ಸಹಕಾರ ಸಂಘಗಳ ಚುನಾವಣೆಗಳಲ್ಲಿ ಗೆಲುವು ಜಿಪಂ, ತಾಪಂಗೆ ದಿಕ್ಸೂಚಿ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Apr 21, 2025, 12:48 AM IST
20ಕೆಎಂಎನ್ ಡಿ29 | Kannada Prabha

ಸಾರಾಂಶ

8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಸಲಹೆ, ಸಹಕಾರ, ಮಾರ್ಗದರ್ಶನಪಡೆದು ಎಲ್ಲಾ ನಿರ್ದೇಶಕರು ಜತೆಗೂಡಿ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬಹುತೇಕ ಸೊಸೈಟಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗುವ ಮೂಲಕ ಸಂಘದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹರ್ಷ ವ್ಯಕ್ತಪಡಿಸಿದರು.ತಾಲೂಕಿನ ಕನಗನಮರಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಆಯ್ಕೆಯಾದ ಹಿನ್ನೆಲೆಯಲ್ಲಿ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಸಹಕಾರ ಸಂಘಗಳಲ್ಲಿನ ಚುನಾವಣೆಗಳ ಗೆಲುವು ಮುಂದಿನ ಜಿಪಂ, ತಾಪಂ ಚುನಾವಣೆಗಳ ದಿಕ್ಸೂಚಿಯಾಗಲಿವೆ. ಕಾರ್ಯಕರ್ತರು ಮುಂದಿನ ಚುನಾವಣೆಗಳಲ್ಲೂ ಒಗಟ್ಟು ಪ್ರದರ್ಶನ ಮಾಡಿ ಗೆಲುವಿಗೆ ಮುಂದಾಗಬೇಕು ಎಂದು ಕರೆ ನೀಡಿದರು.

ನೂತನ ನಿರ್ದೇಶಕ ಹೆಗ್ಗಡಹಳ್ಳಿ ಎಚ್.ಜೆ.ರಾಮಕೃಷ್ಣ ಮಾತನಾಡಿ, ನಮ್ಮ ನಾಯಕರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಅಭಿವೃದ್ದಿ ಕೆಲಸ ಕಾರ್‍ಯಗಳನ್ನು ಮೆಚ್ಚಿ ಷೇರುದಾರರು ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ಬಹುಮತ ನೀಡಿದ್ದಾರೆ ಎಂದರು.

8 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ನಾಯಕರಾದ ಸಿ.ಎಸ್.ಪುಟ್ಟರಾಜು ಅವರ ಸಲಹೆ, ಸಹಕಾರ, ಮಾರ್ಗದರ್ಶನಪಡೆದು ಎಲ್ಲಾ ನಿರ್ದೇಶಕರು ಜತೆಗೂಡಿ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಮತ ನೀಡಿದ ಎಲ್ಲಾ ಷೇರುದಾರ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರಾದ ಎಚ್.ಜೆ.ರಾಮಕೃಷ್ಣ, ದಿನೇಶ್, ಮಹದೇವು, ಶಿವಶಂಕರ, ಶೋಭಾ, ಬೊಮ್ಮರಾಜು, ಸಿ.ಕೆ.ಲೋಕೇಶ್, ಬೊಮ್ಮೇಗೌಡ ಅವರು ಆಯ್ಕೆಯಾದರು. ಕಾಂಗ್ರೆಸ್-ರೈತಸಂಘ ಬೆಂಬಲಿತ ಈರೇಗೌಡ, ಉಷಾ ಹಾಗೂ ಕುಳ್ಳಯ್ಯ ಅವರು ಆಯ್ಕೆಯಾಗಿದರು.

ಈ ವೇಳೆ ಮುಖಂಡರಾದ ಕೆ.ಪುಟ್ಟೇಗೌಡ, ಹೇಮಂತಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮಾಜಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ, ಸುರೇಂದ್ರ, ಪ್ರಕಾಶ್, ಚಿಕ್ಕಮರಳಿ ಗ್ರಾಮದ ಸಿ.ಪಿ.ರಮೇಶ್, ಡಾ.ಶ್ರೀನಿವವಾಸ್, ಚಂದ್ರಶೇಖರ್, ಶಿವಲಿಂಗೇಗೌಡ, ನುಗ್ಗಹಳ್ಳಿ ಗ್ರಾಮದ ಬಸವೇಗೌಡ, ವದೇಸಮುದ್ರ ಸೋಮಶೇಕರ್, ರವಿ ದೊಡ್ಡಕೊಪ್ಪಲು ಸೇರಿದಂತೆ ಜೆಡಿಎಸ್ ಪಕ್ಷದ ಎಲ್ಲ ಮುಖಂಡರು ಹಾಜರಿದ್ದರು.

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ