ಜೂನ್ 5ಕ್ಕೆ 10 ಸಾವಿರ ಬೈಕ್‌ಗಳ ವಿಧಾನಸೌಧ ಚಲೋ

KannadaprabhaNewsNetwork |  
Published : May 21, 2026, 01:15 AM IST
KIADB

ಸಾರಾಂಶ

ಜಿಲ್ಲಾಡಳಿತ ಭವನದ ಮುಂದೆ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳನ್ನು ಕೆ.ಐ.ಎ.ಡಿ.ಬಿ. ಭೂಸ್ವಾಧೀನ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ, ದಲಿತಪರ ಹೋರಾಟಗಾರರು ನಡೆಸುತ್ತಿರುವ ಅಹೋರಾತ್ರಿ, ಅನಿರ್ದಿಷ್ಟಾವಧಿ ಹೋರಾಟ

 ಚಿಕ್ಕಬಳ್ಳಾಪುರ:  ರಾಜ್ಯ ಸರ್ಕಾರ ಕೈಗಾರಿಕೆ ನೆಪದಲ್ಲಿ ರೈತರ ಭೂಮಿ ಕಬಳಿಸುವ ಕೆಲಸ ಮಾಡುತ್ತಿದೆ. ಆದರೆ ಕಳೆದ 20 ವರ್ಷಗಳಿಂದ ಲಕ್ಷಾಂತರ ಎಕರೆ ಭೂಮಿ ಕಬಳಿಕೆಯಲ್ಲಿ ಕೇವಲ ಶೇ.25 ರಷ್ಟು ಸಹ ಭೂಮಿ ಕೈಗಾರಿಕೆಗೆ ಬಳಕೆಯಾಗಿಲ್ಲ. ಇದೊಂದು ಹಗಲು ದರೋಡೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಜಿಲ್ಲಾಡಳಿತ ಭವನದ ಮುಂದೆ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳನ್ನು ಕೆ.ಐ.ಎ.ಡಿ.ಬಿ. ಭೂಸ್ವಾಧೀನ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ, ದಲಿತಪರ ಹೋರಾಟಗಾರರು ನಡೆಸುತ್ತಿರುವ ಅಹೋರಾತ್ರಿ, ಅನಿರ್ದಿಷ್ಟಾವಧಿ ಹೋರಾಟದ 66 ನೇ ದಿನವಾದ ಬುಧವಾರ ಭಾಗವಹಿಸಿ ಮಾತನಾಡಿದರು.

13 ಹಳ್ಳಿಗಳ 2823 ಎಕರೆ ಫಲವತ್ತಾದ ಭೂಮಿಯನ್ನು ಭೂಸ್ವಾಧೀನ

ಜಿಲ್ಲೆಯ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ 2823 ಎಕರೆ ಫಲವತ್ತಾದ ಭೂಮಿಯನ್ನು ಭೂಸ್ವಾಧೀನ ಮಾಡಿದ್ದಾರೆ. ಈ ಭೂಮಿ ಹೂವು, ಹಣ್ಣು, ಕಾಯಿ, ತರಕಾರಿ, ಸೊಪ್ಪು, ಮಾವು, ಗೋಡಂಬಿ, ಶುಂಠಿ, ಅಲ್ಲದೇ ರೇಷ್ಮೆ ಬೆಳೆಯುತ್ತಾರೆ. ತೆಂಗು, ಅಡಿಕೆ ಕೂಡ ಇದೆ. ಹೀಗಾಗಿ ಇದನ್ನು ಕೈಬಿಡಬೇಕೆಂದು ಈವರೆಗೂ ಅನೇಕ ಹೋರಾಟಗಳು ನಡೆದಿವೆ ಎಂದರು.ರೈತರ ಹೋರಾಟವನ್ನು ಸುಲಭವಾಗಿ ಪರಿಗಣಿಸಬೇಡಿ. ಸರ್ಕಾರದ ಅಡಿಯಲ್ಲಿರುವ ಕೆ.ಐ.ಎ.ಡಿ.ಬಿ. ಅದೊಂದು ಸರ್ಕಾರಿ ರಿಯಲ್ ಎಸ್ಟೇಟ್ ಏಜೆಂಟ್ ಇದ್ದ ಹಾಗೆ. ರೈತರ ಜಮೀನು ಕಸಿದುಕೊಂಡು ಕಾರ್ಪೋರೇಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿರುವ ಸರ್ಕಾರ ರೈತರನ್ನು ದಿವಾಳಿ ಎಬ್ಬಿಸಲು ಬಿಡೋದಿಲ್ಲ. ಕೈಗಾರಿಕೆ ಹೆಸರೇಳಿ ಎಷ್ಟು ಜಮೀನು ವಶಕ್ಕೆ ಪಡೆದಿದ್ದೀರಾ? ಎಷ್ಟು ಕೈಗಾರಿಕೆಗಳನ್ನು ಸ್ಥಾಪಿಸಿ ಎಷ್ಟು ಜನಕ್ಕೆ ಉದ್ಯೋಗ ನೀಡಿದ್ದೀರಿ ಎಂದು ಪ್ರಶ್ನಿಸಿದರು.

ಡಿಸಿಎಂಗೂ ಎಚ್ವರಿಕೆ ಘಂಟೆ: 

ರ್‍ಯಾಲಿ ಮೂಲಕ ರಾಜ್ಯಾದ್ಯಂತ ಹತ್ತು ಸಾವಿರಕ್ಕೂ ಹೆಚ್ವು ಜನ ಲಗ್ಗೆ ಇಡಲಿದ್ದಾರೆ. ನಮ್ಮನ್ನು ತಡೆಯುವ ತಾಕತ್ತು ಯಾರಿಗಿದೆ. ನೋಡೋಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ವಾಹನ ಚಾಲಕರು ವ್ಯಾಪಾರಿಗಳಿಗೆ ಏನಾದರೂ ತೊಂದರೆ ಅದರೆ ಅದಕ್ಕೆ ನಾವು ಹೊಣೆಗಾರರಲ್ಲ. ಅದಕ್ಕೆ ನಮ್ಮನ್ನು ತಡೆಯುತ್ತಿರುವ ಪೊಲೀಸರಾಗಲಿ ಜಿಲ್ಲಾಡಳಿತವಾಗಲಿ, ಸರ್ಕಾರ ಆಗಲಿ ಜವಾಬ್ದಾರರಾಗುತ್ತಾರೆ.

 ಈ ಹೋರಾಟ ಕೇವಲ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿ ಕೈಗಾರಿಕಾ ವಲಯಕ್ಕೆ ಮಾತ್ರ ಸೀಮಿತವಲ್ಲ. ಬಿಡದಿ ಬಳಿ ಕೈಗಾರಿಕಾ ವಲಯ ನಿರ್ಮಾಣ ಮಾಡಲು ಹೊರಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ಗೂ ಎಚ್ವರಿಕೆ ಘಂಟೆಯಾಗಿದೆ. ಅಲ್ಲಿಯೂ ನಮ್ಮ ಹೋರಾಟ ಪ್ರಾರಂಭವಾಗಲಿದೆ. ರೈತರು ಏನು ಮಾಡುತ್ತಾರೆ ಎಂಬ ಉದಾಸೀನ ಸಲ್ಲ. ನಾವು ಹಸಿರು ಟವೆಲ್‌ ಮೇಲೆತ್ತಿ ತಿರುಗಿಸಿದರೆ ನೀವೆಲ್ಲಾ ರೈತನ ಬಳಿ ಬರಲೇ ಬೇಕು. ಎಚ್ಚರ ಇನ್ನು 15 ದಿನ ಸಮಯವಿದೆ. ಅಷ್ಟರೊಳಗೆ ಜಂಗಮಕೋಟೆ ಕೈಗಾರಿಕಾ ವಲಯ ನಿರ್ಮಾಣ ಕೈಬಿಡಿ ಇಲ್ಲಾಂದ್ರೆ ಅಗುವ ಪರಿಣಾಮವೇ ಬೇರೆ ಎಂದು ಎಚ್ಚರಿಕೆ ಕೊಟ್ಟರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಾದಿ ತಪ್ಪಿದ ಪಾದಚಾರಿ ಮಾರ್ಗ ನಡಿಗೆ
ಸರ್ಕಾರಿ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ವಿತರಣೆ