ಬಳ್ಳಾರಿ: ವೀರವನಿತೆ ಒನಕೆ ಓಬವ್ವಳ ಸಾಹಸ, ದೇಶಪ್ರೇಮ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಮಹಿಳೆಯರು ಓಬವ್ವಳನ್ನು ಮಾದರಿಯನ್ನಾಗಿಸಿಕೊಂಡು ಸಾಧನೆಯ ಹಾದಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮೇಯರ್ ಮುಲ್ಲಂಗಿ ನಂದೀಶ್ ತಿಳಿಸಿದರು.
ಓಬವ್ವ ಅವರ ಸಮಯಪ್ರಜ್ಞೆ, ಧೈರ್ಯದ ಮನೋಭಾವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವೀರವನಿತೆ ಒನಕೆ ಓಬವ್ವನ ವೀರತನ ಎಲ್ಲರಿಗೂ ಮಾದರಿಯಾಗಿದೆ. ಹೆಣ್ಣು ಮಕ್ಕಳು ಓಬವ್ವನ ಧೈರ್ಯ ಮತ್ತು ಸಾಹಸವನ್ನು ಆಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗಂಗಾವತಿಯ ಸಾಹಿತಿ ಹಾಗೂ ಚಿಂತಕರಾದ ಡಾ. ಲಿಂಗಣ್ಣ ಜಂಗಮನಹಳ್ಳಿ ಅವರು ವಿಶೇಷ ಉಪನ್ಯಾಸ ನೀಡಿ, ಸಮಯ ಪ್ರಜ್ಞೆ ಮತ್ತು ಪರಾಕ್ರಮದಿಂದ ವೈರಿ ಸೈನಿಕರನ್ನು ಸದೆಬಡಿದ ಒನಕೆ ಓಬವ್ವ ಇಂದಿನ ಪೀಳಿಗೆಗೆ ಪ್ರೇರಣೆ ಆಗಿದ್ದಾರೆ. ಒನಕೆ ಓಬವ್ವ ಮತ್ತು ಚಿತ್ರದುರ್ಗ ಕೋಟೆಯ ಇತಿಹಾಸ ಹಾಸುಹೊಕ್ಕಾಗಿದೆ. ಹೈದರ್ ಅಲಿಯ ಕ್ರೂರ ಸೈನಿಕರನ್ನು ತನ್ನ ಕೊನೆಯ ಉಸಿರು ಇರುವವರೆಗೂ ಎದುರಿಸಿದ ಕರ್ನಾಟಕದ ಯೋಧೆ ಎಂದೇ ಹೆಸರುವಾಸಿಯಾಗಿದ್ದಾರೆ ಎಂದರು.ಚಿತ್ರದುರ್ಗ ಸಾಮ್ರಾಜ್ಯದಲ್ಲಿ ಹೈದರಾಲಿ ಸೈನ್ಯ ಕೋಟೆಯ ಮೇಲೆ ದಾಳಿ ಮಾಡಿದಾಗ ವೀರತನದಿಂದ ಸೈನ್ಯವನ್ನು ಹಿಮ್ಮೆಟ್ಟಿದ ದಿಟ್ಟ ಮಹಿಳೆ ಎಂದು ತಿಳಿಸಿದ ಅವರು, ನಿಷ್ಠೆ, ಪರಾಕ್ರಮ, ವೀರತನ, ಸಮಯ ಪ್ರಜ್ಞೆಯನ್ನು ಓಬವ್ವನನ್ನು ನೋಡಿ ಕಲಿಯಬೇಕು. ಆ ಸಮಯದಲ್ಲಿ ಓಬವ್ವ ತೋರಿದ ಧೈರ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕವಿತಾ ಗಂಗೂರ್ ತಂಡ ಸುಗಮ ಸಂಗೀತ ನಡೆಸಿಕೊಟ್ಟಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಸೀಲ್ದಾರರಾದ ಗೌಸಿಯಾ ಬೇಗಂ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ, ಬಳ್ಳಾರಿ ಜಿಲ್ಲಾ ಘಟಕ ಛಲವಾದಿ ಮಹಾಸಭಾ ಅಧ್ಯಕ್ಷ ಸಿ.ಶಿವಕುಮಾರ, ಹಿರಿಯ ಸಾಹಿತಿ ಎನ್.ಡಿ. ವೆಂಕಮ್ಮ, ಸಿ.ಮಂಜುನಾಥ ಸೇರಿದಂತೆ ಸಮಾಜದ ಮುಖಂಡರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು, ಇನ್ನಿತರರು ಉಪಸ್ಥಿತರಿದ್ದರು.ಒನಕೆ ಓಬವ್ವನ ಪರಾಕ್ರಮ, ತ್ಯಾಗ ಮಾದರಿ
ಪಟ್ಟಣದ ಪುರಸಭೆ ಕಚೇರಿಯಲ್ಲಿ ಆಚರಿಸಿದ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು. ನಾಡಿನ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಅನನ್ಯ. ಚಿತ್ರದುರ್ಗದ ರಕ್ಷಣೆಯಲ್ಲಿ ಶತ್ರುಗಳನ್ನು ಏಕಾಂಗಿಯಾಗಿ ಎದುರಿಸಿದ ಒನಕೆ ಓಬವ್ವನ ಪರಾಕ್ರಮ ಮತ್ತು ತ್ಯಾಗ ಮಾದರಿಯಾಗಿದೆ ಎಂದರು.