ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕೋಲಾರ ತಾಲೂಕಿನ ವೇಮಗಲ್- ಕುರಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ಸೋ ಬೆಂಬಲಿ ಅಭ್ಯರ್ಥಿಗ ಸೋಲಿಗೆ ಅಲ್ಲಿನ ಶಾಸಕರ ಹಿಟ್ಲರ್ ಧೋರಣೆಯೇ ಕಾರಣ. ಹಿಂದುಳಿದ ಹಾಗೂ ದಲಿತರನ್ನು ಕಡೆಗಣಿಸಿದರೆ ಮುಂದೆ ಸಹ ಇದೇ ರೀತಿಯ ಫಲಿತಾಂಶ ಖಚಿತ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸ್ವಪಕ್ಷದ ಶಾಸಕರ ವಿರುದ್ಧವೇ ಕಿಡಿಕಾರಿದರು.ದೇವರಾಜ ಅರಸು ಜಯಂತಿಯಲ್ಲಿ ಮಾತನಾಡಿದ ಅವರು, ವೇಮಗಲ್ ಪಟ್ಟಣ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮತ್ತು ತಂಡದವರೇ ಕಾರಣರಾಗಿದ್ದಾರೆ. ಅಹಂಕಾರದಿಂದ ನಡೆಯುವವರನ್ನು ಜನ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ದಲಿತರನ್ನು ಧಿಕ್ಕರಿಸಿದ ಫಲದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾ ತರನ್ನು ಧಿಕ್ಕರಿಸಿ ಚುನಾವಣೆ ನಡೆಸಿದರೆ ವೇಮಗಲ್ಲಿನ ರೀತಿಯಲ್ಲಿಯೇ ಫಲಿತಾಂಶ ಬರುವುದು ಶತಸಿದ್ಧ. ನಾನು ಅನ್ನೋ ಅಹಂಭಾವದಿಂದ ಮೆರೆಯಬಾರದು. ಅಭಿವೃದ್ಧಿ ಮಾಡಿ ಮೆರೆಯಬೇಕು. ಕೋಲಾರದಲ್ಲಿ ಒಬ್ಬ ದಲಿತ ಶಾಸಕನಿದ್ದೇನೆ. ಸೌಜನ್ಯಕ್ಕೂ ಚುನಾವಣಾ ಪ್ರಚಾರಕ್ಕೆ ತಮ್ಮನ್ನು ಆಹ್ವಾನಿಸಿಲ್ಲ. ಈ ಚುನಾವಣಾ ಫಲಿತಾಂಶ ಒಂದು ಎಚ್ಚರಿಕೆಯ ಗಂಟೆ. ಎಲ್ಲ ನನ್ನದೆ ಎಂದು ಬಿಂಬಿಸಿಕೊಳ್ಳುವವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ವೇಮಗಲ್ ಪಟ್ಟಣ ಪಂಚಾಯತಿ ಫಲಿತಾಂಶ ಕಂಡು ನನಗೆ ಬಹಳ ನೋವಾಗಿದೆ. ಜಿಲ್ಲೆಯಲ್ಲಿ ನಾನೊಬ್ಬ ದಲಿತ ಶಾಸಕನಾಗಿದ್ದೇನೆ. ಸೌಜನ್ಯಕ್ಕಾದರೂ ಚುನಾವಣೆ ಪ್ರಚಾರಕ್ಕೆ ತಮ್ಮನ್ನು ಆಹ್ವಾನಿಸಲಿಲ್ಲ. ಅದರ ಪ್ರತಿಫಲ ಚುನಾವಣಾ ಫಲಿತಾಂಶದಲ್ಲಿ ನಮ್ಮ ಪಕ್ಷ ಎರಡನೇ ಸ್ಥಾನಕ್ಕೆ ಬಂದಿರುವುದು ಬಹಳ ನೋವುಂಟು ಮಾಡಿದೆ ಎಂದರು.ದಲಿತರ ಅಭಿವೃದ್ಧಿಗೆ ಶ್ರಮಿಸಿದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರನ್ನು ನಿರ್ಲಕ್ಷ್ಯ ಮಾಡಿದರೆ, ತಾವೂ ಸೇರಿದಂತೆ ಚುನಾವಣೆಗಳಲ್ಲಿ ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದ ವರ್ಗದವರನ್ನು ಕಡೆಗಣಿಸದೇ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಹಾಯ ಹಸ್ತ ನೀಡಿ ಮುಂದೆ ಸಾಗಬೇಕಾಗಿದೆ. ಇಲ್ಲದೇ ಹೋದರೆ ನನ್ನನ್ನೂ ಸೇರಿಕೊಂಡು ಮುಂದಿನ ದಿನಗಳಲ್ಲಿ ಎಲ್ಲರಿಗೂ ಇದೇ ಗತಿಯಾಗಲಿದೆ ಎಂದು ಎಚ್ಚರಿಸಿದರು.
ಮೈತ್ರಿಕೂಟಕ್ಕೆ ಗೆಲವುವೇಮಗಲ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಬೆಂಬಲಿತ 10 ಅಭ್ಯರ್ಥಿಗಳು ಜಯಗಳಿಸಿದ್ದರೆ, ಕಾಂಗ್ರೆಸ್ ಬೆಂಬಲಿತ 6 ಮಂದಿ ಮಾತ್ರ ಗೆಲವು ಸಾಧಿಸಿದ್ದಾರೆ. ಒಂದು ಸ್ಥಾನ ಪಕ್ಷೇತರರ ಪಾಲಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಶಾಸಕ ನಾರಾಯಾಣಸ್ವಾಮಿ ತಮ್ಮ ಪಕ್ಷದ ಶಾಸಕರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ.