ವಚನಗಳು ಬದುಕಿಗೆ ದಾರಿದೀಪ: ಡಾ. ಕಸ್ತೂರಿ ದಳವಾಯಿ

KannadaprabhaNewsNetwork |  
Published : Jun 08, 2026, 03:30 AM IST
ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಶರಣರು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆ, ಪ್ರೀತಿಯ ಸಂದೇಶವನ್ನು ಸಾರಿದರು. ಯಾವುದೇ ಕೆಲಸವನ್ನು ಕೀಳೆಂದು ಭಾವಿಸದೆ, ಕಾಯಕವೇ ಕೈಲಾಸವಾಗಬೇಕು.

ಗದಗ: 12ನೇ ಶತಮಾನ ವಿಶಿಷ್ಟವಾದ ಶತಮಾನವಾಗಿದ್ದು, ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ ಕಾಲ ಅದಾಗಿತ್ತು. ಕಾರಣ ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಮನುಷ್ಯನ ಬದುಕನ್ನು ಹಸನುಗೊಳಿಸಿದರು ಎಂದು ಡಾ. ಕಸ್ತೂರಿ ದಳವಾಯಿ ತಿಳಿಸಿದರು.ತಾಲೂಕು ಶರಣ ಸಾಹಿತ್ಯ ಪರಿಷತ್, ತಾಲೂಕು ಕದಳಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಹಾಗೂ ಲಿಂ. ಶರಣ ಪಾಂಡುರಂಗ ಕೂರಾ ಅವರ ಸ್ಮರಣಾರ್ಥ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಎಂಬ ವಿಷಯದ ಕುರಿತು ಮಾತನಾಡಿದರು.

ಶರಣರು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯಗಳನ್ನು ವಿರೋಧಿಸಿ ಸಮಾನತೆ, ಪ್ರೀತಿಯ ಸಂದೇಶವನ್ನು ಸಾರಿದರು. ಯಾವುದೇ ಕೆಲಸವನ್ನು ಕೀಳೆಂದು ಭಾವಿಸದೆ, ಕಾಯಕವೇ ಕೈಲಾಸವಾಗಬೇಕು. ನಡೆ- ನುಡಿ ಸಾಮರಸ್ಯದ ಮುಖೇನ ನೈತಿಕತೆ ಮತ್ತು ಪ್ರಾಮಾಣಿಕತೆ ಕಡೆಗೆ ನಾವೆಲ್ಲ ಸಾಗಬೇಕು. ಕನಿಷ್ಠ ಎರಡು ವಚನಗಳನ್ನು ಓದಿ ಅವುಗಳಂತೆ ಸಾಗಬೇಕು ಎಂದರು.ಬಸವೇಶ್ವರ ಮಹಾವಿದ್ಯಾಲಯದ ಪ್ರಾ. ಪ್ರೊ. ಎಂ.ಎಂ. ಬುರಡಿ ಮಾತನಾಡಿ, ಯುವಜನತೆ ಬೇರೆ, ಬೇರೆ ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಕಟ್ಟಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಅವರ ಬದುಕು ಬಂಗಾರಮಯವಾಗಬೇಕೆಂದರೆ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಮತ್ತು ಲಿಂ. ತೋಂಟದ ಸಿದ್ದಲಿಂಗ ಶ್ರೀಗಳನ್ನು ನೆನೆಯುತ್ತಾ ಅವರು ಕಪ್ಪತ್ತಗುಡ್ಡದ ಉಳಿವಿಗಾಗಿ ಹಗಲಿರುಳು ಶ್ರಮಿಸಿದ್ದನ್ನು ಸ್ಮರಿಸಿದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಕೇವಲ ಬಾಹ್ಯ ಆಚರಣೆಗಳಿಗಿಂತ, ಶರಣರು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರ್ವಕಾಲಿಕ ಮಾನವೀಯ ಮೌಲ್ಯಗಳನ್ನು ನೀಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.ತಾಲೂಕು ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಸ್.ಎಂ. ಐಹೊಳ್ಳಿ, ಬೂದಪ್ಪ ಅಂಗಡಿ, ನಿಂಬನಗೌಡರ, ಪ್ರೊ. ಎನ್.ಎಂ. ಪವಾಡಿಗೌಡ್ರ, ಶೇಖಣ್ಣ ಕವಳಿಶಾಯಿ, ಪುಪ್ಪಾ ಭಂಡಾರಿ, ಗಂಜಿಹಾಳ, ಅಕ್ಕಿ, ಡಿ.ಎಸ್. ಬಾಪುರಿ ಸೇರಿದಂತೆ ಇತರರು ಇದ್ದರು. ಪ್ರಕಾಶ ಅಸುಂಡಿ ಸ್ವಾಗತಿಸಿದರು. ಗಿರಿಜಕ್ಕ ಧರ್ಮರಡ್ಡಿ ಪ್ರಾರ್ಥಿಸಿದರು. ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ ನಿರೂಪಿಸಿದರು. ಪ್ರಾ. ವೈ.ಎಸ್. ಮತ್ತೂರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾತ್ಮಾಗಾಂಧಿ ಪ್ರೌಢಶಾಲೆಗೆ ಸಲಕರಣೆಗಳ ಹಸ್ತಾಂತರ
ಘನತ್ಯಾಜ್ಯ 2026ರ ನಿಯಮ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ