ವೀರಶೈವ ಸಕಲ ಜೀವಾತ್ಮರಿಗೆ ಶಾಂತಿ ಬಯಸುವ ಧರ್ಮ

KannadaprabhaNewsNetwork |  
Published : Mar 25, 2024, 12:49 AM IST
ನರೇಗಲ್ಲ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.ರೇಣುಕಾಚಾರ್ಯರ ಜಯಂತೋತ್ಸವವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಹೆಣ್ಣು ಗಂಡು ಸಮಾನತೆ ಸಾರಿದ ವೀರಶೈವ ಧರ್ಮ ಸದಾ ಕಾಲ ಜೀವಂತ ಇರುವ ಧರ್ಮ ನಿತ್ಯ ಜೀವನದ ಪಾಠ ಕಲಿಸುವ ಧರ್ಮವಾಗಿದೆ

ನರೇಗಲ್ಲ: ವೀರಶೈವ ಧರ್ಮ ಸಕಲ ಜೀವಾತ್ಮರಿಗೆ ಶಾಂತಿ ಬಯಸುವ ಧರ್ಮವಾಗಿದ್ದು, ಈ ಧರ್ಮದ ಆಚರಣೆಯಿಂದ ಸುಖ,ಶಾಂತಿ,ನೆಮ್ಮದಿ ದೊರಕುತ್ತದೆ. ಅದನ್ನು ಜಗತ್ತಿನ ಜನರಿಗೆ ನೀಡಲು ರೇಣುಕಾಚಾರ್ಯರು ಈ ಭೂಮಿಯ ಮೇಲೆ ಉದಯಿಸಿದರು ಎಂದು ನರೇಗಲ್ಲ ಹಿರೇಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಅವರು ಸ್ಥಳೀಯ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಆದಿ ಜಗದ್ಗುರುಗಳ ಜಯಂತಿ ಯುಗಮಾನೋತ್ಸವ ಆಚರಣೆಯಿಂದ ವೀರಶೈವ ಧರ್ಮದ ಪ್ರವರ್ತನೆ ಮತ್ತು ಧರ್ಮ ಜಾಗೃತಿ ಹೆಚ್ಚುತ್ತದೆ. ವೀರಶೈವ ಧರ್ಮ ಮಾನವ ಶ್ರೇಷ್ಠತೆ ಎತ್ತಿ ಹಿಡಿದು, ಮಾನವ ಧರ್ಮಕ್ಕೆ ಸದಾ ಜಯವಾಗಲಿ ಎಂದು ಹೇಳಿದೆ. ಪಂಚ ಆಚಾರ್ಯರು ಮಾನವ ಧರ್ಮದ ಶುದ್ಧಿಕರಣಕ್ಕೆ ಮತ್ತು ಸಂಸ್ಕಾರ, ಸಂಸ್ಕೃತಿ ಆಚರಣೆಗೆ ಆದ್ಯತೆ ನೀಡಿದ್ದಾರೆ. ಜಗದ್ಗುರುಗಳ ಜಯಂತಿ ಆಚರಣೆಯಿಂದ ಜೀವನ ಸಂಸ್ಕಾರಯುಕ್ತವಾಗುತ್ತದೆ. ಧರ್ಮದ ತತ್ವ, ಧರ್ಮದ ಆಚರಣೆ ಕ್ರಮಗಳನ್ನು ಪ್ರತಿಯೊಬ್ಬರು ಮನನ ಮಾಡಿಕೊಳ್ಳಲು ಸದಾವಕಾಶವಾಗಿದೆ ಎಂದು ತಿಳಿಸಿದರು.

ವೀರಶೈವರು ಹಿಂದಿನ ಕಾಲಕ್ಕಿಂತ ಇಂದು ಒಗ್ಗಟ್ಟಾಗುವ ಅಗತ್ಯವಿದೆ. ವೀರಶೈವ ಆಚರಣೆ, ಧರ್ಮದ ಬೆಳವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಯುವ ಸಮೂಹ ವೀರಶೈವ ಧರ್ಮದ ಅಭಿಮಾನ, ಸ್ವಾಭಿಮಾನ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಗ್ರಾಮ, ಮಠಗಳಲ್ಲಿ ಪ್ರತಿ ವರ್ಷ ಜಗದ್ಗುರುಗಳ ಜಯಂತಿ ನಿಮಿತ್ತ ಜಗದ್ಗುರುಗಳ ಜೀವನ ಚರಿತ್ರೆ, ವೀರಶೈವ ಧರ್ಮ ಕುರಿತು ಸಪ್ತ ದಿನಗಳ ಉಪನ್ಯಾಸ ಕಾರ್ಯಕ್ರಮ ಸಂಘಟಿಸಬೇಕು. ಹೆಣ್ಣು ಗಂಡು ಸಮಾನತೆ ಸಾರಿದ ವೀರಶೈವ ಧರ್ಮ ಸದಾ ಕಾಲ ಜೀವಂತ ಇರುವ ಧರ್ಮ ನಿತ್ಯ ಜೀವನದ ಪಾಠ ಕಲಿಸುವ ಧರ್ಮವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯ ಡಾ.ರಾಜೇಂದ್ರ ಗಚ್ಚಿನಮಠ, ಮುಖಂಡ ಶಿವನಗೌಡ ಪಾಟೀಲ, ಮುಖ್ಯ ಶಿಕ್ಷಕಿ ನಿರ್ಮಲಾ ಹಿರೇಮಠ, ರತ್ನಾ ಕುರ್ತಕೋಟಿ, ಸುಮಾ ಕಲ್ಲೂರ, ಅಕ್ಕಮ್ಮ ಬೆಟಗೇರಿ, ಬಸವರಾಜ ತಳ್ಳಿಗೇರಿ, ಗೀತಾ ಕಳಕಾಪೂರ, ಸುಮಾ ಸಂಕನಗೌಡ್ರ, ಜಯಾ ಲಕ್ಕನಗೌಡ, ವಿ.ಬಿ. ಬಿಂಗಿ, ಈಶ್ವರ ಆದಿ, ಪ್ರಶಾಂತ ಹಿರೇಮಠ ಸೇರಿದಂತೆ ಇತರರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ