ವೀರಶೈವ ಧರ್ಮ ಸಮ್ಮೇಳನ: ಮೂವರು ಮಹಾತ್ಮರ ಜಂಟಿ ಉತ್ಸವ

KannadaprabhaNewsNetwork |  
Published : Apr 28, 2025, 12:51 AM IST
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಂದ್ರಮೌಳಿ | Kannada Prabha

ಸಾರಾಂಶ

ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವ

ಕನ್ನಡಪ್ರಭ ವಾರ್ತೆ, ತುಮಕೂರುನಗರ ವೀರಶೈವ ಸಮಾಜ ಸೇವಾ ಸಮಿತಿ, ವೀರಶೈವ ಸಮಾಜದ ಅಂಗ ಸಂಸ್ಥೆಗಳ ಇವರುಗಳ ಸಂಯುಕ್ತಾಶ್ರಯದಲ್ಲಿ ಜಗದ್ಗುರು ರೇಣುಕಾಚಾರ್ಯರು, ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಶ್ರೀ ಸಿದ್ದರಾಮೇಶ್ವರರ ಜಂಟಿ ಜಯಂತ್ಯೋತ್ಸವದ ಅಂಗವಾಗಿ ಏಪ್ರಿಲ್ 29 ಮತ್ತು 30ರಂದು ವೀರಶೈವ ಧರ್ಮ ಸಮ್ಮೇಳನ ಹಾಗೂ ಮೂವರು ಮಹಾತ್ಮರುಗಳ ಜಂಟಿ ಉತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಎಚ್.ಜಿ.ಚಂದ್ರಮೌಳಿ ತಿಳಿಸಿದರು.ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಏ.29ರ ಸಂಜೆ 6 ಗಂಟೆಗೆ ವೀರಶೈವ ಕಲ್ಯಾಣ ಮಂಟಪ, ಜೆ.ಸಿ.ರಸ್ತೆ, ತುಮಕೂರು ಇಲ್ಲಿ ನಡೆಯಲಿರುವ ವೀರಶೈವ ಧರ್ಮ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಲ್.ರೇವಣಸಿದ್ದಯ್ಯ ಅವರು ನೆರವೇರಿಸುವರು. ಮಕ್ಕಳ ಹೃದ್ರೋಗ ತಜ್ಞರಾದ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಉಪನ್ಯಾಸ ನೀಡುವರು. ಅಧ್ಯಕ್ಷತೆಯನ್ನು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ ವಹಿಸುವರು. ಗೌರವ ಉಪಸ್ಥಿತಿಯಲ್ಲಿ ಲೋಕಸಭಾ ಸದಸ್ಯರಾದ ವಿ.ಸೋಮಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವ ಎಸ್.ಶಿವಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಉತ್ಸವ ಸಮಿತಿ ಅಧ್ಯಕ್ಷರಾದ ಕೋರಿ ಮಂಜುನಾಥ್ ಅವರುಗಳು ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಿ.ವಿ.ಮಹಾದೇವಯ್ಯ, ಟಿ.ಕೆ.ನಂಜುಂಡಪ್ಪ, ಕೆ.ವೈ.ಸಿದ್ಧಲಿಂಗಮೂರ್ತಿ, ಟಿ.ಬಿ.ಶೇಖರ್ ಅವರುಗಳು ಆಗಮಿಸುವರು. ಟಿ.ಬಿ.ಹರೀಶ್ ಬಹುಮಾನ ವಿತರಿಸುವರು. ಸಿ.ವಿ.ಮಹಾದೇವಯ್ಯ, ಪಿ.ಎಂ.ಶಿವಶಂಕರ ಮೂರ್ತಿ, ಟಿ.ಎಸ್.ಶಿವಪ್ರಕಾಶ್, ಎಂ.ಬಿ. ಸದಾಶಿವಯ್ಯ, ಅನುಸೂಯಮ್ಮ, ಆನಂದ್ ಅವರುಗಳು ಸನ್ಮಾನಿತರಾಗಿರುವರು. ಇದೇ ಸಂದರ್ಭದಲ್ಲಿ ಸಾಯಿರಾಮನ್ ನೃತ್ಯ ಕೇಂದ್ರದ ಡಾ.ಸಾಗರ್ ಟಿ.ಎಸ್. ಇವರಿಂದ ಅಭಿನವ ಬಸವೇಶ್ವರ ನೃತ್ಯ ರೂಪಕ ಮೂಡಿಬರಲಿದೆ. ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಸಮಾಜದ ಹಿರಿಯರಾದ ಕೋರಿ ಮಂಜಣ್ಣ, ಟಿ.ಸಿ.ಓಹಿಲೇಶ್ವರ್, ಕೆ.ವೈ.ಸಿದ್ಧಲಿಂಗಮೂರ್ತಿ, ಮಲ್ಲಿಕಾರ್ಜುನಯ್ಯ, ಬಿ.ಎಸ್.ಮಂಜುನಾಥ್, ಸಮಾಜದ ಉಪಾಧ್ಯಕ್ಷ ಟಿ.ವಿ.ಹರೀಶ್, ಗೌರವ ಕಾರ್ಯದರ್ಶಿ ಡಿ.ಜೆ.ಶಶಿಧರನ್, ಖಜಾಂಚಿಗಳಾದ ಜಿ.ಕೆ.ಸ್ವಾಮಿ, ನಿರ್ದೇಶಕರುಗಳಾದ ಟಿ.ಆರ್.ನಟರಾಜು, ಆರ್.ಪ್ರಭು, ಮಹೇಶ್ ಬಾಬು, ವಿನಯ್, ಉಮೇಶ್, ಕುಮಾರಸ್ವಾಮಿ, ಕೆ.ಯು.ನಿಶ್ಚಲ್, ಕೆ.ಎಸ್.ವಿಶ್ವನಾಥ್, ಎಸ್.ವಿ.ತಿಪ್ಪೇಸ್ವಾಮಿ, ಮೆಳೇಹಳ್ಳಿ ಆನಂದ್, ಶೀಲಾಸೋಮಸುಂದರ್, ಎನ್.ಆರ್.ಶಶಿಧರ್, ಎಸ್.ವಿ. ಅಂಬಿಕ ಅವರುಗಳು ಉಪಸ್ಥಿತರಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌