ಪ್ರತಿಕ್ಷಣವೂ ಪರಮಾತ್ಮನಸ್ಮರಣೆ ಮಾಡಬೇಕು. ದುರ್ಜನರ ಸಂಘ ಬಿಡಬೇಕು. ಕೆಟ್ಟತನ ಬಿಟ್ಟು ಸತ್ಸಂಗ ಹಿಡಿಯಬೇಕು. ಬೇರೆಯವರಬಗ್ಗೆ ಅನಾವಶ್ಯಕವಾಗಿ ಚಿಂತನೆ ಮಾಡದೆ ಸದಾ ಪತಮಾತ್ಮನ ಧ್ಯಾನದಲ್ಲಿ ತೊಡಗಬೇಕು. ಇತ್ತೀಚಿನ ದಿನಗಳಲ್ಲಿ ಟಿವಿ, ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳಿಂದಾಗಿ ಬರೀ ಕೆಟ್ಟದ್ದನ್ನೇಕೇಳಿ ಎಲ್ಲರ ಮನಸ್ಸು ವಿಕಾರಗೊಂಡಿದೆ. ಎಲ್ಲರೂ ಅಸೂಯಾಪರರಾಗಿಬಿಟ್ಟಿದ್ದಾರೆ. ಎಲ್ಲೂ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ.
ನಂತರ ಕಾರ್ಯಸಿದ್ಧಿ ಹನುಮಾನ್ ಮಂದಿರದ ಮುಂಭಾಗ ಸ್ಥಾಪಿಸಿರುವ ಸ್ವಾಮಿಗೆ ಗಣಪತಿಸಚ್ಚಿದಾನಂದಸ್ವಾಮೀಜಿ ಅವರು ಅರ್ಚನೆ ಮತ್ತು ಪೂಜಾ ಕಾರ್ಯ ನೆರವೇರಿಸಿದರು. ಶ್ರೀಗಳಿಗೆ ಕಿರಿಯಶ್ರೀಗಳಾದಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ನೆರವಾದರು.
ಈ ವೇಳೆ ಪ್ರವಚಕ ಅರಳು ಮಲ್ಲಿಗೆ ಪಾರ್ಥಸಾರಥಿ ಅವರು ಆಧ್ಯಾತ್ಮಿಕ ಪ್ರವಚನ ನಡೆಸಿಕೊಟ್ಟರು. ಕಲಿಯುಗದಲ್ಲಿಆ ವೆಂಕಟೇಶ್ವರನ ಸ್ಮರಣೆಯೊಂದೇ ನಮಗೆಲ್ಲರಿಗೂಆಸರೆಎಂದು ಹೇಳಿದರು.
ನಾವೆಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಪ ಕಾರ್ಯಗಳನ್ನು ಮಾಡಿರುತ್ತೇವೆ. ಹಾಗಾಗಿಯೇ ಇಂದು ತೊಂದರೆ, ಸಂಕಟ ಅನುಭವಿಸುತ್ತಿದ್ದೇವೆ. ಈ ಪಾಪಗಳು ಹೋಗಬೇಕಾದರೆವೆಂಕಟರಮಣನಿಂದಮಾತ್ರಸಾಧ್ಯ ಎಂದು ಅವರು ತಿಳಿಸಿದರು.
ಪ್ರತಿಕ್ಷಣ ಪರಮಾತ್ಮನಸ್ಮರಣೆ ಮಾಡಬೇಕು, ದುರ್ಜನರ ಸಂಘ ಬಿಡಬೇಕು. ಕೆಟ್ಟತನ ಬಿಟ್ಟು ಸತ್ಸಂಗ ಹಿಡಿಯಬೇಕು. ಬೇರೆಯವರಬಗ್ಗೆ ಅನಾವಶ್ಯಕವಾಗಿ ಚಿಂತನೆ ಮಾಡದೆ ಸದಾ ಪತಮಾತ್ಮನ ಧ್ಯಾನದಲ್ಲಿ ತೊಡಗಬೇಕು ಎಂದು ಅವರು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಟಿವಿ, ಸಾಮಾಜಿಕ ಜಾಲತಾಣಗಳು, ಪತ್ರಿಕೆಗಳಿಂದಾಗಿ ಬರೀ ಕೆಟ್ಟದ್ದನ್ನೇಕೇಳಿ ಎಲ್ಲರ ಮನಸ್ಸು ವಿಕಾರಗೊಂಡಿದೆ. ಎಲ್ಲರೂ ಅಸೂಯಾಪರರಾಗಿಬಿಟ್ಟಿದ್ದಾರೆ. ಎಲ್ಲೂ ಶಾಂತಿ, ನೆಮ್ಮದಿಇಲ್ಲದಂತಾಗಿದೆ ಎಂದು ಅರಳು ಮಲ್ಲಿಗೆಪಾರ್ಥಸಾರಥಿ ಅವರು ಬೇಸರವ್ಯಕ್ತಪಡಿಸಿದರು.
ಇಂತಹ ಕೆಟ್ಟಸಂದರ್ಭದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಸದಾಚಾರ ತಿಳಿಸಿಕೊಡುತ್ತಿದ್ದಾರೆ. ಅವರ ದರ್ಶನದಿಂದ ಜೀವನದಲ್ಲಿ ಧನ್ಯತೆಸಿಗುತ್ತದೆ ಎಂದು ಅವರು ತಿಳಿಸಿದರು.
ದೇವರ ಸ್ಮರಣೆ ನಿತ್ಯಸ್ಮರಣೆಆಗಬೇಕು. ಓಂ ನಮೋವೆಂಕಟೇಶ್ವರಾಯ ನಮಃ ಪಠಿಸಬೇಕುಆಗ ಶ್ರೀ ದತ್ತ ವೆಂಕಟೇಶ್ವರ ಎಲ್ಲಪಾಪತೊಡೆದು ಹಾಕುತ್ತಾನೆ ಎಂದು ಅವರು ತಿಳಿ ಹೇಳಿದರು.
ಗಣಪತಿ ಶ್ರೀಗಳು ಇಡೀ ಪ್ರಪಂಚ ಸುತ್ತಿದ್ದಾರೆ. ಎಲ್ಲಾ ಕಡೆ ನಮ್ಮ ಸಂಸ್ಕೃತಿಯನ್ನು ಮತ್ತು ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದಾರೆ. ಅಮೇರಿಕಾದ ಡಲ್ಲಾಸ್ ನಲ್ಲಿ 10 ಸಾವಿರ ಮಂದಿ ಒಂದೇವೇದಿಕೆಯಲ್ಲಿ ಭಗವದ್ಗೀತಾ ಪಠಣ ಮಾಡಿದ್ದುಇತಿಹಾಸ ಸೃಷ್ಟಿಸಿದೆ. ದಾಖಲೆ ನಿರ್ಮಿಸಿದೆ ಎಂದು ಶ್ರೀಗಳ ಸಾಧನೆಯನ್ನು ಪಾರ್ಥಸಾರಥಿ ಕೊಂಡಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.