ಮುದ್ದಂಡ ಹಾಕಿ : ಕಾಳಿಮಾಡ, ತಾಪಂಡ, ಚೇನಂಡ ತಂಡಕ್ಕೆ ಗೆಲುವು

KannadaprabhaNewsNetwork |  
Published : Apr 06, 2025, 01:47 AM IST
ಚಿತ್ರ : 5ಎಂಡಿಕೆ8 : ಕೊಲ್ಲೀರ ಹಾಗೂ ಸೋಮಯಂಡ ತಂಡದ ನಡುವಿನ ಪಂದ್ಯ.  | Kannada Prabha

ಸಾರಾಂಶ

ಮುದ್ದಂಡ ಕಪ್‌ನ ಶನಿವಾರದ ಪಂದ್ಯದಲ್ಲಿ ಕಾಳಿಮಾಡ, ತಾಪಂಡ, ಚೇನಂಡ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮುದ್ದಂಡ ಹಾಕಿ ಕಪ್ ನ ಶನಿವಾರ ನಡೆದ ಪಂದ್ಯದಲ್ಲಿ ಕಾಳಿಮಾಡ, ತಾಪಂಡ, ಚೇನಂಡ ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಅಪ್ಪಂಡೇರಂಡ ಮತ್ತು ಕಾಳಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ತಾಪಂಡ ಮತ್ತು ಬಲ್ಲಂಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ತಾಪಂಡ ಗೆಲುವು ಸಾಧಿಸಿತು. ಚೇನಂಡ ಮತ್ತು ಚೀಯಂಡಿರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಚೇನಂಡ ಗೆಲುವು ಸಾಧಿಸಿತು. ಚೋಯಮಾಡಂಡ ಮತ್ತು ಮೂಡೇರ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೋಯಮಾಡಂಡ ತಂಡ ಗೆಲುವು ದಾಖಲಿಸಿತು.

ಕಂಡ್ರತಂಡ ಮತ್ತು ಅಜ್ಜೇಟಿರ ತಂಡಗಳ ನಡುವಿನ ಪಂದ್ಯದಲ್ಲಿ 7-0 ಗೋಲುಗಳ ಅಂತರದಲ್ಲಿ ಅಜ್ಜೇಟಿರ ತಂಡ ಗೆಲುವು ಸಾಧಿಸಿತು. ಅಯ್ಯರಣಿಯಂಡ ಮತ್ತು ಕೋಳುಮಾಡಂಡ ನಡುವಿನ ಪಂದ್ಯದಲ್ಲಿ ಕೋಳುಮಾಡಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಮುಕ್ಕಾಟಿರ (ಕಡಗದಾಳ್) ಹಾಗೂ ಗಾಂಡಂಗಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಮುಕ್ಕಾಟಿರ ತಂಡ ಜಯ ಸಾಧಿಸಿತು. ಚಂದುರ ಮತ್ತು ಪೊರ್ಕಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚಂದುರ ಗೆಲುವು ದಾಖಲಿಸಿತು. ಮೂಕಂಡ ಮತ್ತು ಪುಟ್ಟಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಂಡ ತಂಡ 1-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಪುಲಿಯಂಡ ಮತ್ತು ಕುಂಡ್ಯೋಳಂಡ ನಡುವಿನ ಪಂದ್ಯದಲ್ಲಿ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಕುಡ್ಯೋಳಂಡ ಗೆಲುವು ಸಾಧಿಸಿತು. ಚೆಂಗೇಟಿರ ಮತ್ತು ಮುಕ್ಕಾಟಿರ (ದೊಡ್ಡಪುಲಿಕೋಟು) ತಂಡಗಳ ನಡುವಿನ ಪಂದ್ಯದಲ್ಲಿ ಮುಕ್ಕಾಟಿರ ತಂಡ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಅಳಮೇಂಗಡ ಮತ್ತು ಚೆರುವಾಳಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಚೆರುವಾಳಂಡ ಗೆಲುವು ಸಾಧಿಸಿತು. ಕಾಂಗೀರ ಮತ್ತು ಸಣ್ಣುವಂಡ ನಡುವಿನ ಪಂದ್ಯದಲ್ಲಿ ಸಣ್ಣುವಂಡ ತಂಡ 4-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು.

ಕೊಲ್ಲಿರ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಸೋಮೆಯಂಡ ತಂಡ ಜಯ ಸಾಧಿಸಿತು. ಮಾಚಂಗಡ ಮತ್ತು ಅಲ್ಲಾರಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಲ್ಲಾರಂಡ ಜಯ ಸಾಧಿಸಿತು. ಬಿದ್ದೇರಿಯಂಡ ಮತ್ತು ಓಡಿಯಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಓಡಿಯಂಡ ತಂಡ ಗೆಲುವು ದಾಖಲಿಸಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...