ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಪಶು ಆಸ್ಪತ್ರೆಯ ಸಭಾಭವನದಲ್ಲಿ ಶುಕ್ರವಾರ ನೂತನವಾಗಿ ಕೊಪ್ಪಳ ತಾಲೂಕಿನ ಅಳವಂಡಿ ಸರ್ಕಾರಿ ಪಶು ಆಸ್ಪತ್ರೆಯಿಂದ ಪಟ್ಟಣದ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಅಧಿಕಾರ ಸ್ವೀಕರಿಸಿ ಸೇವೆ ಮಾಡುತ್ತಿರುವ ಜಾನುವಾರ ಅಧಿಕಾರಿಗೆ ರೈತ ಸಂಘದ ಮುಖಂಡರು ಸನ್ಮಾನಿಸಿದರು.ನಂತರ ರೈತ ಸಂಘದ ಮುಖಂಡರುಗಳಾದ ಅಜೀಜ್ ಯಲಗಾರ ಹಾಗೂ ವೀರೇಶ ಕುದುರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಕೆಲಸ ಮಾಡುವುದು ಕಷ್ಟವಾಗಿದೆ. ದಿನಕ್ಕೊಂದು ಸಮಸ್ಯೆಗಳು ಉಲ್ಬಣಗೊಳ್ಳುತ್ತಿದ್ದು, ಅವುಗಳನ್ನು ಪರಿಹರಿಸಲು ಸಾಕಷ್ಟು ಶ್ರಮ ವಹಿಸಬೇಕಾಗಿದೆ. ಬರುವಂತ ದಿನಗಳಲ್ಲಿ ಈ ಭಾಗದ ಪಶು ಪ್ರಾಣಿಗಳ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಮೂಲಕ ರೈತಾಪಿ ವರ್ಗಕ್ಕೆ ಪಟ್ಟಣದ ಪಶು ಆಸ್ಪತ್ರೆಯ ವೈದ್ಯರು ಅತ್ಯುತ್ತಮ ಸೇವೆ ಗೆಯುತ್ತಿದ್ದಾರೆ. ತಾವು ರೈತರಿಗೆ ಸಹಕಾರ ನೀಡಿ ಎಂದು ನೂತನವಾಗಿ ಆಗಮಿಸಿದ ಅಧಿಕಾರಿಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶು ಆಸ್ಪತ್ರೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ರಾಮನಗೌಡ ಪಾಟೀಲ ವಹಿಸಿದ್ದರು.
ಇದೇ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಮು ದೇಸಾಯಿ ಮುಖಂಡರುಗಳಾದ ಕಾಸುಗೌಡ ಬಿರಾದಾರ, ರಾಚೋಟಯ್ಯ ಹಿರೇಮಠ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು, ಮುಖಂಡರು ಹಾಗೂ ಸುತ್ತ-ಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.