ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Aug 22, 2025, 01:01 AM IST
ಚಿತ್ರ19ಜಿಟಿಎಲ್3ಗುತ್ತಲದ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಅಗ್ನಿಕುಂಡ ಪ್ರವೇಶಿಸುತ್ತಿರುವ ಪುರವಂತರು ಹಾಗೂ ಭಕ್ತರು.ಚಿತ್ರ19ಜಿಟಿಎಲ್3ಎ ಗುತ್ತಲದ ಶ್ರೀ ವೀರಭದ್ರೇಶ್ವರ ಅಗ್ನಿಕುಂಡ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಗುಗ್ಗಳದಲ್ಲಿ ನೂರಾರು ಮೀಟರ್ ಉದ್ದದ ದಾರವನ್ನು ನಾಲಗಿಯಲ್ಲಿ ಎಳೆದುಕೊಂಡ ಪುರವಂತ ಬಸವರಾಜ ಗಂಗಣ್ಣನವರ | Kannada Prabha

ಸಾರಾಂಶ

ಅನೇಕರು ತಮ್ಮ ಹರಕೆಯನ್ನು ತೀರಿಸಲು ಬಾಯಿ, ಕೈಗಳಿಗೆ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಗುತ್ತಲ: ಉತ್ತರ ಕರ್ನಾಟಕದಲ್ಲಿಯೇ ಅತಿ ದೊಡ್ಡದಾದ ಅಗ್ನಿಕುಂಡ ಪ್ರವೇಶ ಜಾತ್ರಾ ಮಹೋತ್ಸವದ ಖ್ಯಾತಿಯ ಪಟ್ಟಣದ ವೀರಭದ್ರೇಶ್ವರ ಜಾತ್ರೆ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.

ಜಾತ್ರೆಯ ಅಂಗವಾಗಿ ಬೆಳಗ್ಗೆ ಪುರವಂತರು ಒಡಪುಗಳ ಮೂಲಕ ಪಟ್ಟಣದ ಪ್ರಮುಖ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಪಟ್ಟಣದ ಆರಾಧ್ಯ ದೈವ ಹೇಮಗಿರಿ ಚನ್ನಬಸವೇಶ್ವರರ ಮಠಕ್ಕೆ ಗುಗ್ಗಳದ ಮೆರವಣಿಗೆ ಆಗಮಿಸಿದಾಗ ಪುರವಂತರಾದ ಬಸವರಾಜ ಗಂಗಣ್ಣನವರ ನೂರಾರು ಮೀಟರ್ ಉದ್ದದ ದಾರವನ್ನು ನಾಲಿಗೆಯಲ್ಲಿ ಎಳೆಯುತ್ತಾ ಮೆರವಣಿಗೆ ಸಮಾಳದ ಶಬ್ದಕ್ಕೆ ತಕ್ಕಂತೆ ನಾಟ್ಯ ಮಾಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.

ಇದೇ ವೇಳೆ ಅನೇಕರು ತಮ್ಮ ಹರಕೆಯನ್ನು ತೀರಿಸಲು ಬಾಯಿ, ಕೈಗಳಿಗೆ ಶಸ್ತ್ರಗಳನ್ನು ಚುಚ್ಚಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಇದಲ್ಲದೆ ಬಸ್ ನಿಲ್ದಾಣದ ಸರ್ಕಲ್ ಬಳಿ ಶಿವಪ್ಪ ಇಚ್ಚಂಗಿ ಎಂಬ ಭಕ್ತರೊಬ್ಬರು ಉದ್ದನೆ ದಪ್ಪನೆಯ ತಾಮ್ರದ ಸೂಜಿ ಮೂಲಕ ಪೋಣಿಸಲಾದ ನೂರಾರು ಮೀಟರ್ ಉದ್ದನೆ ದಾರವನ್ನು ತನ್ನ ನಾಲಗೆಯಲ್ಲಿ ಚುಚ್ಚಿಕೊಂಡ ಹೊರತೆಗೆದ ದೃಶ್ಯ ಗುತ್ತಲ ಸೇರಿದಂತೆ ಇತರೆ ಗ್ರಾಮಗಳ ಭಕ್ತರ ಗಮನ ಸೆಳೆಯಿತು.

ಪಟ್ಟಣ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸಂಜೆ 5.30ರ ಸುಮಾರಿಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ನಂತರ ಸಂಪ್ರದಾಯದ ಪೂಜಾ ವಿಧಿ ವಿಧಾನಗಳ ಮುಗಿದ ನಂತರ ದೊಡ್ಡದಾದ ಅಗ್ನಿಕುಂಡವನ್ನು ಪುರವಂತರು ಹಾಗೂ ನೂರಾರು ಭಕ್ತರು ಪ್ರವೇಶ ಕಾರ್ಯಕ್ರಮ ಸಾಂಗವಾಗಿ ನೆರವೇರಿತು.

ಈ ವೇಳೆ ಎಲ್ಲೆಡೆ ಹರ ಹರ ಮಹದೇವ ಜಯಘೋಷ ಕೇಳುತ್ತಿತ್ತು. ಮೆರವಣಿಗೆಯಲ್ಲಿ ಐರಣಿ ಮಠದ ಆನೆಯ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಲ್ಲರ ಗಮನ ಸೆಳೆಯಿತು. ಚಿಣ್ಣರು ಆನೆಯನ್ನು ಹತ್ತಿರದಿಂದ ನೋಡಿದ ಧನ್ಯತಾಭಾವ ಅವರ ಸಂತಸದಲ್ಲಿ ಕಂಡು ಬಂದಿತು. ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿತು. ಶ್ರದ್ಧಾ- ಭಕ್ತಿಯಿಂದ ಹಬ್ಬ ಆಚರಿಸಿ

ಸವಣೂರು: ಗೌರಿ ಗಣೇಶ ಹಾಗೂ ಈದ್‌ ಮಿಲಾದ್ ಹಬ್ಬವನ್ನು ಹಿಂದು- ಮುಸ್ಲಿಮರು ಪರಸ್ಪರ ಶ್ರದ್ಧಾ ಭಕ್ತಿಪೂರ್ವಕವಾಗಿ ಆಚರಿಸಿ ಭಾವೈಕ್ಯತೆ ಮೆರೆಯಬೇಕು ಎಂದು ತಹಸೀಲ್ದಾರ್ ರವಿಕುಮಾರ ಕೊರವರ ತಿಳಿಸಿದರು.

ಪಟ್ಟಣದ ಡಾ. ವಿ.ಕೃ. ಗೋಕಾಕ ಸಾಂಸ್ಕೃತಿಕ ಭವನದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಪುರಸಭೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಗೌರಿ ಗಣೇಶ ಹಾಗೂ ಈದ್‌ ಮಿಲಾದ್ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗೌರಿ- ಗಣೇಶ ಹಾಗೂ ಈದ್‌ ಮಿಲಾದ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹಿಂದು- ಮುಸ್ಲಿಮರು ವಿಜೃಂಭಣೆ, ಸೌಹಾರ್ದದಿಂದ ಆಚರಣೆಗೆ ಮುಂದಾಗಬೇಕು ಎಂದರು.ಆರಕ್ಷಕ ನಿರೀಕ್ಷಕ ದಯಾನಂದ ಎಸ್. ಮಾತನಾಡಿ, ಗಣೇಶನನ್ನು ಸಾರ್ವಜನಿಕರಿಗೆ ತೊಂದರೆಯಾಗದಂಥ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ಮುಂದಾಗಬೇಕು ಎಂದರು.ಪುರಸಭೆ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ, ಅಗ್ನಿಶಾಮಕ ಠಾಣಾಧಿಕಾರಿ ಪರಶುರಾಮ ಲಮಾಣಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಆನಂದ ಗುಡಿಮನಿ, ಹೆಸ್ಕಾಂ ಸಿಬ್ಬಂದಿ ನಿಂಗಪ್ಪ ದೊಡ್ಡಮನಿ, ಅರಣ್ಯ ಇಲಾಖೆ ಅಧಿಕಾರಿ ವೀರಭದ್ರಪ್ಪ ಕಾಡಶೆಟ್ಟಿ ಇತರರು ಇದ್ದರು.

PREV

Recommended Stories

ಪಕ್ಷ ಭೇದ ಮರೆತು ಅಭಿವೃದ್ಧಿ ಕೆಲಸ ಮಾಡಿ
ಮುತ್ತೂರು ನಡುಗಡ್ಡೆಯಿಂದ 7 ಕುಟುಂಬಗಳ ಸ್ಥಳಾಂತರ