ದೇಶದ ಭದ್ರತೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರರು

KannadaprabhaNewsNetwork |  
Published : Jun 27, 2026, 01:45 AM IST
ಪೋಟೋ 4 : ನೆಲಮಂಗಲ ತಾಲೂಕಿನ ಕಂಬಯ್ಯನಪಾಳ್ಯದಲ್ಲಿ ಹರ್ಷ ಸಂಸ್ಥೆಯಿಂದ ಹರ್ಷ ಕ್ಯಾಂಪಸ್ -2ರಲ್ಲಿ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ವಿಶ್ವದರ್ಶಿ ದಾರ್ಶನಿಕರ ಭೇಟಿ ಸಮಾರಂಭದಲ್ಲಿ : ಕನ್ಯಾಕುಮಾರಿ ಎನ್‍ಐಸಿಹೆಚ್‍ಇ ಉಪಕುಲಪತಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ಅವರನ್ನು ಆಡಳಿತ ಮಂಡಳಿಯವರು ಅಭಿನಂದಿಸಿದರು. | Kannada Prabha

ಸಾರಾಂಶ

ದಾಬಸ್‍ಪೇಟೆ: ದೇಶದ ಭದ್ರತೆಯ ವಿಚಾರದಲ್ಲಿ ಪ್ರತಿಯೊಬ್ಬರ ಕರ್ತವ್ಯಗಳನ್ನು ನೆನಪಿಸಿಕೊಂಡು ಪಾಲಿಸಬೇಕು ಎಂದು ಕನ್ಯಾಕುಮಾರಿ ಎನ್‍ಐಸಿಹೆಚ್‍ಇ ಉಪಕುಲಪತಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ತಿಳಿಸಿದರು

ದಾಬಸ್‍ಪೇಟೆ: ದೇಶದ ಭದ್ರತೆಯ ವಿಚಾರದಲ್ಲಿ ಪ್ರತಿಯೊಬ್ಬರ ಕರ್ತವ್ಯಗಳನ್ನು ನೆನಪಿಸಿಕೊಂಡು ಪಾಲಿಸಬೇಕು ಎಂದು ಕನ್ಯಾಕುಮಾರಿ ಎನ್‍ಐಸಿಹೆಚ್‍ಇ ಉಪಕುಲಪತಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ತಿಳಿಸಿದರು.

ತಾಲೂಕಿನ ಕಂಬಯ್ಯನಪಾಳ್ಯದಲ್ಲಿ ಹರ್ಷ ಸಂಸ್ಥೆಯ ಹರ್ಷ ಕ್ಯಾಂಪಸ್ -2ರಲ್ಲಿ ಆಯೋಜಿಸಿದ್ದ ವಿಶ್ವದರ್ಶಿ ದಾರ್ಶನಿಕರ ಭೇಟಿ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಆತ್ಮಸೈರ್ಯದಿಂದ ಬದುಕಬೇಕು. ವಿದ್ಯಾರ್ಥಿ ಜೀವನ ಅಪರೂಪದ ಸಮಯ, ಈ ಸಮಯದಲ್ಲಿ ಕಲಿತ ಅನುಭವ ಪೂರ್ಣ ಜೀವನಕ್ಕೆ ಪ್ರೇರಣೆಯಾಗುತ್ತದೆ. ಸ್ವಲ್ಪ ಹೆಚ್ಚು ಪರಿಶ್ರಮ ಪಟ್ಟರೆ ಜಗತ್ತು ಇರುವ ತನಕ ನಮ್ಮ ಹೆಸರು ಇರುವಂತೆ ಮಾಡಬಹುದು. ದೇಶದ ಭದ್ರತೆ ವಿಷಯದಲ್ಲಿ ಭಾರತದ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಪಾಲನೆ ಮಾಡಬೇಕು. ಇಂದಿನ ವಿದ್ಯಾರ್ಥಿಗಳು ರಕ್ಷಣಾ ವಲಯದಲ್ಲಿ ಕೆಲಸ ಮಾಡುವ ಅವಕಾಶಗಳನ್ನು ಪಡೆದುಕೊಳ್ಳಬೇಕು. ದೇಶದ ರಕ್ಷಣಾ ವಲಯದಲ್ಲಿ ಅನೇಕ ವಿವಿಧ ಹಂತದ ಉದ್ಯೋಗಗಳಿದ್ದು ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹರ್ಷ ಸಮೂಹ ಸಂಸ್ಥೆ ಸಹಕಾರ್ಯದರ್ಶಿ ಯಶಸ್ ಶಿವಕುಮಾರ್ ಮಾತನಾಡಿ, ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಕರೆಸಿ ವಿದ್ಯಾರ್ಥಿಗಳಿಗೆ ಅವರ ಅನುಭವ ಹಾಗೂ ಮಾರ್ಗದರ್ಶನ ಮಾಡುವ ಸದುದ್ದೇಶದಿಂದ ವಿಶ್ವದರ್ಶಿ ಎಂಬ ಕಾರ್ಯಕ್ರಮವನ್ನು ಹರ್ಷ ಸಮೂಹ ಸಂಸ್ಥೆಯಿಂದ ಆರಂಭಿಸಿದ್ದು ಏರೋನಾಟಿಕಲ್ ಸಿಸ್ಟಮ್ಸ್ ಮಾಜಿ ಮಹಾನಿರ್ದೇಶಕರಾಗಿ ಹಾಗೂ ಪ್ರಸ್ತುತ ಕನ್ಯಾಕುಮಾರಿ ಎನ್‍ಐಸಿಹೆಚ್‍ಇನ ಉಪಕುಲಪತಿಯಾಗಿರುವ ಡಾ.ಟೆಸ್ಸಿ ಥಾಮಸ್‍ರವರು ಲೋಕಾರ್ಪಣೆಗೊಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ವಿದ್ಯಾರ್ಥಿಗಳ ಜತೆ ಸಂವಾದ: ಹರ್ಷ ಸಮೂಹ ಸಂಸ್ಥೆ ವಿದ್ಯಾರ್ಥಿಗಳು, ತುಮಕೂರಿನ ಸರ್ವೋದಯ ಕಾಲೇಜು, ಮಹೇಶ್‍ಪಿಯು ಕಾಲೇಜು, ಕದಂಬ ಕಾಲೇಜು ವಿದ್ಯಾರ್ಥಿಗಳ ಜತೆ ಭಾರತದ ರಕ್ಷಣಾ ವಲಯ ಹಾಗೂ ವಿವಿಧ ಭದ್ರತಾ ವಿಚಾರಗಳ ಬಗ್ಗೆ ಸಂವಾದ ನಡೆಸಿದ ಡಾ.ಟೆಸ್ಸಿ ಥಾಮಸ್‍ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ಜತೆ ಅನೇಕ ಸಲಹೆ ಸೂಚನೆಗಳನ್ನು ನೀಡಿದರು. ಭಾರತದ ರಕ್ಷಣಾ ವಲಯದ ಶ್ರೇಷ್ಟತೆಯ ಬಗ್ಗೆಯೂ ಸಹ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಹರ್ಷ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷೆ ಗಿರಿಜಾಶಿವಕುಮಾರ್, ಕಾಯದರ್ಶಿ ಹರ್ಷ ಶಿವಕುಮಾರ್, ಆರೋಗ್ಯ ಸಂಸ್ಥೆ ನಿರ್ದೇಶಕ ವಸಂತ್‍ಕುಮಾರ್, ಹರ್ಷ ಸಂಸ್ಥೆ ಪ್ರಾಂಶುಪಾಲರು ಸೇರಿದಂತೆ ವಿವಿಧ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೋಟ್

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೆರ್ಯ ಮೂಡಿಸಲು ಹಾಗೂ ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಲು ಹರ್ಷ ಸಂಸ್ಥೆ ವಿಶ್ವದರ್ಶಿ ಕಾರ್ಯಕ್ರಮ ಆರಂಭಿಸಿದೆ. ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆಯ ಅಗ್ನಿ4, ಅಗ್ನಿ5 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತಕ್ಕೆ ಸಮರ್ಪಿಸಿದ ಮಿಸೈಲ್ ವುಮೆನ್, ಹಿರಿಯ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ಅವರು ವಿದ್ಯಾರ್ಥಿಗಳಿಗೆ ಸಲಹೆ, ಮಾರ್ಗದರ್ಶನ ನೀಡಿರುವುದು ಸಂತೋಷವಾಗಿದೆ.

ಶಿವಕುಮಾರ್, ಅಧ್ಯಕ್ಷರು, ಹರ್ಷ ಸಂಸ್ಥೆ

ಪೋಟೋ 4 :

ನೆಲಮಂಗಲ ತಾಲೂಕಿನ ಕಂಬಯ್ಯನಪಾಳ್ಯದಲ್ಲಿ ಹರ್ಷ ಸಂಸ್ಥೆಯಿಂದ ಹರ್ಷ ಕ್ಯಾಂಪಸ್ -2ರಲ್ಲಿ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಲಾಗಿದ್ದ ವಿಶ್ವದರ್ಶಿ ದಾರ್ಶನಿಕರ ಭೇಟಿ ಸಮಾರಂಭದಲ್ಲಿ ಕನ್ಯಾಕುಮಾರಿ ಎನ್‍ಐಸಿಎಚ್‍ಇ ಉಪಕುಲಪತಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್ ಅವರನ್ನು ಆಡಳಿತ ಮಂಡಳಿಯವರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುತ್ತತ್ತಿಯಲ್ಲಿ ಆಯುರ್ವೇದ ವೈದಾಧಿಕಾರಿ ಆತ್ಮಹತ್ಯೆ
ವಿಧಾನಸೌಧ ವ್ಯಾಪಾರಿ ಕೇಂದ್ರವಾಗಿ ಪರಿವರ್ತನೆ: ಹೆಚ್.ವಿಶ್ವನಾಥ್