ಸುಶಿಕ್ಷಿತ ರಾಜ್ಯಕ್ಕೆ ವೀರಶೈವ ಸಮಾಜದ ಕೊಡುಗೆ ಅಪಾರ

KannadaprabhaNewsNetwork | Published : Jan 24, 2025 12:45 AM

ಸಾರಾಂಶ

ರಾಜ್ಯವು ಇಂದು ಸುಶಿಕ್ಷಿತ ರಾಜ್ಯವಾಗಲು ವೀರಶೈವ ಸಮಾಜದ ಕೊಡುಗೆ ಅಪಾರ.

ಕಂಪ್ಲಿ: ರಾಜ್ಯವು ಇಂದು ಸುಶಿಕ್ಷಿತ ರಾಜ್ಯವಾಗಲು ವೀರಶೈವ ಸಮಾಜದ ಕೊಡುಗೆ ಅಪಾರ ಎಂದು ಬಳ್ಳಾರಿಯ ಕೊಟ್ಟೂರು ಮಹಾಸ್ವಾಮಿ ಮಠದ ಮುಪ್ಪಿನ ಬಸವಲಿಂಗ ಶ್ರೀ ಹೇಳಿದರು.

ಪಟ್ಟಣದ ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರಿಂದ ಚಾನಾಳ್ ಶೇಖರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹಾಗೂ ಕಂಪ್ಲಿ ಕ್ಷೇತ್ರದಲ್ಲಿ ನೂತನವಾಗಿ ಕೃಷಿ ಪತ್ತಿನ ಸ.ಸಂ.ನಿ. ಮತ್ತು ಎಪಿಎಂಸಿ, ಬಿಡಿಸಿಸಿ ಬ್ಯಾಂಕ್, ಕೃಷಿಕ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಇತರೆ ಚುನಾವಣೆಗಳಲ್ಲಿ ಆಯ್ಕೆಗೊಂಡವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಚಾನಾಳ್ ಶೇಖರ್ ಈ ಹಿಂದೆ ಅಖಿಲ ಭಾರತ ವೀರಶೈವ ಮಹಾ ಸಭಾದ ಅಧ್ಯಕ್ಷರಾಗಿ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಸಮಾಜ ಕಟ್ಟುವಂತಹ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈಗಲೂ ಸಕ್ರಿಯವಾಗಿ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರ ಸೇವೆ ಗುರುತಿಸಿ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿನ ವೀರಶೈವ ಸಮಾಜದ ಮುಖಂಡರು ಸೇರಿ ಅರ್ಥಪೂರ್ಣವಾಗಿ ಅವರ ಜನ್ಮದಿನವನ್ನು ಆಚರಿಸುತ್ತಿರುವುದು ಸಂತೋಷದಾಯಕವಾಗಿದೆ ಎಂದರು.

ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಮುಖಂಡ ಅರವಿ ಬಸವನಗೌಡ ವಹಿಸಿದ್ದರು.

ಅಕ್ಕಿ ಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ವೀರಶೈವ ಲಿಂಗಾಯತ ಸಂಘ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ತಾಪಂ ಸಹಾಯಕ ನಿರ್ದೇಶಕ ಕೆ.ಎಸ್.ಮಲ್ಲನಗೌಡ, ಮುಖಂಡರಾದ ಎಸ್.ಎಸ್.ಚನ್ನಯ್ಯ ಸ್ವಾಮಿ, ಎಚ್.ಶಿವಶಂಕರ್ ಗೌಡ, ಡಿ.ವೀರಪ್ಪ, ಮಾವಿನಹಳ್ಳಿ ಬಸವರಾಜ, ಇಟಗಿ ಬಸವರಾಜ್ ಗೌಡ, ಶಿವಗಂಗಮ್ಮ ಮುಕ್ಕುಂದಿ, ಎಸ್.ಬಿ.ಪಾಟೀಲ್, ಹೊಸಕೋಟೆ ಜಗದೀಶ್, ಬಿ.ವಿ.ಗೌಡ, ಬಳೆ ಮಲ್ಲಿಕಾರ್ಜುನ, ವಿಜಯಲಕ್ಷ್ಮಿ ಮರಿಶೆಟ್ರು, ಕೆ.ರೇಣುಕಗೌಡ, ಜಿ.ಅಮರೇಗೌಡ, ಚಂದ್ರಶೇಖರ ಗೌಡ, ಚಟ್ನಳ್ಳಿ ಶರಣ ಇದ್ದರು.

Share this article