ಕಂಬ್ಳ ವಾರ್ಡ್‌: ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ

KannadaprabhaNewsNetwork |  
Published : Jun 19, 2026, 03:00 AM IST
ರಸ್ತೆ  ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು | Kannada Prabha

ಸಾರಾಂಶ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 29ನೇ ಕಂಬ್ಳ ವಾರ್ಡಿನ ವೇರ್ ಹೌಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿ 40 ಲಕ್ಷ ರು. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಅದರ ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯಿತು.

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 29ನೇ ಕಂಬ್ಳ ವಾರ್ಡಿನ ವೇರ್ ಹೌಸ್ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಾಗಿ 40 ಲಕ್ಷ ರು. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಅದರ ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್‌, ಇಲ್ಲಿನ ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಈ ಕಾಮಗಾರಿ ನಡೆಯುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ನೆರವೇರಲಿದೆ. ಕಾಮಗಾರಿ ವೇಳೆ ಉಂಟಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸುವಂತೆ ಶಾಸಕರು ಮನವಿ ನೀಡಿದರು.

ನಿಕಟಪೂರ್ವ ಪಾಲಿಕೆ ಸದಸ್ಯೆ ಲೀಲಾವತಿ ಪ್ರಕಾಶ್, ಪ್ರಮುಖರಾದ ರಕ್ಷಿತ್ ಕೊಟ್ಟಾರಿ, ಜಯರಾಜ್ ಕೊಟ್ಟಾರಿ, ರಿತೇಶ್ ಶೆಟ್ಟಿ, ಪ್ರಕಾಶ್ ಕೊಡಿಯಾಲ್‌ಬೈಲ್, ಪ್ರವೀಣ್ ನಿಡ್ಡೆಲ್, ವಿಮಲಾ ಟೀಚರ್, ರೇಖಾ ಶೆಟ್ಟಿ, ಗಣೇಶ್ ಪೈ, ಸಂತೋಷ್ ಶೇಟ್, ನಾಗರಾಜ್ ಭಟ್, ಎಂ.ವಿಠಲದಾಸ್ ಭಟ್, ಮೋಹನ್ ಶೆಟ್ಟಿ, ಸುಮೀತ್ ಶೆಟ್ಟಿ, ವಿಕ್ರಮ್ ಕೊಟ್ಟಾರಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಠಾಣೆಗೆ ದೂರು