ಶಿರೋಳದಲ್ಲಿ ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

KannadaprabhaNewsNetwork |  
Published : Jun 05, 2024, 12:31 AM IST
(4ಎನ್.ಆರ್.ಡಿ.5 ಶಿರೋಳ ಗ್ರಾಮದ ಶ್ರೀ ತೋಂಟದಾರ್ಯ ಮಠದ ದ್ವಾರ ಬಾಗಲ ಮುಂದೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡುತ್ತಿದ್ದಾರೆ.)  | Kannada Prabha

ಸಾರಾಂಶ

ಬಸ್ ನಿಲ್ದಾಣ ಹತ್ತಿರ ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ಜೈ ಘೋಷ

ನರಗುಂದ: ಬಾಗಲಕೋಟೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡ್ರ ಗೆಲುವು ಸಾಧಿಸಿದ ಹಿನ್ನೆಲೆ ತಾಲೂಕಿನ ಶಿರೋಳ, ಕಪ್ಪಲಿ, ಕಲ್ಲಾಪೂರ, ರಡ್ಡೇರ ನಾಗನೂರ, ಖಾನಾಪುರ,ಗಂಗಾಪುರ, ಭೂಪಳಾಪುರ, ಗುಳಗಂದಿ, ಮೆಣಸಗಿ, ಕರಕಿಕಟ್ಟಿ, ಬೂದಿಹಾಳ, ಬೆಳ್ಳೇರಿ, ವಾಸನ, ಲಕಮಾಪೂರ ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ವಿಜಯೋತ್ಸವ ಆಚರಿಸಿದರು.

ಶಿರೋಳ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ನಂತರ ಶಿರೋಳ ಹಾಗೂ ಸುತ್ತಮುತ್ತಲಿನ ಬಿಜೆಪಿ ಕಾರ್ಯಕರ್ತರು ಒಂದೆಡೆ ಸೇರಿ ಬಸ್ ನಿಲ್ದಾಣ ಹತ್ತಿರ ಪರಸ್ಪರ ಬಣ್ಣ ಹಚ್ಚಿಕೊಂಡು ಪಟಾಕಿ ಸಿಡಿಸಿ ಜೈ ಘೋಷ ಹಾಕುತ್ತಾ ಮೇರವಣಿಗೆಯ ಮೂಲಕ ಶಿರೋಳದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ ನೀಡಿದ ಎಲ್ಲ ಮತದಾರ ಪ್ರಭುವಿಗೆ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ನಿಂಗಣ್ಣ ಗಾಡಿ, ನಿವೃತ್ತ ಶಿಕ್ಷಕ ವಿ.ಕೆ. ಮರಿಗುದ್ದಿ, ನಾಗನಗೌಡ ತಿಮ್ಮನಗೌಡ್ರ, ಗುರಬಸಯ್ಯ ನಾಗಲೋಟಿಮಠ, ಶಂಕ್ರಪ್ಪ ಕಾಡಪ್ಪನವರ, ಡಾ. ವಿ.ಎಸ್. ಚವಡಿ, ಜಂಬಣ್ಣ ದಿಂಡಿ, ವೀರಣ್ಣ ಕೊಡಬಳ್ಳಿ, ಬೀರಪ್ಪ ಕಾಡಪ್ಪನವರ, ಶಿವಾನಂದ ಯಲಬಳ್ಳಿ, ಬಸವರಾಜ ಗಡೇಕಾರ, ಪ್ರವೀಣ ಶೆಲ್ಲಿಕೇರಿ, ಹನಮಂತ ಕಾಡಪ್ಪನವರ, ಉಮೇಶ ಮರಿಗುದ್ದಿ, ಬಸವರಾಜ ಕಂಬಳಿ, ದ್ಯಾಮಣ್ಣ ಶಾಂತಗೇರಿ, ರವಿ ದೋತ್ರದ, ಸತೀಶ ಕುಬಸದ, ಶಿವಯೋಗಿ ಶಾಂತಗೇರಿ, ಗ್ಯಾನೇಶ ಪಾರಗೆ, ಪರುತಪ್ಪ ಜಂಗಿನ, ಮೈಲಾರಪ್ಪ ಹಿರೇಮನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''