ಮನಸೂರ ಟ್ರಸ್ಟ್‌ಗೆ ವೆಂಕಟೇಶ ಅಧ್ಯಕ್ಷಬೇಂದ್ರ ಟ್ರಸ್ಟ್‌ಗೆ ಡಾ। ಸರಜೂ ಮುಖ್ಯಸ್ಥ

KannadaprabhaNewsNetwork |  
Published : Aug 20, 2025, 01:30 AM IST

ಸಾರಾಂಶ

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿವಿಧ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿವಿಧ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಡಾ.ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಅಧ್ಯಕ್ಷರಾಗಿ ಪಂಡಿತ್‌ ಎಂ.ವೆಂಕಟೇಶಕುಮಾರ್‌, ಸದಸ್ಯರಾಗಿ ಡಾ.ಶಕ್ತಿ ಪಾಟೀಲ, ಉಸ್ತಾದ್ ಶಫೀಕ್‌ ಖಾನ್‌, ಡಾ.ಪರಶುರಾಮ ಕಟ್ಟಿಸಂಗಾವಿ, ಡಾ.ಚಂದ್ರಿಕಾ ಕಾಮತ್‌, ಯಾದವೇಂದ್ರ ಪೂಜಾರ, ಅಕ್ಕಮಹಾದೇವಿ ಆಲೂರ, ಗುರುಪ್ರಸಾದ್‌ ಹೆಗಡೆ ಅವರನ್ನು ನೇಮಕ ಮಾಡಲಾಗಿದೆ.

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಅಧ್ಯಕ್ಷರಾಗಿ ಡಾ.ಸರಜೂ ಕಾಟ್ಕರ್‌, ಸದಸ್ಯರಾಗಿ ಡಾ.ವೈ.ಎಂ.ಯಾಕೊಳ್ಳಿ, ಡಾ.ಅಶೋಕ ಶೆಟ್ಟರ, ಶೀಲಾಧರ ಮುಗಳಿ, ಡಾ.ಶರಣಮ್ಮ ಗೊರೆಬಾಳ, ಪ್ರಭು ಕುಂದರಗಿ, ಪುನರ್ವಸು ಪಾಂಡುರಂಗ ಬೇಂದ್ರೆ, ಇಮಾಮಸಾಬ ವಲ್ಲೇಪ್ಪನವರ ಅವರನ್ನು ನೇಮಿಸಲಾಗಿದೆ.

ಸ್ವರ ಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಅಧ್ಯಕ್ಷರಾಗಿ ಪಂ.ಕೈವಲ್ಯ ಕುಮಾರ ಗುರವ, ಸದಸ್ಯರಾಗಿ ಪಂ.ಸಾತಲಿಂಗಪ್ಪ ಕಲ್ಲೂರ ದೇಸಾಯಿ, ನಿಜಗುಣಿ ರಾಜಗುರು, ಛೋಟೆ ರಹಿಮತ್‌ಖಾನ್‌, ಡಾ.ಅಶೋಕ ಹುಗ್ಗಣ್ಣವರ, ಡಾ.ಅನಿಲ ಮೇತ್ರಿ, ಅಲ್ಲಮಪ್ರಭು ಕಡಕೋಳ, ಸುಪ್ರಿಯಾ ಭಟ್‌ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಡಾ.ರಂಜಾನ ದರ್ಗಾ - ಅಧ್ಯಕ್ಷ ಹಾಗೂ ಡಾ.ದೀಪಕ ಆಲೂರು, ವಿಶ್ವನಾಥ ಕುಲಕರ್ಣಿ, ಡಾ.ಸಿ.ಯು.ಬೆಳ್ಳಕ್ಕಿ, ಡಾ.ಪ್ರಕಾಶ ಉಡಕೇರಿ, ದ್ರೌಪದಿ ವಿಜಾಪುರ, ಬಸವರಾಜ ಸೂಳಿಭಾವಿ, ಸುನಂದಾ ಕಡಮೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.

ಚಿತ್ರಕಲಾ ಶಿಲ್ಪಿ ಡಿ.ವ್ಹಿ.ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌: ಬಿ.ಮಾರುತಿ- ಅಧ್ಯಕ್ಷ ಮತ್ತು ಸುರೇಶ ಹಾಲಭಾವಿ, ಎಫ್‌.ವಿ.ಚಿಕ್ಕಮಠ, ಡಿ.ಎಂ.ಬಡಿಗೇರ, ಡಾ.ಬಿ.ಎಲ್‌.ಚವ್ಹಾಣ, ಡಾ.ಬಿ.ಎಚ್‌.ಕುರಿಯವರ, ಎಸ್‌.ಕೆ.ಪತ್ತಾರ, ರೇಣುಕಾ ಮಾರ್ಕಂಡೇಯ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ಟ್ರಸ್ಟ್‌ಗಳಿಗೆ ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಹಾವೇರಿ ಜಿಲ್ಲೆಯಲ್ಲಿರುವ ಶ್ರೀ ಗಳಗನಾಥ ಮತ್ತು ನಾ.ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾಗಿ ಡಾ.ಕೆ.ಆರ್‌.ಕಮಲೇಶ, ಸದಸ್ಯರಾಗಿ ವಸಂತ ರಾಜಪುರೋಹಿತ, ವೆಂಕಟೇಶ ಗಳಗನಾಥ, ಕೊಟ್ರೇಶಪ್ಪ ಬಸೆಗಣ್ಣಿ, ವೆಂಕಟೇಶ ಮಾಚಕನೂರ, ಡಾ.ರೇವಯ್ಯ ಒಡೆಯರ್‌, ರಾಜೇಸಾಬ ನದಾಫ್‌, ಉಮೇಶ ಬಳಿಗಾರ, ರೇಣುಕಾ ಗುಡಿಮನಿ, ಪ್ರಮೋದ ನೆಲವಾಗಲು ಮತ್ತು ಸದಸ್ಯ ಕಾರ್ಯದರ್ಶಿಯಾಗಿ ಹಾವೇರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ