ಮೋಹನ್ ಲಿಂಬಿಕಾಯಿ ಮಾತನಾಡಿ, ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ವಿರೋಧ ಪಕ್ಷದವರು ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡಿದರೂ ಮತದಾರರು ಕಾಂಗ್ರೆಸ್ ಪಕ್ಷದ ಕೈಬಿಡಲಿಲ್ಲ ಎಂದರು.
ಮುಂಡರಗಿ: ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆ ಸೋಮವಾರ ಸಂಜೆ ಪಟ್ಟಣದ ಬೃಂದಾವನ ವೃತ್ತದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.ಈ ಸಂದರ್ಭದಲ್ಲಿ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮಾತನಾಡಿ, ಎರಡು ಕ್ಷೇತ್ರದ ಉಪಚುನಾವಣೆಯಲ್ಲಿ ವಿರೋಧ ಪಕ್ಷದವರು ಕಾಂಗ್ರೆಸ್ ವಿರುದ್ಧ ಇಲ್ಲಸಲ್ಲದ ಆರೋಪವನ್ನು ಮಾಡಿದರೂ ಮತದಾರರು ಕಾಂಗ್ರೆಸ್ ಪಕ್ಷದ ಕೈಬಿಡಲಿಲ್ಲ. 2023ರ ಚುನಾವಣೆಯ ಗ್ಯಾರಂಟಿಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕರ್ನಾಟಕದ ನಾಗರಿಕರಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಉತ್ತಮ ಭವಿಷ್ಯ ಇದೆ ಎಂದು ಅರಿತಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ತುಂಬಿಕೊಳ್ಳಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಮತದಾರ ಪ್ರಭುವಿಗೆ ಸ್ಪಂದಿಸುವವರಿಗೆ ಕಾರ್ಯಕರ್ತರ ಆಶೀರ್ವಾದ ಸದಾ ಇದ್ದೇ ಇರುತ್ತದೆ ಎಂದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಹಾಗೂ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ದಾವಣಗೆರೆ ಹಾಗೂ ಬಾಗಲಕೋಟೆ ಮತದಾರರಿಗೆ ಅಭಿನಂದಿಸುವೆ. ಎರಡೂ ಕ್ಷೇತ್ರದವರು ಅಭೂತಪೂರ್ವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.ಈ ಸಂದರ್ಭದಲ್ಲಿ ಡಾ. ಬಿ.ಎಸ್. ಮೇಟಿ, ರಾಘವೇಂದ್ರ ಕುರಿಯವರ, ಡಿ.ಎಂ. ಕಾತರಕಿ, ರುದ್ರಗೌಡ ಪಾಟೀಲ, ರಾಜಾಭಕ್ಷಿ ಬೆಟಗೇರಿ, ಮುದಕಪ್ಪ ಕುಂಬಾರ, ರಾಜು ಡಾವಣಗೇರಿ, ನಾಗರಾಜ ಹೊಂಬಳಗಟ್ಟಿ, ಅಂದಪ್ಪ ಬಳ್ಳಾರಿ, ಆರ್.ಎಂ. ಸೈದರ್, ಯಲ್ಲಪ್ಪ ಹೊಂಬಳಗಟ್ಟಿ, ಸುರೇಶ ಉಪ್ಪಾರ, ರಾಮು ಭಜಂತ್ರಿ, ವಿನೋದ ವಡ್ಡರ, ದಶರತಪ್ಪ ಕುರಿ, ಮುತ್ತು ಬಳ್ಳಾರಿ, ಸುಲೇಮಾನ್ ಬೇವೂರ, ಉಮೇಶ ಕಲಾಲ್, ಮಂಜುನಾಥ ಕಟ್ಟಿಮನಿ, ಸುರೇಶ ಮಾಗಡಿ, ಆನಂದಗೌಡ ಪಾಟೀಲ ಮುಂಡವಾಡ, ವಿಶ್ವನಾಥ ಪಾಟೀಲ, ರಾಘವೇಂದ್ರ ನೆರೇಗಲ್, ಪ್ರಶಾಂತಗೌಡ ಪಾಟೀಲ, ಅಡಿವೆಪ್ಪ ಛಲವಾದಿ, ಖೈರೂನಬಿ ಫೀರವಾಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.