ಕನ್ನಡಪ್ರಭ ವಾರ್ತೆ ವಡಗೇರಾ
ಈ ವೇಳೆ ಕಾಂಗ್ರೆಸ್ ಮುಖಂಡ ಬಸವರಾಜ್ ನೀಲಹಳ್ಳಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಾಧನೆಗಳೇ ನಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಬಿಜೆಪಿ ಪಕ್ಷದವರ ಸುಳ್ಳಿಗೆ ಜನ ತಿರುಗೇಟು ನೀಡಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಲೋಕಸಭಾ ಸದಸ್ಯರನ್ನು ಗೆಲ್ಲಿಸುವ ಮೂಲಕ ಪಕ್ಷಕ್ಕೆ ಬಲವನ್ನು ತಂದು ಕೊಟ್ಟಿದ್ದಾರೆ. ಆ ಕಾರಣ ನಾನು ಮತದಾರ ಬಂಧುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.
ವಡಗೇರಾ ತಾಲೂಕಿನ ಸಮಸ್ಯೆಗಳನ್ನು ನೂತನ ಲೋಕಸಭಾ ಸದಸ್ಯರ ಗಮನಕ್ಕೆ ತಂದು ನಮ್ಮ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಪಡಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.ಕಾಂಗ್ರೆಸ್ ಮುಖಂಡರಾದ ದೇವೇಂದ್ರಪ್ಪ ಕಡೇಚೂರ, ಪಂಚ ಗ್ಯಾರಂಟಿಗಳ ಸದಸ್ಯ ಬನುರಾಜ ಸ್ವಾಮಿ, ನಿಂಗನಗೌಡ ಬೋರಡ್ಡಿ, ಸಂಗುಗೌಡ ಮಾಲಿ ಪಾಟೀಲ್, ಶಿವರಾಜ್ ನಾಡಗೌಡ, ಸೈಯದ್ ಸಾಬ್, ಮಹ್ಮದ್ ರಫಿ ನಾಯ್ಕೋಡಿ, ತಿರುಕಪ್ಪ ದೂರೆ, ಮಲ್ಲಪ್ಪ ಮಾಗನೂರ, ಜಯಕುಮಾರ್ ಮರ್ಕಲ್, ಮಲ್ಲಪ್ಪ ಕೊಪ್ಪೂರ, ಪೀರಸಾಬ್ ಮರಡಿ, ತಿಮ್ಮಣ್ಣ ಕಡೇಚೂರ, ಶರೀಫ್ ಕುರಿ, ರಾಜು ನಾಯಕ, ಸಾಹೇಬ್ ರೆಡ್ಡಿ ಹೊರಟುರ ಇತರರಿದ್ದರು.