ಅಚ್ಚುಕಟ್ಟಾದ ವ್ಯವಸ್ಥೆಗೆ ಉಪ ರಾಷ್ಟ್ರಪತಿಗಳಿಂದ ಮೆಚ್ಚುಗೆ

KannadaprabhaNewsNetwork |  
Published : Nov 10, 2025, 01:00 AM IST
9ಕೆಎಂಎನ್ ಡಿ14 | Kannada Prabha

ಸಾರಾಂಶ

ಮಧ್ಯಾಹ್ನದವರೆಗೆ ದರ್ಶನ ನಿರ್ಭಂದವಿದೆ ಎಂದು ಮೊದಲೇ ಭಕ್ತರಿಗೆ ಮಾಹಿತಿ ನೀಡಿದ್ದರಾದರೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ಒಂದು ಕಿ.ಮೀ ಆಚೆಯೆ ಪೊಲೀಸರು ಬ್ಯಾರಕೇಡ್ ಹಾಕಿ ನಿರ್ಭಂದಿಸಿದ್ದರು. ಎಸ್ಪಿ ಮಾರ್ಗದರ್ಶನದಲ್ಲಿ ಭಾರೀ ಕಟ್ಟೆಚ್ಚರ ವಹಿಸಿ ಭದ್ರತೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ಸೇರಿದಂತೆ ಮಹಾಲಕ್ಷ್ಮಿ ಅಮ್ಮನವರು ಹಾಗೂ ರಾಮಾನುಜರ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತದ ವ್ಯವಸ್ಥೆಗೆ ಉಪರಾಷ್ಟ್ರಪತಿಗಳು ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲರಿಗೂ ಧನ್ಯವಾದ ಹೇಳಿದರು.

ಡೀಸಿ ಡಾ.ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಎಡೀಸಿ ಬಿ.ಸಿ.ಶಿವಾನಂದಮೂರ್ತಿ ಖುದ್ದು ಹಾಜರಿದ್ದು, ಸಕಲ ವ್ಯವಸ್ಥೆ ಮಾಡಿದ ಕಾರಣ ಶ್ರೀಚೆಲುವನಾರಾಯಣನ ದರ್ಶನದ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಉಪರಾಷ್ಟ್ರಪತಿಗಳ ಬೆಂಗಾವಲು ಅಧಿಕಾರಿಗಳೂ ಸಹ ಮೆಚ್ಚುಗೆ ಸೂಚಿಸಿದರು.

ಮಧ್ಯಾಹ್ನದವರೆಗೆ ದರ್ಶನ ನಿರ್ಭಂದವಿದೆ ಎಂದು ಮೊದಲೇ ಭಕ್ತರಿಗೆ ಮಾಹಿತಿ ನೀಡಿದ್ದರಾದರೂ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರನ್ನು ಒಂದು ಕಿ.ಮೀ ಆಚೆಯೆ ಪೊಲೀಸರು ಬ್ಯಾರಕೇಡ್ ಹಾಕಿ ನಿರ್ಭಂದಿಸಿದ್ದರು. ಎಸ್ಪಿ ಮಾರ್ಗದರ್ಶನದಲ್ಲಿ ಭಾರೀ ಕಟ್ಟೆಚ್ಚರ ವಹಿಸಿ ಭದ್ರತೆ ಮಾಡಲಾಗಿತ್ತು.

ಅರೆಸೇನಾಪಡೆ, ಕಮ್ಯಾಂಡೋಗಳು, ಬಾಂಬ್ ನಿಷ್ಕ್ರಿಯದಳ, ಕಟ್ಟೆಚ್ಚರ ವಹಿಸಲಾಗಿತ್ತು. ಉಪರಾಷ್ಟ್ರಪತಿಗಳ ಸ್ವಾಗತ, ಮರ್ಯಾದೆ, ಬೀಳ್ಕೊಡುಗೆ ರಾಜಾಶೀರ್ವಾದ ಎಲ್ಲವೂ ವ್ಯವಸ್ಥಿತವಾಗಿ ನಡೆದವು. ಮಕ್ಕಳೊಂದಿಗೆ ಪೋಟೋ ತೆಗೆಸಿಕೊಂಡ ಉಪರಾಷ್ಟ್ರಪತಿಗಳು

ಮೇಲುಕೋಟೆ: ಸರಳ ಹಾಗೂ ಸಜ್ಜಕನಿಕೆಯ ನೂತನ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಮೇಲುಕೋಟೆಯ ಭೇಟಿ ವೇಳೆ ಹಲವು ವಿಶೇಷತೆಗೆ ಸಾಕ್ಷಿಯಾದರು.

ತಾವು ರಾಜ್ಯಪಾಲರಾಗಿ ಮೇಲುಕೋಟೆಗೆ ಆಗಮಿಸಿದ್ದಾಗ ಕಲ್ಯಾಣಿ ಬಳಿ ತುಳಸಿತೋಟಕ್ಕೆ ಚಾಲನೆ ನೀಡಿದ ನೆನಪಿಗಾಗಿ ಯತಿರಾಜದಾಸರ್ ಗುರುಪೀಠದ ಪರವಾಗಿ ಸ್ಥಾನೀಕಂ ಸಂತಾನರಾಮನ್ ನೀಡಿದ ನೆನಪಿನ ಕಾಣಿಕೆ ಸ್ವೀಕರಿಸಿ ತುಳಸಿತೋಟವನ್ನು ಅಚ್ಚುಕಟ್ಟಾಗಿ ಬೆಳಸಿ ಮತ್ತೊಮ್ಮೆ ಭೇಟಿ ನೀಡುತ್ತೇನೆ ಎಂದರು.

ಇದೇ ವೇಳೆ ಬ್ಯಾರಕೇಡ್ ಹೊರಭಾಗದಲ್ಲಿ ನಿಂತಿದ್ದ ಗುರುಪೀಠದ ಗುರುಕುಲದ ಮಕ್ಕಳನ್ನು ಬೆಂಗಾವಲು ಪಡೆಗೆ ಹೇಳಿ ಒಳಕ್ಕೆ ಕರೆಸಿಕೊಂಡು ಎಲ್ಲಾ ಮಕ್ಕಳೊಂದಿಗೆ ಪೋಟೋ ತೆಗೆಸಿಕೊಂಡರು. ರಾಜ್ಯಪಾಲರಾದ ತಾವರ್ ಚಂದ್ ಗೆಲ್ಲೋಟ್, ಸಚಿವ ಚಲುವರಾಯಸ್ವಾಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಜರಿದ್ದರು.

ದೇವಾಲಯಕ್ಕೆ ಆಗಮಿಸಿ ಕಾರು ಇಳಿಯುತ್ತಿದ್ದಂತೆ ತಮಿಳುನಾಡಿನ ಭವಾನಿಯ ಬಿಜೆಪಿ ರಾಜ್ಯ ಕಾರ್‍ಯಕಾರಣಿ ಸದಸ್ಯ ಶಿಥಿ ವಿನಾಯಕನ್ ಮತ್ತು ಕಾರ್ಯಕರ್ತರು ಬ್ಯಾರಕೇಡ್‌ನ ಹೊರಭಾಗ ನಿಂತಿದ್ದನ್ನು ಗಮನಿಸಿ ಅವರ ಬಳಿಗೆ ಹೋಗಿ ಗೌರವ ಸ್ವೀಕರಿಸಿ ದೇವಾಲಯಕ್ಕೆ ಕರೆಸಿಕೊಂಡರು.

ದರ್ಶನ ಮುಗಿಸಿ ಕಾರು ಹತ್ತಿ ವಾಪಸ್ಸಾಗುವಾಗ ಬಿಜೆಪಿ ಕಾರ್ಯಕರ್ತ ಶಂಕರ್ ಕೈ ಬೀಸಿದ್ದನ್ನು ಗಮನಿಸಿ ಅವರ ಬಳಿಗೇ ಹೋಗಿ ಹಸ್ತಲಾಘವ ಮಾಡಿದರು. ದೇವಾಲಯದ ಕೈಂಕರ್ಯ ಪರರೊಡನೆ ಮತ್ತು ಸ್ವಾಗತವೇಳೆ ವಾದ್ಯ ನುಡಿಸಿದ ವಾದ್ಯಗಾರರೊಂದಿಗೂ ಉತ್ಸಾಹದಿಂದಲೇ ಫೋಟೋ ತೆಗೆಸಿಕೊಂಡದ್ದು ಅವರ ಸರಳ ವ್ಯಕ್ತಿತ್ವ ಮೇಲುಕೋಟೆಯಲ್ಲಿ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ