ರಮೇಶ ಜಿಗಜಿಣಗಿ ಗೆಲುವಿಗೆ ವಿಜಯೋತ್ಸವ

KannadaprabhaNewsNetwork |  
Published : Jun 05, 2024, 12:30 AM IST
4ಐಎನ್‌ಡಿ3,ಸಂಸದ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದಕ್ಕೆ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. | Kannada Prabha

ಸಾರಾಂಶ

ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಭರ್ಜರಿ ಗೆಲುವು ಸಾಧಿಸಿದಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಬಿಜೆಪಿ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಭರ್ಜರಿ ಗೆಲುವು ಸಾಧಿಸಿದಕ್ಕೆ ಇಲ್ಲಿನ ಬಿಜೆಪಿ ಕಾರ್ಯಕರ್ತರು,ಅಭಿಮಾನಿಗಳು ಪಟ್ಟಣದ ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತದಲ್ಲಿ ಪಟಾಕಿ ಸಿಡಿಸಿ ಗುಲಾಲು ಎರಚಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಇದಕ್ಕೂ ಮುಂಚೆ ಬಿಜೆಪಿ ಕಾರ್ಯಕರ್ತ ಸಂಜೀವ ದಶವಂತ ಪಟ್ಟಣದ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರಧಾನಿ ಮತ್ತೋಮ್ಮೆ ಪ್ರಧಾನಿಯಾಗಲಿ, ಸಂಸದ ರಮೇಶ ಜಿಗಜಿಣಗಿ ಅವರು ಗೆಲುವು ಸಾಧಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಮೇಶ ಧರೆನವರ ಹಾಗೂ ಬಿಜೆಪಿ ಎಸ್ಸಿ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಸಂಜೀವ ದಶವಂತ ಅವರು, ರಮೇಶ ಜಿಗಜಿಣಗಿ ಅವರು ಹ್ಯಾಟ್ರೀಕ್‌ ಗೆಲುವು ಸಾಧಿಸಿದಕ್ಕೆ ಸಂತಸವಾಗಿದೆ. ರಮೇಶ ಜಿಗಜಿಣಗಿ ಅವರು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿಗೆ ಲಕ್ಷ ಕೋಟಿ ಅನುದಾನ ತರುವುದರ ಮೂಲಕ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದಾರೆ. ಅಲ್ಲದೇ ವಿಜಯಪುರ ಜಿಲ್ಲೆಯಲ್ಲಿ ಕೇವಲ ಒಂದೇ ರಾಷ್ಟ್ರೀಯ ಹೆದ್ದಾರಿ ಇತ್ತು. ಇಂದು ಸಂಸದ ರಮೇಶ ಜಿಗಜಿಣಗಿ ಅವರು ಪ್ರಯತ್ನದಿಂದ 9 ಹೆದ್ದಾರಿಗಳು ವಿಜಯಪುರ ಜಿಲ್ಲೆಗೆ ಬಂದಿವೆ. ಜಾತ್ಯತೀತ ರಾಜಕಾರಣಿಯಾಗಿ, ಸರ್ವರ ಮನಸ್ಸಿನಲ್ಲಿ ಪ್ರೀತಿಯಿಂದ ಬೆಳೆದು ಬಂದಿರುವ ರಮೇಶ ಜಿಗಜಿಣಗಿ ಅವರು ಅಜಾತಶತ್ರುವಾಗಿದ್ದಾರೆ. ಬಿಜೆಪಿಗೆ ಮತಹಾಕಿದ ತಾಲೂಕಿನ ಎಲ್ಲ ಮತದಾರರಿಗೆ ಅಭಿನಂದಿಸುವುದಾಗಿ ಹೇಳಿದರು.

ಬಿಜೆಪಿ ಕಾರ್ಯಕರ್ತರಾದ ಶಿವು ಬಗಲಿ, ರಮೇಶ ಧರೆನವರ, ಸಂಜೀವ ದಶವಂತ, ವಿಜು ಮಾನೆ, ಅಂಬರಿಷ ದಶವಂತ, ನಾಗು ದಶವಂತ,ಸತೀಶ ಗಾಣಿಗೇರ, ಸಂತೋಷ ಕಾಗರ, ಚಂದ್ರ ಬಗಲಿ, ಮಹೇಶ ಒಡತೇಲಿ, ಸಚೀನ ಬೊಳೆಗಾಂವ, ಮಹೇಶ ನಾವಿ,ಮಲ್ಲು ಬಡಿಗೇರ,ಸಚೀನ ರಾಠೋಡ,ಅಪ್ಪು ದಶವಂತ,ಭೀಮರಾಯಗೌಡ ಮದರಖಂಡಿ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಸಿದ್ದಣ್ಣ ಗುನ್ನಾಪೂರ, ಸಿಕಿಂದರ ಬೊರಾಮಣಿ, ಮಂಜುನಾಥ ಶೆಟ್ಟಿ, ಪ್ರಶಾಂತ ಗವಳಿ ಮೊದಲಾದವರು ವಿಜಯೋತ್ಸವದಲ್ಲಿ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ