ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ರಾಜಕೀಯ ಪರಿಚಾರಕ, ಧೀಮಂತ ಪತ್ರಕರ್ತ ಪಿ.ಎನ್.ಜವರಪ್ಪಗೌಡ ಪತ್ರಿಕಾ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಇಡೀ ವಿಧಾನಸೌಧವೇ ದುಡ್ಡಿನ ಹಿಂದೆ ಓಡುತ್ತಿದೆ. ವಿಧಾನಸೌಧದಲ್ಲಿರುವ ಶೇ.೮೦ರಷ್ಟು ರಾಜಕಾರಣಿಗಳು ರಿಯಲ್ ಎಸ್ಟೇಟ್ ಏಜೆಂಟರಾಗಿದ್ದಾರೆ. ಸರ್ಕಾರವೇ ರಿಯಲ್ ಎಸ್ಟೇಟ್ ಉದ್ಯಮಿಯಂತೆ ವರ್ತಿಸುತ್ತಿದೆ. ಇಡೀ ಸಮಾಜ, ಸರ್ಕಾರ, ವ್ಯವಸ್ಥೆಯೇ ಹಾಳಾಗಿದೆ. ಹೀಗಿದ್ದರೂ ಜನರು ಯಾವುದನ್ನೂ ಪ್ರಶ್ನೆ ಮಾಡುತ್ತಿಲ್ಲ. ಅದಕ್ಕಾಗಿ ಸರ್ಕಾರ ನಾವು ಮಾಡಿದ್ದೆಲ್ಲವನ್ನೂ ಸರಿ ಎನ್ನುತ್ತಿದೆ ಎಂದು ಹೇಳಿದರು.ಇಂದಿನ ರಾಜಕಾರಣಿಗಳು ಜನಪ್ರತಿನಿಧಿಯಾಗಿಯೂ ಉಳಿದಿಲ್ಲ, ಸೇವಕರಾಗಿಯೂ ಉಳಿದಿಲ್ಲ. ಇನ್ನು ಪರಿಚಾರಕರಂತೂ ಇಲ್ಲವೇ ಇಲ್ಲ. ಕಳ್ಳರಿಂದ ರಾಜಕೀಯ ರಂಗ ತುಂಬಿಹೋಗಿದೆ. ಯಾವುದೋ ಗ್ಯಾರಂಟಿಗಳನ್ನು ಕೊಡುವ ಬದಲು ಅಕ್ಷರ, ಆರೋಗ್ಯವನ್ನು ಉಚಿತವಾಗಿ ಜನರಿಗೆ ನೀಡಿದ್ದರೆ ಅವರ ಬದುಕು ಎಷ್ಟೋ ಸುಧಾರಣೆಯಾಗುತ್ತಿತ್ತು. ಅಂತಹ ಆಲೋಚನೆಗಳಿಲ್ಲದ ಸರ್ಕಾರ ಜನಪರವಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಅಭಿವೃದ್ಧಿ ಎನ್ನುವುದು ರಾಜಕಾರಣಿಗಳ ಸ್ವಾರ್ಥಕ್ಕೆ ನುಚ್ಚುನೂರಾಗಿದೆ. ರೈತ- ದಲಿತ ಸಂಘಟನೆಗಳು ಒಡೆದು ಹಾಳಾಗಿವೆ. ಸರ್ಕಾರದ ವೈಫಲ್ಯಗಳು ವ್ಯವಸ್ಥೆಯನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದೆ. ಇದೆಲ್ಲವನ್ನೂ ಸರಿಪಡಿಸುವವರು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ ಎಂದು ಹೇಳಿದರು.
ಭಾರತ ಸ್ವಾತಂತ್ರ್ಯಗೊಂಡು ಮೊದಲ ಚುನಾವಣೆ ನಡೆಸುವ ಸಮಯದಲ್ಲಿ ಜವಾಹರಲಾಲ್ ನೆಹರು ಬಳಿ ಬಂದ ಟಾಟಾ-ಬಿರ್ಲಾ ಸಂಸತ್ತಿನ ಚುನಾವಣೆಯಲ್ಲಿ ನಮಗೂ ಸೀಟುಗಳನ್ನು ಮೀಸಲಿಡಬೇಕೆಂಬ ಪ್ರಸ್ತಾಪ ಮುಂದಿಟ್ಟಾಗ, ನೆಹರು ಅವರು ಭಾರತ ಈಗಷ್ಟೇ ಸ್ವಾತಂತ್ರ್ಯ ಕಂಡಿದೆ. ರಸ್ತೆಗಳು, ಸೇತುವೆಗಳು, ಸಂಪರ್ಕಗಳು, ಆಸ್ಪತ್ರೆ, ಶಿಕ್ಷಣ ಹೀಗೆ ಅನೇಕ ಕ್ಷೇತ್ರಗಳು ಅಭಿವೃದ್ಧಿಯಾಗಬೇಕಿದೆ. ಮೊದಲು ಅವುಗಳಿಗೆ ಆದ್ಯತೆ ನೀಡಿ. ಏಕೆಂದರೆ, ರಾಜಕೀಯ ಅಧಿಕಾರ ಮತ್ತು ಹಣದ ಶಕ್ತಿ ಒಂದೇ ಕಡೆ ಕೇಂದ್ರೀಕೃತವಾಗಬಾರದು ಎಂದಿದ್ದರು. ಆದರೆ, ಇಂದು ಅದಕ್ಕೆ ಪೂರಕವಾಗಿಯೇ ನಡೆಯುತ್ತಿರುವುದು ವಿಪರ್ಯಾಸ ಎಂದರು.