ರಾಘವೇಶ್ವರ ಶ್ರೀ

KannadaprabhaNewsNetwork |  
Published : Sep 03, 2024, 01:31 AM IST
2ಜಿಕೆಎನ್21 | Kannada Prabha

ಸಾರಾಂಶ

ವೇದಗಳು ತೋರುವ ದಾರಿಯಲ್ಲಿ ಮುನ್ನಡೆಬೇಕು. ಆ ಮೂಲಕ ನಾವು ಬದುಕು ಕಟ್ಟಿಕೊಳ್ಳಬೇಕು. ಅದನ್ನು ಚಾಚೂ ತಪ್ಪದೇ ಆಚರಿಸುವುದು ಈಶ್ವರನ ಸೇವೆ. ವೈದಿಕರು ಗೃಹಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ವೇದಗಳನ್ನು ಆಧರಿಸಿ ಬದುಕು ಕಟ್ಟಿಕೊಂಡವನು ವೈದಿಕ. ಅದಲ್ಲದಿದ್ದವನು ಅವೈದಿಕ. ಗೃಹಸ್ಥರು ಪ್ರತಿಯೊಬ್ಬರೂ ನಿತ್ಯ ವೇದಾಧ್ಯಯನ ಮಾಡಬೇಕು ಎನ್ನುವುದು ಶಂಕರರ ಅನುಜ್ಞೆ. ವೈದಿಕರು ಇದನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದ ಪ್ರವರ್ತಕರಾಗಬೇಕು ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ್ಯ ಕೈಗೊಂಡಿರುವ ಶ್ರೀಗಳು 44ನೇ ದಿನವಾದ ಸೋಮವಾರ ನಡೆದ ವೈದಿಕ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ವೇದಗಳು ತೋರುವ ದಾರಿಯಲ್ಲಿ ಮುನ್ನಡೆಬೇಕು. ಆ ಮೂಲಕ ನಾವು ಬದುಕು ಕಟ್ಟಿಕೊಳ್ಳಬೇಕು. ಅದನ್ನು ಚಾಚೂ ತಪ್ಪದೇ ಆಚರಿಸುವುದು ಈಶ್ವರನ ಸೇವೆ. ವೈದಿಕರು ಗೃಹಸ್ಥರಲ್ಲಿ ಧಾರ್ಮಿಕ ಭಾವನೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.ಇಂದು ವೈದಿಕರ ಬದುಕು ವೇದಗಳನ್ನು ಆಧರಿಸಿದೆ. ವೇದಗಳನ್ನು, ಕರ್ಮಕಾಂಡಗಳನ್ನು ಅಧ್ಯಯನ ಮಾಡಿದ ಸಣ್ಣ ಗುಂಪು ಮಾತ್ರ ಸಮಾಜದಲ್ಲಿದೆ. ಕಾಲ ಪ್ರವಾಹದಲ್ಲಿ ಸಿಲುಕಿ ಎಲ್ಲರೂ ಇದರಿಂದ ವಿಮುಖರಾಗಿದ್ದಾರೆ. ಸಣ್ಣ ಗುಂಪಾದರೂ ಅದನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದು ಅಭಿಪ್ರಾಯಪಟ್ಟರು.ವೇದವೃತ್ತಿ ಬಗ್ಗೆ ಹೆಮ್ಮೆ ಇರಲಿ. ಜೀವನಗಳನ್ನು ದೇವರ ಜತೆ ಸಂಪರ್ಕಿಸುವ ಸೇತುಗಳು ನೀವು. ಇದು ದೇಶಕ್ಕೆ ನೀಡುವ ಅತಿದೊಡ್ಡ ಕೊಡುಗೆ. ಹೆಚ್ಚಿನ ಶ್ರದ್ಧೆಯಿಂದ ಇವುಗಳನ್ನು ಮಾಡಿ. ಸಮಗ್ರ ಅಧ್ಯಯನ ಮಾಡಿ, ಕರ್ಮಜ್ಞಾನಿಗಳಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಿ ಎಂದು ವೈದಿಕರಿಗೆ ಕರೆ ನೀಡಿದರು. ಕಾಲ ಪ್ರವಚನ ಸರಣಿ ಮುಂದುವರಿಸಿದ ಶ್ರೀಗಳು, ಅಮಾವಾಸ್ಯೆ ಆಧ್ಯಾತ್ಮಕ್ಕೆ ಅತ್ಯಂತ ಪ್ರಶಸ್ತ ಕಾಲ. ಅಂದು ಸೂರ್ಯಚಂದ್ರರ ಸಮಾಗಮವಾಗುತ್ತದೆ. ಅಮಾವಾಸ್ಯೆ ಎಂದ ಮಾತ್ರಕ್ಕೆ ಕೆಟ್ಟದು ಎಂಬ ಭಾವನೆ ಬೇಡ. ಪ್ರಕೃತಿ ಮತ್ತು ಪುರುಷನ ಸಮಾಗಮದ ಸಂಕೇತ ಅದು ಎಂದರು.ಕೋಪ, ಗಾಬರಿ, ಶೋಕದಿಂದ ಮನೋರೋಗಗಳು ಬರಬಹುದು. ಆದಿಯಿಂದ ವ್ಯಾಧಿ. ಆದಿ ಎಂದರೆ ಮನಸ್ಸು. ಮನಸ್ಸಿನ ತುಮುಲ ಹಲವು ರೋಗಗಳಿಗೆ ಕಾರಣವಾಗುತ್ತದೆ. ರಾಜಸಭಾವಗಳು ತೀವ್ರವಾದಾಗ ರೋಗವಾಗಿ ಮುಕ್ತಾಯವಾಗುತ್ತದೆ. ಪ್ರೀತಿ, ದಯೆ, ಶಾಂತಿ, ತ್ಯಾಗಗಳು ಸಾತ್ವಿಕ ಭಾವಗಳಾಗಿದ್ದು, ಇವು ನಮಗೆ ಶಕ್ತಿ ತುಂಬುತ್ತವೆ ಎಂದು ವಿಶ್ಲೇಷಿಸಿದರು.ಕರ್ನಾಟಕ ರಾಜ್ಯ ಸಂಸ್ಕೃತ ವಿವಿಯಿಂದ ಗೌರವ ಡಾಕ್ಟರೇಟ್‍ಗೆ ಭಾಜನರಾದ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳನ್ನು ಹವ್ಯಕ ಮಹಾಮಂಡಲ ವತಿಯಿಂದ ಸನ್ಮಾನಿಸಲಾಯಿತು. ಅವರನ್ನು ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಾರಾಯಣೀಯಮ್ ಸಹಿತ ವಿವಿಧ ಸ್ತೋತ್ರಗಳನ್ನು ಆನ್‍ಲೈನ್ ಮೂಲಕ ನಿರಂತರವಾಗಿ ಕಲಿಸುತ್ತಾ ಬಂದಿರುವ ಬೆಳ್ಳಾರೆಯ ಮಹಾಲಿಂಗ ಭಟ್ ಕುರುಂಬುಡೇಲು ಅವರ ವ್ಯಕ್ತಿತ್ವವನ್ನು ಮೊಡಪ್ಪಾಡಿ ರಾಮಚಂದ್ರ ಭಟ್ ಅನಾವರಣಗೊಳಿಸಿದರು. ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ 400ಕ್ಕೂ ಹೆಚ್ಚು ವೈದಿಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವೈದಿಕ ಪ್ರಧಾನ ಮಹೇಶ್ ಭಟ್ ಚೂಂತಾರು, ಧರ್ಮಕರ್ಮ ವಿಭಾಗದ ರಾಮಕೃಷ್ಣ ಭಟ್ ಕೂಟೇಲು, ಕೇಶವ ಭಟ್ ಕೂಟೇಲು, ಅಮೈ ಶಿವಪ್ರಸಾದ್, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಶಾಸ್ತ್ರಿಗಳಾದ ಶ್ರೀಶ ಶಾಸ್ತ್ರಿ ಉಪಸ್ಥಿತರಿದ್ದರು. ಸುಧನ್ವ ಶಾಸ್ತ್ರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ