ವೀರಶೈವ ಸಮಾಜ ಬಾಂಧವರು ಸಂಘಟಿತರಾಗಲು ಕರೆ

KannadaprabhaNewsNetwork |  
Published : Oct 23, 2024, 12:42 AM IST
ಒಗ್ಗಟ್ಟಿನ ಬಲದಿಂದ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ : ಲೋಕೇಶ್ವರ | Kannada Prabha

ಸಾರಾಂಶ

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮಾಜದವರಿದ್ದು ಮುಂದಿನ ದಿನಗಳಲ್ಲಿ ಸಮಾಜದ ಹಾಗೂ ಕೇಂದ್ರ ಸಮಿತಿಯಿಂದ ಸಮಾಜದ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

ಕನ್ನಡಪ್ರಭ ವಾರ್ತೆ ತಿಪಟೂರು

ನಮ್ಮ ನೊಳಂಭ ವೀರಶೈವ ಸಮಾಜದಲ್ಲಿ ಸಂಘಟನೆಯ ಕೊರತೆಯಿದ್ದು, ಸಮಾಜದ ಎಲ್ಲಾ ವ್ಯಕ್ತಿಗಳು, ಸಂಘ- ಸಂಸ್ಥೆಗಳು ಮುಖ್ಯವಾಹಿನಿಗೆ ಬರಲು ಸಂಘಟನೆ ಬಹಳ ಮುಖ್ಯವಾಗಿದ್ದು, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸದೃಢವಾಗಲು ಸಮಾಜವನ್ನು ಬಲಿಷ್ಠವಾಗಿ ಕಟ್ಟಬೇಕಿದೆ ಎಂದು ಸಮಾಜ ಸೇವಕರೂ ಹಾಗೂ ನೊಳಂಭ ಸಮಾಜದ ರಾಜ್ಯ ಮುಖಂಡ ಲೋಕೇಶ್ವರ ತಿಳಿಸಿದರು.

ನಗರದ ಕೌಸ್ತುಭ ಹೋಟೆಲ್‌ನಲ್ಲಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ 2025ರ ಜನವರಿಯಲ್ಲಿ ನಡೆಯುವ 852ನೇ ರಾಜ್ಯಮಟ್ಟದ ಶ್ರೀಗುರು ಸಿದ್ದರಾಮೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ರಾಜ್ಯ ನೊಳಂಭ ವೀರಶೈವ ಸಮಾಜ ಹಾಗೂ ತಿಪಟೂರು ತಾಲೂಕಿನ ಭಕ್ತರಿಂದ ಆಯೋಜಿಸಲಾಗಿದ್ದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಎಲ್ಲರೂ ತಮ್ಮ ತಮ್ಮ ಸ್ವಾರ್ಥವನ್ನು ಬಿಟ್ಟು ಸಮಾಜದ ಏಳ್ಗೆಗಾಗಿ ಸಂಘಟಿತರಾಗಬೇಕು. ರಾಜ್ಯದಲ್ಲಿ ನೊಳಂಭ ಸಮಾಜದವರು ಲಕ್ಷಾಂತರ ಸಂಖ್ಯೆಯಲ್ಲಿದ್ದು, ಸಮಾಜದ ಸಂಘಟನೆಗೆ ದುಡಿಯುವ ಮನಸ್ಸಿರುವವರು ಮುನ್ನೆಲೆಗೆ ಬರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಶಕ್ತಿ ಪಡೆಯಲು ನಮ್ಮ ಸಮಾಜದವರು ಒಂದಾಗಬೇಕು. ಈಗ ಸಮಾಜ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಬೆರಣಿಕೆಯಷ್ಟು ಜನರು ಮಾತ್ರ ರಾಜಕೀಯದಲ್ಲಿದ್ದರೂ ಪ್ರಮುಖ ಹುದ್ದೆಗಳನ್ನು ಹೊಂದಿಲ್ಲ. ಬೆಂಗಳೂರಿನಲ್ಲಿ ನಡೆಯುವ ೮೫೨ನೇ ಗುರುಸಿದ್ದರಾಮೇಶ್ವರ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಬೇಕಿದ್ದು ಶ್ರೀ ಸಿದ್ದರಾಮೇಶ್ವರನ ಭಕ್ತರು ತನು, ಮನ, ಧನವನ್ನು ಅರ್ಪಿಸುವ ಮೂಲಕ ಅದ್ಧೂರಿಯಾಗಿ ಆಚರಿಸೋಣ ಎಂದರು.

852ನೇ ಸಿದ್ದರಾಮೇಶ್ವರ ಜಯಂತಿಯ ಸ್ವಾಗತ ಸಮಿತಿಯ ಅಧ್ಯಕ್ಷ ನಿವೃತ್ತ ಐಜಿಪಿ ಸಿದ್ಧರಾಮಪ್ಪ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಸಹಸ್ರ ಸಂಖ್ಯೆಯಲ್ಲಿ ಸಮುದಾಯದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಈಗಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ನೊಳಂಭ ಲಿಂಗಾಯಿತ ಸಮಾಜದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಮಾಜದವರಿದ್ದು ಮುಂದಿನ ದಿನಗಳಲ್ಲಿ ಸಮಾಜದ ಹಾಗೂ ಕೇಂದ್ರ ಸಮಿತಿಯಿಂದ ಸಮಾಜದ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಉಪಾಧ್ಯಕ್ಷ ಸಿದ್ದರಾಮೇಗೌಡ, ಕಾರ್ಯದರ್ಶಿ ಕಾಮನಹಳ್ಳಿ ಶಶಿಧರ್, ಕೇಂದ್ರ ಸಮಿತಿ ನಿರ್ದೇಶಕ ದಯಾನಂದ್ ಮಾದಿಹಳ್ಳಿ, ಎಂ.ಆರ್.ಸಂಗಮೇಶ್, ಕಿರಣ್‌ಕುಮಾರ್, ರಾಜಣ್ಣ, ಗಂಗಾಧರಯ್ಯ, ಹಿರಿಯ ಮುಖಂಡರಾದ ಎಸ್.ಕೆ.ರಾಜಶೇಖರ್, ಸಮಾಜದ ಮುಖಂಡರಾದ ಬಸವರಾಜು, ರಾಜಶೇಖರ್, ತ್ರಿಯಭಂಕ, ಮನೋಹರ್, ಹರೀಶ್, ದೇವರಾಜು, ಸದಣ್ಣ, ರೇಣು, ಕೆ.ಎಂ.ರಾಜಣ್ಣ, ಮಲ್ಲಿಕಾರ್ಜುನ್, ಶರತ್, ರೇಣು ಪಟೇಲ್, ಅನಿಲ್, ಪ್ರಭು, ತಿಮ್ಮೇಗೌಡ, ಶಶಿಭೂಷಣ್, ಮಂಜುನಾಥ್, ಯತೀಶ್, ದೀಕ್ಷೀತ್, ಲೋಹಿತ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸಮಾಜದ ಪ್ರಮುಖರು ಭಾಗವಹಿಸಿದ್ದರು.

PREV

Recommended Stories

ದ.ಕ.ದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಗೆ ಚಾಲನೆ
ಕದ್ರಿ ದೇವಸ್ಥಾನ ಪ್ರಾಂಗಣದಲ್ಲಿ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆ