ವಿಎಚ್‌ಪಿ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಹಿಂದೂಗಳ ಆರಾಧ್ಯ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆದಿರುವ ಷಡ್ಯಂತ್ರ ರಾಷ್ಟ್ರೀಯ ಸುರಕ್ಷತೆಗೆ ಸವಾಲೊಡ್ಡುವ ಪ್ರಕರಣ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಜಾರಿ ನಿರ್ದೇಶನಾಲಯದ (ಇಡಿ) ಮೂಲಕ ತನಿಖೆ ನಡೆಸಬೇಕು ಎಂದು ವಿಎಚ್‌ಪಿ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ದೇವಸ್ಥಾನದ ಮೇಲಿನ ಧಾರ್ಮಿಕ ಶ್ರದ್ಧಾ ಭಕ್ತಿಗೆ ಧಕ್ಕೆಯುಂಟು ಮಾಡಬೇಕೆಂಬ ಷಡ್ಯಂತ್ರದ ಹಿಂದೆ ರಾಷ್ಟ್ರ ವಿರೋಧಿಗಳ ಕೈವಾಡವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಧರ್ಮಸ್ಥಳದ ಘನತೆಗೆ ಚ್ಯುತಿ ತಂರುವ ಉದ್ದೇಶದಿಂದ ವ್ಯವಸ್ಥಿತ ಸಂಚು ರೂಪಿಸಿದ್ದಾರೆ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಭಾರತ ವಿರೋಧಿ ವರದಿಗಳಿಗೆ, ಕುತಂತ್ರಗಳಿಗೆ ಖ್ಯಾತಿ ಪಡೆದಿರುವ ಕೆಲ ಅಂತಾರಾಷ್ಟ್ರೀಯ ಮಾಧ್ಯಮ ಗಳಲ್ಲಿ ಈ ಪ್ರಕರಣವನ್ನು ಧರ್ಮಸ್ಥಳ ದೇವಸ್ಥಾನದ ಸುತ್ತ ಕೇಂದ್ರೀಕರಿಸಿ ವ್ಯವಸ್ಥಿತ ಅಪಪ್ರಚಾರ ಎಸಗ ಲಾಗಿದೆ. ಇದರ ಹಿಂದಿನ ಶಕ್ತಿಗಳ ತನಿಖೆ ನಡೆಸಬೇಕಿರುವುದು ಅತ್ಯವಶ್ಯಕ.
ಲಕ್ಷಾಂತರ ರು. ಹಣ ಖರ್ಚು ಮಾಡಿ, ವಿವಿಧ ಸ್ವರೂಪದ ಎಐ ಕಿರು ಚಿತ್ರ ನಿರ್ಮಿಸಲಾಗಿದ್ದು, ಅವು ಗಳನ್ನು ಕೋಟ್ಯಂತರ ರು. ವ್ಯಯಿಸಿ ಸಾಮಾಜಿಕ ಮಾಧ್ಯಮದ ಮೂಲಕ ಹರಿಬಿಡಲಾಗಿದೆ. ಈ ಕೃತ್ಯಗಳಿಗೆ ಸಾಕಷ್ಟು ಹಣ ವಿದೇಶದಿಂದ ಹರಿದುಬಂದಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಹರಡಿದೆ.ಈ ಬಗ್ಗೆ ಸಮರ್ಪಕ ತನಿಖೆ ನಡೆಯಬೇಕಿದೆ. ಭಯೋತ್ಪಾನೆ ಕಾರಣಕ್ಕೆ ದೇಶದಲ್ಲಿ ನಿಷೇಧಗೊಂಡ ಪಿಎಫ್ಐ ಸಂಘಟನೆ ರಾಜಕೀಯ ಆಯಾಮವೆಂದೇ ಗುರುತಿಸಿಕೊಂಡ ಎಸ್‌ಡಿಪಿಐ ಎಂಬ ಮೂಲಭೂತ ವಾದಿ ರಾಜಕೀಯ ಪಕ್ಷ ಅಪಪ್ರಚಾರಗೈದವರ, ದೂರುದಾರರ, ಷಡ್ಯಂತ್ರಕಾರರ ಪರವಾಗಿ ಪ್ರತಿಭಟನೆ ನಡೆಸಿದ್ದು ಜನಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ.
ದೇಶದ ಕಾನೂನಿನ ವಿರುದ್ಧ ಅಕ್ರಮ ಮತಾಂತರಕ್ಕೆ ಪ್ರಚೋದಿಸುವ ವಿದೇಶಿ ಕ್ರೈಸ್ತ ಮಿಷನರಿಗಳೊಂದಿಗೆ ನಂಟು ಹೊಂದಿದ ಕೆಲವು ಎನ್‌ಜಿಒಗಳ ಪಾತ್ರವನ್ನೂ ಮಾಧ್ಯಮಗಳು ವರದಿ ಮಾಡಿವೆ. ಈ ಎಲ್ಲಾ ಬೆಳವಣಿಗೆ ತೀವ್ರ ಸ್ವರೂಪದ್ದಾಗಿರುವುದಷ್ಟೇ ಅಲ್ಲದೆ ರಾಷ್ಟ್ರೀಯ ಸುರಕ್ಷತೆಗೂ ಸವಾಲೊಡ್ಡುವಂತಹದ್ದು ಎಂಬುದು ರುಜುವಾತಾಗಿದೆ.ಕೇಂದ್ರ ಸರ್ಕಾರ ಕೂಡಲೆ ಮಧ್ಯೆಪ್ರವೇಶಿಸಿ ಎನ್‌ಐಎ ಹಾಗೂ ಇಡಿ ಮೂಲಕ ಧರ್ಮಸ್ಥಳದ ವಿರುದ್ಧ ನಡೆ ದಿರುವ ಷಡ್ಯಂತ್ರದ ತನಿಖೆ ನಡೆಸುವಂತೆ ರಾಜ್ಯದ ಜನತೆ ಪರವಾಗಿ, ಪ್ರಧಾನಿ ಹಾಗೂ ಗೃಹ ಸಚಿವರಿಗೆ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ ಎಂದು ತಿಳಿಸಿದರು.(ಬಾಕ್ಸ್)
ಗಣೇಶೋತ್ಸವಕ್ಕೆ ನಿರ್ಬಂಧ ಹಿಂಪಡೆಯಿರಿರಾಜ್ಯದಲ್ಲಿ ಗಣೇಶೋತ್ಸವ ಆಚರಣೆಗೆ ಸರ್ಕಾರ, ಜಿಲ್ಲಾಡಳಿತ ದಿನಕ್ಕೊಂದು ನಿರ್ಬಂಧಗಳನ್ನು ಹೇರುತ್ತಿದ್ದು, ಅವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಎಚ್ ಪಿ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಒತ್ತಾಯಿಸಿದ್ದಾರೆ.
ಗಣೇಶ ಚತುರ್ಥಿ ಇಡೀ ಹಿಂದೂ ಸಮುದಾಯಕ್ಕೆ ಸಂಭ್ರಮದ ದಿನ. ಗಣಪತಿ ಹಬ್ಬ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಇಡೀ ಹಿಂದೂ ಸಮಾಜ, ಆಸ್ತಿಕರ ನಂಬಿಕೆ. ಹಿಂದೂ ಸಂಪ್ರದಾಯದಲ್ಲಿ ಯಾವುದೇ ಕಾರ್ಯ ಆರಂಭಿಸುವ ಮುನ್ನ ಮೊದಲಿಗೆ ಗಣಪತಿ ಆರಾಧನೆ ತಲೆ ತಲಾತಂತರದಿಂದ ನಡೆದು ಕೊಂಡುಬಂದಿದೆ.ಇಂದು ದೇಶಾದ್ಯಂತ ಚತುರ್ಥಿ ಸಂದರ್ಭದಲ್ಲಿ ಸಾರ್ವಜನಿಕವಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿ ಸುವ ಕಾರ್ಯಕ್ರಮ ನಡೆಯುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರನಾಥ ತಿಲಕರು ಜನ ಸಂಘಟ ನೆಗೆ ಗುಡಿಯಲ್ಲಿದ್ದ ಗಣೇಶನನ್ನು ಸಾರ್ವಜನಿಕ ಉತ್ಸವದ ಮೂಲಕ ದೊಡ್ಡ ಆಂದೋಲನ ಮಾಡಿದ್ದರು.
ಶ್ರದ್ಧೆ ಮತ್ತು ಧಾರ್ಮಿಕ ಭಾವನೆಯುಳ್ಳ ಗಣೇಶ ಹಬ್ಬವನ್ನು ದೇಶಾದ್ಯಂತ ಯಾವುದೇ ಜಾತಿ, ವರ್ಗ ಬೇಧ ಮರೆತು ಸಮಿತಿ ರಚಿಸಿ ಸಮಾಜದಿಂದ ದವಸ ಧಾನ್ಯ, ಹಣ ಸಂಗ್ರಹಿಸಿ, ಪೂಜೆ ಪುನಸ್ಕಾರ, ಅನ್ನ ಸಂತ ರ್ಪಣೆ ನಡೆಸಿಕೊಂಡು ಸಮಾಜವನ್ನು ಜಾಗೃತಿಗೊಳಿಸಲಾಗುತ್ತಿದೆ.ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧ ಹೇರಿ ಆಚರಣೆಗೆ ತಡೆಯೊಡ್ಡುವ ಕಾರ್ಯ ಮಾಡಲಾಗುತ್ತಿದೆ. ಸಮಾಜ ಒಗ್ಗೂಡಿಸುವ ಕೆಲಸ ಮಾಡುವ ಗಣೇಶೋತ್ಸವ ನಿರ್ವಿಘ್ನವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು.
ಜಿಲ್ಲಾಡಳಿತದಿಂದ ಇದೀಗ ಹೊಸ ಆದೇಶ ಹೊರಡಿಸಿದ್ದು, ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಧ್ವಜ ಹಾಕ ಬಾರದು. ಪಟಾಕಿ ಹೊಡೆಯಬಾರದು ಸೇರಿದಂತೆ ವಿವಿಧ ಸಕಾರಣವಿಲ್ಲದ ನಿರ್ಬಂಧ ಹಾಕಿದ್ದಾರೆ. ಗಣಪತಿ ಸೇವಾ ಸಮಿತಿಗಳು ಕೇವಲ ಗಣಪತಿ ಪ್ರತಿಷ್ಠಾಪನೆ, ವಿಸರ್ಜನೆಗೆ ಸೀಮಿತವಾಗದೆ, ಸರ್ಕಾರ ದಿಂದ ಧಾರ್ಮಿಕ ವಿಚಾರಗಳಿಗೆ ಧಕ್ಕೆ ಬಂದಾಗ ಪ್ರತಿಭಟಿಸಬೇಕು. ಹತ್ತಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ ಚಾಚೂ ತಪ್ಪದೇ ನಡೆಯುವಂತೆ ಮಾಡಬೇಕು. ಸರ್ಕಾರ, ಜಿಲ್ಲಾಡಳಿತ ಗಣೇಶೋತ್ಸವಕ್ಕೆ ಹಾಕಿರುವ ನಿಬಂಧನೆ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.೨೬ಬಿಹೆಚ್‌ಆರ್ ೪: ಆರ್.ಡಿ.ಮಹೇಂದ್ರ