ಹಂಸಭಾವಿಯಲ್ಲಿ ರಸ್ತೆಯಲ್ಲೇ ವಾಹನ ನಿಲುಗಡೆ, ಸಂಚಾರಕ್ಕೆ ತೊಂದರೆ

KannadaprabhaNewsNetwork |  
Published : Mar 21, 2025, 12:31 AM IST
ಪೋಟೊ ಶಿರ್ಷಕೆ13ಎಚ್ ಕೆ ಅರ್ 01 | Kannada Prabha

ಸಾರಾಂಶ

ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಲಾಗುತ್ತದೆ. ರಸ್ತೆಗಳಲ್ಲಿ ಸದಾ ವಾಹನಗಳು ನಿಂತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೂ ಸಂಚಕಾರವಾಗುತ್ತಿದೆ.

ಹಿರೇಕೆರೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದ ವಾಹನಗಳ ನಿಲುಗಡೆ ಸರಿಯಾದ ವ್ಯವಸ್ಥೆ ಇಲ್ಲದ್ದರಿಂದ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ. ಅಲ್ಲದೇ ಹಲವೆಡೆ ರಸ್ತೆಯಲ್ಲೇ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.ತಾಲೂಕಿನ ಹಂಸಭಾವಿ ಗ್ರಾಮದ ಮೃತುಂಜಯ ವಿದ್ಯಾಪೀಠ ಬಳಿ ರಸ್ತೆಯ ಬಳಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುವಂಥಾಗಿದೆ.ಇಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ವಾಹನಗಳನ್ನು ರಸ್ತೆಯಲ್ಲಿಯೇ ಪಾರ್ಕಿಂಗ್ ಮಾಡಲಾಗುತ್ತದೆ. ರಸ್ತೆಗಳಲ್ಲಿ ಸದಾ ವಾಹನಗಳು ನಿಂತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೂ ಸಂಚಕಾರವಾಗುತ್ತಿದೆ. ಇಲ್ಲಿ ಹಂಸಭಾವಿ ವಿದ್ಯಾ ಕಾಶಿ ಎಂದೆ ಹೆಸರು ವಾಸಿಯಾಗಿರುವ ಮೃತ್ಯುಂಜಯ ವಿದ್ಯಾ ಪೀಠದಲ್ಲಿ 3000 ವಿದ್ಯಾರ್ಥಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಶಾಲಾ- ಕಾಲೇಜಿಗೆ ಓಡಾಡುತ್ತಾರೆ. ಮತ್ತೊಂದು ಪ್ರಮುಖವಾಗಿರುವ ರಾಷ್ಟ್ರೀಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡ ಇಲ್ಲಿಯ ಇದ್ದು, ಬ್ಯಾಂಕ್‌ಗೆ ಪ್ರತಿದಿನ ಸಾವಿರಾರು ಜನರು ಬ್ಯಾಂಕ್‌ಗಳ ವ್ಯವಹಾರಕ್ಕೆ ಬಂದು- ಹೋಗುತ್ತಾರೆ. ಆದರೆ ಇಲ್ಲಿ ಸರಿಯಾದ ಬಸ್ ನಿಲುಗಡೆ ಇಲ್ಲದೆ ವಿದ್ಯಾರ್ಥಿಗಳು ರಸ್ತೆಯ ಮೇಲೆ ಬಸ್ಸನ್ನು ಹತ್ತುವುದು ಮತ್ತು ಇಳಿಯುವುದು ಮಾಡುತ್ತಾರೆ ಮತ್ತು ಸದಾ ಜನಜಂಗುಳಿ ಇರುತ್ತವೆ. ಆದರೆ ಈ ರಸ್ತೆಗಳಲ್ಲಿ ನಿತ್ಯ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತದೆ. ಇದರಿಂದ ಪ್ರಯಾಣಿಕರಿಗೆ, ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಹಂಸಭಾವಿ ಗ್ರಾಮವು ಇತ್ತೀಚಿನ ದಿನಗಳಲ್ಲಿ ದೊಡ್ಡ ಗ್ರಾಮವಾಗಿ ಬೆಳೆಯುತ್ತಿದೆ. ಗ್ರಾಮದಲ್ಲಿ ಮೃತ್ಯುಂಜಯ ವಿದ್ಯಾಪೀಠ ಇದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕಾಗಿ ಬರುತಾರೆ. ಇಲ್ಲಿ ಬಸ್‌ ನಿಲ್ದಾಣ ಇಲ್ಲ. ಅದರೆ ಸಾರ್ವಜನಿಕರು ರಸ್ತೆಯ ಅಕ್ಕಪಕ್ಕದ ಬಳಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಿದ್ಯಾರ್ಥಿಗಳು, ವೃದ್ಧರು ಸಂಕಷ್ಟ ಅನುಭವಿಸುವಂಥಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಗಿರೀಶ ಬಾರ್ಕಿ ತಿಳಿಸಿದ್ದಾರೆ.ಪಾಗಲ್ ಪ್ರೇಮಿಯ ಹುಚ್ಚಾಟ: ವಿಡಿಯೋ ವೈರಲ್

ಹಾವೇರಿ: ಯುವತಿಯೊಬ್ಬಳ ಹಿಂದೆ ಬಿದ್ದ ಪಾಗಲ್ ಪ್ರೇಮಿಯೊಬ್ಬ ನಗರದಲ್ಲಿ ಯುವತಿ ತಂಗಿದ್ದ ಮನೆಗೆ ತೆರಳಿ ಪ್ರೀತ್ಸೆ...ಪ್ರೀತ್ಸೆ.. ಅಂತಾ ಕೈಮುಗಿದು ಗೋಗರೆಯುವ ವಿಡಿಯೋ ವೈರಲ್ ಆಗಿದೆ.ಪ್ರಮೋದ ಎಂಬ ಯುವಕ ಯುವತಿಯನ್ನು ಪ್ರೀತಿಸಿದ್ದ. ಯುವತಿ ತಂಗಿದ್ದ ಬಾಡಿಗೆ ನಿವಾಸದ ಬಳಿ ತೆರಳಿ ಪ್ರೀತ್ಸೆ, ಪ್ರೀತ್ಸೆ ಎಂದು ರಂಪಾಟ ಮಾಡಿದ್ದ. ಕೈಮುಗಿಯುವೆ, ಕಾಲಿಗೆ ಬೀಳುವೆ ಪ್ರೀತ್ಸೆ ಅಂತಾ ಬೇಡಿಕೊಂಡಿದ್ದ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಶಹರ ಠಾಣೆ ಪೊಲೀಸರು ಯುವಕ- ಯುವತಿಯನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎನ್ನಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಎಷ್ಟು ಕೇಸ್‌ ಸಿಬಿಐಗೆ ನೀಡಿದೆ? : ಸಿಎಂ
ರಾಷ್ಟ್ರಧ್ವಜ ತಯಾರಿಸ್ತಿ ದ್ದ ಕೈಗಳಲ್ಲೀಗ ಕೆಲಸವಿಲ್ಲ!