ನಕಲಿ ದಾಖಲೆ ಸೃಷ್ಠಿಸಿ ಕಾಮಗಾರಿಗಳಿಗೆ ಹಣ ಡ್ರಾ

KannadaprabhaNewsNetwork | Published : Jul 13, 2024 1:34 AM

ಸಾರಾಂಶ

ತಾಲೂಕಿನ ತಾಳಕೆರೆ ಗ್ರಾಪಂಯಲ್ಲಿ ಅಧ್ಯಕ್ಷೆ ಸರೋಜಮ್ಮನ ಮಗ ನಾಗರಾಜುನದ್ದೇ ದರ್ಬಾರ್‌ ನಡೆಯುತ್ತಿದೆ ಎಂದು ಗ್ರಾಪಂ ಉಪಾಧ್ಯಕ್ಷ ಪಿ.ಬಿ.ವಿನೋದ್ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ತಾಳಕೆರೆ ಗ್ರಾಪಂಯಲ್ಲಿ ಅಧ್ಯಕ್ಷೆ ಸರೋಜಮ್ಮನ ಮಗ ನಾಗರಾಜುನದ್ದೇ ದರ್ಬಾರ್‌ ನಡೆಯುತ್ತಿದೆ ಎಂದು ಗ್ರಾಪಂ ಉಪಾಧ್ಯಕ್ಷ ಪಿ.ಬಿ.ವಿನೋದ್ ಆರೋಪಿಸಿದ್ದಾರೆ. ತಾಳಕೆರೆ ಗ್ರಾಪಂಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಾಲಿ ಅಧ್ಯಕ್ಷೆ ಸರೋಜಮ್ಮ ನಾಮಕಾವಸ್ತೆಗೆ ಅಧ್ಯಕ್ಷರಾಗಿದ್ದಾರೆ. ಸರಿಯಾಗಿ ಪಂಚಾಯಿತಿಗೆ ಬರುವುದಿಲ್ಲ. ಕಳೆದ ಎರಡು ಬಾರಿ ಅವರ ಅಧ್ಯಕ್ಷತೆಯಲ್ಲಿ ಸದಸ್ಯರ ಸಭೆ ಕರೆಯಲಾಗಿತ್ತು. ಆದರೆ ಅಧ್ಯಕ್ಷರ ಮೇಲೆ ಸದಸ್ಯರಿಗೆ ವಿಶ್ವಾಸವಿಲ್ಲದ ಕಾರಣ ಎರಡು ಬಾರಿಯೂ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. ಅಧ್ಯಕ್ಷರಿಗೆ ಪಂಚಾಯಿತಿ ಅಭಿವೃದ್ಧಿ ಬೇಕಿಲ್ಲ. ಕಾಟಾಚಾರಕ್ಕೆ ಅಧ್ಯಕ್ಷಗಿರಿ ನಡೆಸುತ್ತಿದ್ದಾರೆ. ಇವರ ಗೈರು ಹಾಜರಿಯಲ್ಲಿ ಅವರ ಮಗ ನಾಗರಾಜು ಆಡಳಿತದಲ್ಲಿ ಮೂಗು ತೂರಿಸುತ್ತಿದ್ದಾನೆ. ಎಲ್ಲಾ ವಹಿವಾಟುಗಳು ಆತನ ಆದೇಶದಂತೆಯೇ ನಡೆಯಬೇಕಿದೆ ಎಂದು ದೂರಿದರು. ಅಧ್ಯಕ್ಷೆ ಸರೋಜಮ್ಮ ಮಗ ಪಂಚಾಯಿತಿ ಕಚೇರಿಯಲ್ಲಿ ಪಿಡಿಒರನ್ನು ದುರುಪಯೋಗಪಡಿಸಿಕೊಂಡು ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ರೆಕಾರ್ಡ್ ಆಗಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ಆಗಿವೆ. ಪಿಡಿಒ ಸಕಾಲಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಸಾರ್ವಜನಿಕರ ಕೆಲಸ ಮಾಡದೆ ಸತಾಯಿಸುತ್ತಾರೆ. ನರೇಗಾ ಸೇರಿ ವಿವಿಧ ಕಾಮಗಾರಿಗಳಿಗೆ ಇಒ, ಸಿಇಒ ಸೇರಿದಂತೆ ಪಂಚಾಯಿತಿ ಸದಸ್ಯರು ಅನುಮೋದನೆ ನೀಡಿದರೂ ಸಹ ಇಲ್ಲಿಯ ಪಿಡಿಒ ಯೋಗೀಶ್ ಇಲ್ಲದ ತಕರಾರು ತೆಗೆದು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆಂದು ದೂರಿದರು.

ನರೇಗಾ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಕಾಮಗಾರಿಗಳು ಆಗದೇ ಇದ್ದರೂ ಸಹ ಸುಳ್ಳು ದಾಖಲೆ ಸೃಷ್ಠಿಸಿ ಲಕ್ಷಾಂತರ ರು. ದುರುಪಯೋಗಪಡಿಸಿಕೊಳ್ಳಲಾಗಿದೆ. ದಾಖಲೆಯಲ್ಲಿ ಕಾಮಗಾರಿ ಮಾಡಿರುವ ಕುರಿತು ಯಾವುದೇ ಪೋಟೊ ಅಳವಡಿಸಿಲ್ಲ. ಪಿಡಿಒ, ಅಧ್ಯಕ್ಷರ ಸಹಿಯೂ ಇಲ್ಲದೇ ನಕಲಿ ದಾಖಲೆ ಸೃಷ್ಠಿಸಿ ಕಾಮಗಾರಿಗಳಿಗೆಂದು ಹಣವನ್ನು ಡ್ರಾ ಮಾಡಲಾಗಿದೆ ಎಂದರು.

ಕೋಟ್‌ ನಾನು ಸಂಪಿಗೆ ಹೊಸಳ್ಳಿ, ತಾಳಕೆರೆ ಗ್ರಾಪಂ ಎರಡೂ ಕಡೆಯೂ ಕರ್ತವ್ಯ ನಿರ್ವಹಸಬೇಕಿದೆ. ಇತ್ತೀಚೆಗೆ ಮಳೆಯಾಗಿರುವ ಹಿನ್ನೆಲೆಯಲ್ಲಿ ಪಂಚಾಯಿತಿ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವುದು ಸತ್ಯ. ಅದನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇನೆ. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಎನ್‌ಆರ್‌ಇಜಿ ಕಾಮಗಾರಿ ತಡೆಹಿಡಿಯಲಾಗಿದೆ. ತ್ಯಾಜ್ಯ ಘಟಕ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. ತಾಪಂ ಇಒ ಸ್ಥಳಕ್ಕೆ ಬಂದು ಪಂಚಾಯಿತಿ ಆಡಳಿತದಲ್ಲಿ ಚುರುಕು ಮೂಡಿಸಲು ಹಲವು ಸಲಹೆ ನೀಡಿದ್ದಾರೆ. ಯೋಗೀಶ್ ಪಿಡಿಒ ತಾಳಕೆರೆ ಗ್ರಾಪಂ ೧೦ ಟಿವಿಕೆ ೪ -

ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಿಸಿದ ತ್ಯಾಜ್ಯ ವಿಲೇವಾರಿ ಘಟಕ. ಉಪಾಧ್ಯಕ್ಷ ಪಿ.ಬಿ.ವಿನೋದ್‌ ಇತರರಿದ್ದಾರೆ.

Share this article