ಕನ್ನಡಪ್ರಭ ವಾರ್ತೆ ಶಿರಾ ಕಳೆದ ೨೨ ವರ್ಷಗಳಿಂದ ಸತತವಾಗಿ ಶಿರಾ ಭಾಗಕ್ಕೆ ಹೇಮಾವತಿ ನೀರು ಹರಿದ ಕಾರಣ ಶಿರಾ ನಗರ ವೇಗವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗಿದೆ. ಈಗ ಕೇಂದ್ರ ಸರ್ಕಾರ ಜಾರಿ ಮಾಡಿರುವ ಜೆಜೆಎಂ ಯೋಜನೆಯಡಿ ೮೫ಕೋಟಿ ರುಪಾಯಿ ವೆಚ್ಚದಲ್ಲಿ ಮನೆ ಮನೆಗೂ ನೀರು ನೀಡುವಂತಹ ಮಹತ್ವದ ಕೆಲಸ ಸರ್ಕಾರ ಮಾಡುತ್ತಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ಅವರು ನಗರದ ಜಾಮಿಯಾ ಶಾದಿ ಮಹಲ್ ನಲ್ಲಿ ದಿ.ಅಲ್ಲಾ ಭಕ್ಷ ಪ್ಯಾರು ಅವರ ೨ನೇ ವರ್ಷದ ಸ್ಮರಣಾರ್ಥ ಝೆಡ್ ಬಿ ಎಸ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗರದ ಜನರ ಕುಡಿಯುವ ನೀರಿನ ದಾಹ ನೀಗಿಸುವ ಹೇಮಾವತಿ ನೀರು ಶಿರಾ ದೊಡ್ಡ ಕೆರೆಯತ್ತ ಹರಿಯುತ್ತಿದ್ದು, ದೊಡ್ಡ ಕೆರೆ ಭರ್ತಿಯಾದ ತಕ್ಷಣ ಮದಲೂರು ಕೆರೆಗೆ ನೀರು ಹರಿಯಲಿದೆ. ಕಾಂಗ್ರೆಸ್ ಪಕ್ಷ ದಿವಂಗತ ಅಲ್ಲಾ ಭಕ್ಷ ಪ್ಯಾರು ಅವರ ಸೇವೆಯನ್ನು ಎಂದು ಮರೆಯಲು ಸಾಧ್ಯವಿಲ್ಲ, ತಂದೆಯ ಹಾದಿಯಲ್ಲಿ ಶಿರಾ ನಗರಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಸಹೋದರರು ಸಮಾಜಮುಖಿ ಚಿಂತನೆಯೊಂದಿಗೆ ಅಂಬುಲೆನ್ಸ್ ಸೇವೆ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಮಾಜ ಸೇವೆ ಮಾಡುತ್ತಿದೆ. ಸಾಮಾಜಿಕ ಕಳಕಳಿರುವ ಪ್ರತಿಯೊಬ್ಬ ತಂದೆಗೆ ಇಂತಹ ಮಕ್ಕಳು ಇದ್ದರೆ, ಸಮಾಜದ ಅಭಿವೃದ್ಧಿಗೆ ಬಹುದೊಡ್ಡ ಹುಡುಗಿ ಸಿಗಲಿದೆ. ಝೆಡ್ ಬಿ ಎಸ್ ಗ್ರೂಫ್ ಜನಪರ ಸೇವೆ ಮೆಚ್ಚುವಂತಹದ್ದು, ಅಲ್ಪಸಂಖ್ಯಾತರು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಶಿರಾದಲ್ಲಿ ಮತ್ತೊಂದು ಮೌಲಾನಾ ಆಜಾದ್ ಶಾಲೆ ಮಂಜೂರು ಮಾಡಲಾಗಿದೆ ಎಂದರು. ನಗರ ಸಭೆ ಅಧ್ಯಕ್ಷ ಜಿಶಾನ್ ಮೊಹಮ್ಮದ್ ಮಾತನಾಡಿ ಬಡವರು, ಕಷ್ಟದಲ್ಲಿರುವ ವ್ಯಕ್ತಿಗಳು, ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಗುರಿ ಸದಾ ನಿಮ್ಮದಾಗಿರಬೇಕು ಎಂದು ನಮ್ಮ ತಂದೆ ಅಲ್ಲಾ ಬಕಷ್ ಪ್ಯಾರು ಅವರು ಹೇಳುತ್ತಿದ್ದರು, ಅವರ ಕನಸು ಸಾಕಾರಗೊಳಿಸಲು ಇಂತಹ ಸಮಾಜ ಮುಖಿ ಚಿಂತನೆಯ ಸೇವೆಗಳನ್ನು ಮಾಡುತ್ತಿದ್ದೇವೆ, ಇಂತಹ ಸೇವೆಗಳು ಸದಾ ಕಾಲಕ್ಕೂ ಇರಲಿವೆ ಎಂದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ೨೦೦. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕ ನೆರವು ನೀಡಲಾಯಿತು. ನಗರಸಭೆ ಸದಸ್ಯ ಬರಾನ್ ಮೊಹಮ್ಮದ್ , ಝೆಡ್ ಬಿಎಸ್ ಗ್ರೂಪ್ ನ ಸಲ್ಮಾನ್ ಮೊಹಮ್ಮದ್, ಕಾಂಗ್ರೆಸ್ ಯುವ ನಾಯಕ ಸಂಜಯ್ ಜಯಚಂದ್ರ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಎಸ್. ಅಜಯ್ ಕುಮಾರ್, ಸದಸ್ಯರಾದ ರಫಿಉಲ್ಲಾ, ಮಾಜಿ ನಗರ ಸಭೆ ಸದಸ್ಯ ಹಬೀಬ್ ಖಾನ್, ನಗರಸಭೆ ಪೌರಾಯುಕ್ತ ರುದ್ರೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿ, ಕಾಂಗ್ರೆಸ್ ಮುಖಂಡ ಕೊಟ್ಟ ಶಂಕರ್, ಡಿ.ಸಿ.ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಸತ್ಯನಾರಾಯಣ, ಪಿ.ಬಿ.ನರಸಿಂಹಯ್ಯ, ವಕೀಲ ಗುರುಮೂರ್ತಿ, ನಗರಸಭೆ ಮಾಜಿ ಸದಸ್ಯ ಶೇಕ್ ಅಹಮದಿ, ಮುಖಂಡ ಮಜರ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದೀನ್, ಫರ್ಮಾನ್, ರಘು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.