ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂಪನ್ನ

KannadaprabhaNewsNetwork | Published : Oct 30, 2023 12:30 AM

ಸಾರಾಂಶ

ಹಾಸನ ನಗರದ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವರ ರಥೋತ್ಸವ ಮತ್ತು ಕುಂಭಾಭಿಷೇಕ ಮಹಾಪೂಜೆಯು ಭಾನುವಾರ ಬೆಳಿಗ್ಗೆ ನೆರವೇರಿತು.
ಕನ್ನಡಪ್ರ ವಾರ್ತೆ ಹಾಸನ ನಗರ ಬಸ್ ನಿಲ್ದಾಣ ಹಿಂಭಾಗದ ರಸ್ತೆ ಬಳಿ ಇರುವ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವರ ರಥೋತ್ಸವ ಮತ್ತು ಕುಂಭಾಭಿಷೇಕ ಮಹಾಪೂಜೆಯು ಭಾನುವಾರ ಬೆಳಿಗ್ಗೆ ಯಶಸ್ವಿಯಾಗಿ ನೆರವೇರಿತು. ಶ್ರೀ ವೀರಭದ್ರೇಶ್ವರ ದೇವಾಲಯದಲ್ಲಿ ಶ್ರೀ ಪ್ರಸನ್ನ ವೀರಸಿಂಹಾಸನ ರಂಭಾಪುರೀ ಜಗದ್ಗುರು ಶ್ರೀ ಪ್ರಸನ್ನ ರೇಣುಕ ಚಾರ್ಯರ ಮಹಾ ಸ್ವಾಮೀಜಿ, ಶ್ರೀ ಕಾರ್ಜುವಳ್ಳಿ ಸಂಸ್ಥಾನದ ಹೀರೆಮಠಾಧಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಆಶೀರ್ವಾದ ದೊಂದಿಗೆ ವೀರಭದ್ರೇಶ್ವರ ಸ್ವಾಮಿ ಮತ್ತು ಮಹಾಗಣಪತಿ ದೇವರ ಪುನರ್ ಅಷ್ಟಬಂಧ ಪ್ರಾಣ ಪ್ರತಿಷ್ಠಾಪನೆ ಮಂಡಲ ಪೂಜಾ ಮಹಾಮಂಗಳೋತ್ಸವ ನಿಮಿತ್ತ ಬೆಳಗಿನಿಂದಲೇ ವಿವಿಧ ಪೂಜ ಕಾರ್ಯ ನೆರವೇರಿದ್ದು, ನಗರದ ದೇವಿಗೆರೆಯಲ್ಲಿ ಗಂಗಾ ಪೂಜೆ, ಕಳಸ ಪೂಜೆ ಕುಂಭಾಭಿಷೇಕ ಮಹಾ ಪೂಜೆ ಪುನಸ್ಕಾರಗಳು ಕಾರ್ಜುವಳ್ಳಿ ಸದಾ ಶಿವಾಚಾರ್ಯ ಸ್ವಾಮೀಜಿರವರ ಸಾನಿಧ್ಯದಲ್ಲಿ ನಡೆದವು. ನಂತರ ಶ್ರೀ ವೀರಭದ್ರೇಶ್ವರ ರಥೋತ್ಸವ ಮತ್ತು ಭದ್ರಕಾಳಿ ದೇವರ ರಥೋತ್ಸವವು ಮಹಿಳೆಯರು ಕುಂಭೋತ್ಸವ ಕಳಸ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತು. ಇದಾದ ನಂತರ ವೀರಭದ್ರೇಶ್ವರ ದೇವರಿಗೆ ವಿವಿಧ ಅಭಿಷೇಕಗಳನ್ನು ನಡೆಸಲಾಯಿತು. ಇದಾದ ಬಳಿಕ ನೂರಾರು ಜನರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ವೇದಮೂರ್ತಿ ಜಗದೀಶ್ ಶಾಸ್ತ್ರೀಗಳು ಬೆಂಗಳೂರು, ಶ್ರೀ ವೀರಭದ್ರಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ದೇವರಾಜ ಶಾಸ್ತ್ರೀಗಳು, ಶ್ರೀ ವೇದಮೂರ್ತಿ ಸೋಮಶೇಖರ ಶಾಸ್ತ್ರೀಗಳು, ಶ್ರೀ ವೇದಮೂರ್ತಿ ಧನುಷ್, ಶ್ರೀ ವೇದಮೂರ್ತಿ ದರ್ಶನ, ವೇದಮೂರ್ತಿ ಶಿವಮೂರ್ತಿ ಶಾಸ್ತ್ರಿಗಳು, ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್, ಜಿಲ್ಲಾ ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷರಾದ ಬಿ.ಎಂ. ಭೂವನಾಕ್ಷ, ಖಜಾಂಚಿ ಕಿರಣ್ ಕುಮಾರ್ ಹೊಸ ಮನಿ, ನಿರ್ದೇಶಕರಾದ ಶೋಭನ್ ಬಾಬು, ಎಚ್.ವಿ. ಹೇಮಂತ್ ಕುಮಾರ್, ಸಂಪತ್ತು, ಜಗದೀಶ್ ಮಾಸ್ಟರ್ ಆಲೂರು, ವೀರಶೈವ ಸಂಘದ ಕಾರ್ಯದರ್ಶಿ ಟೀಕರಾಜ್ ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.

Share this article