ಕೆರೆ ಸ್ವಚ್ಛತೆಗೆ ಸ್ಮಾರ್ಟ್ ಲೇಕ್ ಕ್ಲೀನಿಂಗ್ ಯಂತ್ರ

KannadaprabhaNewsNetwork |  
Published : May 24, 2024, 12:48 AM IST
ಪೊಟೋ 23ಎಸ್‌ಎಂಜಿಕೆಪಿ04 : ಶಿವಮೊಗ್ಗದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್‌ ಸೈನ್ಸ್‌ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಲೇಕ್‌ ಕ್ಲಿನಿಂಗ್‌ ಸಿಸ್ಟಮ್‌ ಯೋಜನೆಯನ್ನುರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಸೇರಿದಂತೆ ಅತಿಥಿಗಳು ವೀಕ್ಷಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್‌ ಸೈನ್ಸ್‌ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ನಾವೀನ್ಯ ಯೋಜನೆಗಳ ಪ್ರದರ್ಶಿಸಿದ ವಿದ್ಯಾರ್ಥಿಗಳು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆಯಾಗಿದ್ದು, ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್‌ ನಂತಹ ತ್ಯಾಜ್ಯ ವಸ್ತುಗಳನ್ನು ಸ್ವಯಂಚಾಲಿತ ಯಂತ್ರವೊಂದು ಸ್ವಚ್ಛ ಮಾಡುವುದಾದರೆ, ಅಂತಹ ನಾವೀನ್ಯ ಪರಿಕಲ್ಪನೆಯೊಂದಿಗೆ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಅರ್ಜುನ್‌.ಸಿ, ಮೊಹಮದ್‌ ಸಾಹಿಲ್‌, ಜಾಗೃತಿ ಬಾಯಿ, ಸುಪ್ರಿತಾ ಪಾಟೀಲ್‌ ತಂಡ ಸಹ ಪ್ರಾಧ್ಯಾಪಕಿ ಆಯಿಷಾ ಸಿದ್ದಿಕಾ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ, ಐಓಟಿ ತಂತ್ರಜ್ಞಾನದ ಮೂಲಕ ತ್ಯಾಜ್ಯಗಳನ್ನು ಪತ್ತೆ ಮಾಡಿ ಸ್ವಯಂಚಾಲಿತವಾಗಿ ಕೆರೆಗಳನ್ನು ಸ್ವಚ್ಚಗೊಳಿಸುವ ಯಂತ್ರದ ಪ್ರಾತ್ಯಾಕ್ಷಿಕೆ ನೋಡುಗರ ಗಮನ ಸೆಳೆಯಿತು.

ನಗರದ ಜೆ.ಎನ್.ಎನ್‌ ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್‌ ಸೈನ್ಸ್‌ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ನಾವೀನ್ಯ ಯೋಜನೆಗಳನ್ನು ಪ್ರದರ್ಶಿಸಿದರು.

ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ನಡೆದಾಗ ಕೃತಕ ಬುದ್ಧಿಮತ್ತೆ ಮೂಲಕ ತಕ್ಷಣ ಕಂಟ್ರೋಲ್‌ ರೂಂಗೆ ಮಾಹಿತಿ ನೀಡುವ ಸಿಸಿ ಕ್ಯಾಮೆರಾಗಳು, ಕ್ಷ-ಕಿರಣದಿಂದ ಸ್ವಯಂಚಾಲಿತ ನ್ಯುಮೋನಿಯಾ ಪತ್ತೆ ಹಚ್ಚುವ ತಂತ್ರಜ್ಞಾನ, ಸ್ಮಾರ್ಟ್‌ ಟ್ರಾಫಿಕ್‌ ಸಿಗ್ನಲ್‌ ನಿರ್ವಹಣೆ, ಎಐ ತಂತ್ರಜ್ಞಾನದ ಮೂಲಕ ಅಂಧರಿಗೆ ಸ್ಮಾರ್ಟ್‌ ಬುಕ್‌ ರೀಡರ್‌, ನವೀನ ಆಟಗಳ ಆಧಾರದ ಮೇಲೆ ಮಾಹಿತಿ ಸುರಕ್ಷಿತಗೊಳಿಸುವ ವ್ಯವಸ್ಥೆ, ಅಕ್ಷನ್‌ ವೊಕ್ಯಾಲೈಜರ್‌, ವಿಡಿಯೊ ಸ್ಟೆಗ್ನೊಗ್ರಾಫಿ ಸೇರಿ ಅನೇಕ ನಾವೀನ್ಯ ಯೋಜನೆಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಲೇಕ್‌ ಕ್ಲಿನಿಂಗ್‌ ಸಿಸ್ಟಮ್‌ (ಪ್ರಥಮ ಬಹುಮಾನ), ವಿದ್ಯಾರ್ಥಿಗಳಾದ ಭಾವನಾ.ಆರ್.ಎಂ, ದತ್ತಾತ್ರಿ ಕೃಷ್ಣ, ನಿಸರ್ಗ.ಎಸ್‌, ಪೂಜ.ಬಿ ತಂಡ ವಿಭಾಗದ ಮುಖ್ಯಸ್ಥ ಜಲೇಶ್‌ ಕುಮಾರ್‌ ಮಾರ್ಗದರ್ಶನದಲ್ಲಿ ರೂಪಿಸಿದ ಇಂಟಲಿಜೆಂಟ್‌ ಸಿಸ್ಟಮ್‌ ಟು ಸೆಕ್ಯೂರ್‌ ಇನ್ಫಾರ್ಮೇಶನ್‌ ಬೆಸ್ಡ್ ಆನ್‌ ಇನೊವೇಟಿವ್ ಗೇಮ್ಸ್‌ (ದ್ವಿತೀಯ ಬಹುಮಾನ), ‌ರುಚಿತಾ.ಎಸ್.ಆರ್‌,‌ ಸಿರಿ.ಕೆ, ಸ್ನೇಹ.ಎಸ್.ಆರ್‌, ವಿಭಾ.ಜಿ.ಎಂ ತಂಡ ಪ್ರಾಧ್ಯಾಪಕಿ ಪೂರ್ಣಿಮಾ.ಕೆ.ಎಂ ಮಾರ್ಗದರ್ಶನದಲ್ಲಿ ನಿರ್ಮಿಸಿದ ರೇಟಿಂಗ್‌ ಬೆಸ್ಢ್ ಆನ್‌ ಯುಟ್ಯೂಬ್‌ ಕಮೆಂಟ್ಸ್‌ (ತೃತೀಯ ಬಹುಮಾನ) ಪಡೆದಿದೆ.

ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪಿಡ್ಲ್ಯುಸಿ ಕಂಪನಿ ಪ್ರಾಜೆಕ್ಟ್‌ ಮ್ಯಾನೇಜರ್‌ ಡಿ.ಆರ್.ರಾಘವೇಂದ್ರ, ಸ್ಯಾಪ್‌ ಅರೆಬಿಯಾ ಕಂಪನಿ ಪ್ರಾಡಕ್ಟ್‌ ಎಕ್ಸ್‌ಪರ್ಟ್‌ ಭರತ್‌ ಗುಪ್ತಾ, ಶೈಕ್ಷಣಿಕ ಡೀನ್‌ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್‌ ಡಾ.ಎಸ್.ವಿ.ಸತ್ಯನಾರಾಯಣ, ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್‌ ಕುಮಾರ್‌, ಸಂಯೋಜಕರಾದ ಡಾ.ಪೂರ್ಣಿಮಾ, ಡಾ.ಗಾನವಿ, ಹಿರಿಯಣ್ಣ, ಪುಷ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ