ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಐತಿಹಾಸಿ ಹುಲುಕುಡಿ ಕ್ಷೇತ್ರದಲ್ಲಿ ಶ್ರೀವೀರಭದ್ರಸ್ವಾಮಿ ಭದ್ರಕಾಳಮ್ಮ ಬ್ರಹ್ಮರಥೋತ್ಸವ ರಥಸಪ್ತಮಿಯ ದಿನವಾದ ಭಾನುವಾರ ಸಂಭ್ರಮದಿಂದ ನೆರವೇರಿತು.
ರಥಸಪ್ತಮಿಯ ದಿನದಂದು ಬೆಳಗಿನಜಾವ ಹುಲುಕುಡಿ ಬೆಟ್ಟದ ಗುಹಾಂತರ ದೇವಾಲಯದಲ್ಲಿ ನೆಲೆ ನಿಂತಿರುವ ವೀರಭದ್ರಸ್ವಾಮಿ, ಭದ್ರಕಾಳಮ್ಮ ಮೂಲದೇವರುಗಳಿಗೆ ರುದ್ರಾಭಿಷೇಕ ನಡೆಯಿತು. ಮಧ್ಯಾಹ್ನ ವೀರಗಾಸೆ, ಕಂಸಾಳೆ, ಗಾರುಡಿಗೊಂಬೆಗಳು, ಡೊಳ್ಳುಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳೊಂದಿಗೆ ರಥೋತ್ಸವ ನಡೆಯಿತು. ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಇದೇ ವೇಳೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು. ನೀರು, ಮಜ್ಜಿಗೆ, ಪಾನಕ ವಿತರಣೆಯೂ ನಡೆಯಿತು. ರಂಭಾಪುರಿ ಬಾಳೆಹೊನ್ನುರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಶಾಸಕರು, ಮಾಜಿ ಶಾಸಕರು, ಅನೇಕ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.25ಕೆಡಿಬಿಪಿ3- ದೊಡ್ಡಬಳ್ಳಾಪುರ ತಾಲೂಕಿನ ಹುಲುಕುಡಿ ಕ್ಷೇತ್ರದಲ್ಲಿ ವೀರಭದ್ರಸ್ವಾಮಿ ಭದ್ರಕಾಳಮ್ಮ ಬ್ರಹ್ಮರಥೋತ್ಸವ ಭಾನುವಾರ ಸಂಭ್ರಮದಿಂದ ನಡೆಯಿತು.