ರಟ್ಟೀಹಳ್ಳಿ: ಬಕ್ರೀದ್ ಹಬ್ಬಕ್ಕೆ ಕುರುಬಾನಿ ಹೆಸರಿನಲ್ಲಿ ತಾಲೂಕಿನಾದ್ಯಂತ ಸಾವಿರಾರು ಗೋವುಗಳನ್ನು ಹಾಗೂ ಇನ್ನಿತರ ಪ್ರಾಣಿ ಬಲಿ ನಡೆಯುತ್ತದೆ ಕಾರಣ ಪೊಲೀಸ್ ಇಲಾಖೆ ಗೋ ಹತ್ಯ ನಿಷೇಧ ಕಾಯ್ದೆ ಅಡಿ ಅಂತಹ ಕೃತ್ಯವನ್ನು ತಡೆಗಟ್ಟಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಪಿಎಸ್‌ಐ ಜಗದೀಶ ಜೆ. ಅವರಿಗೆ ಮನವಿ ಸಲ್ಲಿಸಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ಜಿಲ್ಲಾ ಸತ್ಸಂಗ ಪ್ರಮುಖ ಮುತ್ತು ಬೆಣ್ಣಿ ಮಾತನಾಡಿ, ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಕಾಯ್ದೆ ಅನ್ವಯ ಹಾಗೂ ಸುಪ್ರೀಂ ಕೋರ್ಟ್ ಆದೇಶದನ್ವಯ ಬಕ್ರೀದ್ ಹಾಗೂ ಇನ್ನಿತರ ಹಬ್ಬಗಳಲ್ಲಿ ಗೋ ಹತ್ಯೆ, ಪ್ರಾಣಿ ಬಲಿ ನಿಷೇಧವಿದ್ದರೂ ತಾಲೂಕಿನಲ್ಲಿ ಎಗ್ಗಿಲ್ಲದೆ ನೂರಾರು ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟ ನಡೆಯುತ್ತಿದೆ ಕಾರಣ ಅದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಕಾಶಗೌಡ ಪಾಟೀಲ್, ದರ್ಶನ್ ಗಬ್ಬುರ ಮುಂತಾದವರು ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿದರು.ಕೇಂದ್ರ ಹಾಗೂ ರಾಜ್ಯ ಸರಕಾರದ ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ ಜಾರಿಯಲ್ಲಿದ್ದರು ತಾಲೂಕಿನಾದ್ಯಂತ ಸಾವಿರಾರು ಗೋ ಹತ್ಯೆಗಳು ನಡೆಯುತ್ತಿವೆ. ಬಕ್ರೀದ್ ಹಬ್ಬದಲ್ಲಿ ಕುರುಬಾನಿ ಸ್ಥಳ ಹಾಗೂ ಜಾನುವಾರುಗಳು ಕಂಡು ಬಂದಲ್ಲಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳುವ ಕಾನೂನಿನಲ್ಲಿ ಅವಕಾಶವಿದೆ ಆದರೂ ಸಂಬಂಧ ಪಟ್ಟ ಅಧಿಕಾರಿಗಳೂ ಮಾತ್ರ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದು ಸರಿಯಲ್ಲ. ಕಾರಣ ಪೊಲೀಸ್ ಇಲಾಖೆ ತಕ್ಷಣ ಜಾನುವಾರು ಸಾಗಾಟ ಹಾಗೂ ಪ್ರಾಣಿ ಹತ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಅದಕ್ಕೆ ಅವಕಾಶ ನೀಡದೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಬೇಕು ಎಂದು ಮನವಿ ಮಾಡಿದರು.
ಬಕ್ರೀದ್ ಹಬ್ಬದ ನಿಮಿತ್ತ ಗೋ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಶಾಂತಿ ಸಭೆಯಲ್ಲಿ ಮುಸ್ಲಿಂ ಬಾಂಧವರಿಗೆ ಅದರ ಬಗ್ಗೆ ಅರಿವು ಮೂಡಿಸಿದ್ದು ಹಾಗೂ ಪಟ್ಟಣದ ಹೊರ ವಲಯಗಳಲ್ಲಿ ಚೆಕ್ ಪೋಸ್ಟ ನಿರ್ಮಾಣ ಮಾಡಿದ್ದು ಅಕ್ರಮ ಗೋ ಸಾಗಾಟ ಹಾಗೂ ಹತ್ಯೆ ಕಂಡು ಬಂದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ ಜೆ. ಜಗದೀಶ ಹೇಳಿದರು.ಮಾಸೂರಿನಲ್ಲೂ ಮನವಿ: ತಾಲೂಕಿನ ಮಾಸೂರ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಹೆಸರಿನಲ್ಲಿ ನೂರಾರು ಗೋವುಗಳನ್ನು ಹತ್ಯೆ ಮಾಡಲಾಗುತ್ತದೆ. ಕಾರಣ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಹಿರೇಕೆರೂರ ಎ.ಎಸ್.ಐ ಉಜ್ಜನಗೌಡ ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಗೋ ರಕ್ಷಾ ಪ್ರಮುಖ ಶಂಭು ಸಿ.ಎಂ., ರಟ್ಟೀಹಳ್ಳಿ ತಾಲೂಕು ಸಹ ಸಂಯೋಜಕ ಪ್ರಶಾಂತ, ಪ್ರದೀಪ ಪಿ.ಕೆ., ಆದಿತ್ಯ, ಕುಮಾರ ಎಂ.ಎಸ್. ಮಣಿಕಂಠ ಸಂತೋಷ, ಆರ್.ಎಚ್. ಸೋಮು ಜನ್ನು, ಸಾಗರ, ಮಾರುತಿ ಪಿ.ಕೆ., ಪ್ರತೀಕ ಮುಂತಾದವರು ಇದ್ದರು.