ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ನಗರದ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿರುವ ಶಾಸಕ ಪ್ರದೀಪ್ ಈಶ್ವರ್ ಅವರನ್ನುಏಕವಚನದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡರು.
ಕುಮಾರಣ್ಣ ನ್ಯಾಯಾಲಯ ನೀಡಿದ ನೋಟಿಸನ್ನಷ್ಟೆ ಜೆಡಿಎಸ್ ಪಕ್ಷದ ಪೇಜಿನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆಯೇ ಹೊರತು ಅವರು ಎಲ್ಲಿಯೂ ಪ್ರದೀಪ್ ಈಶ್ವರ್ ಹೆಸರು ಉಲ್ಲೇಖ ಮಾಡಿಲ್ಲ. ಆದರೆ ಪ್ರದೀಪ್ ಈಶ್ವರ್ ರವರು ಕುಮಾರಸ್ವಾಮಿ, ದೇವೇಗೌಡರ ಕುಟುಂಬದ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದರು.ಆಸ್ತಿಪಾಸ್ತಿ, ವಾಚುಗಳ ಬಗ್ಗೆ ಮಾತನಾಡಿದ್ದಾರೆ. ಬದನೆಕಾಯಿ ಮಾರಿ ಸಂಪಾದನೆ ಮಾಡಿದ್ದೀರಾ ಎಂದು ಮಾತನಾಡಿದ್ದಾರೆ. ನಾನೊಬ್ಬ ಓಬಿಸಿ ಹುಡುಗ ಎಂದಿದ್ದಾರೆ. ನೀವು ಶಾಸಕರಾಗುವ ಮೊದಲು ಎಷ್ಟು ಆಸ್ತಿ ಇತ್ತು?. ಈಗ ಎಷ್ಟು ಆಸ್ತಿ ಮಾಡಿದ್ದೀರಿ? ಲೆಕ್ಕಕೊಡಿ, ಒಬ್ಬ ನೀಟ್ ವಿದ್ಯಾರ್ಥಿಗೆ ಬೇರೆ ಕಡೆ 1.5 ಲಕ್ಷ ರು. ತೆಗೆದು ಕೊಂಡರೆ ನೀವು ಮೂರು ಲಕ್ಷ ತಗೋತೀರಿ. ನೀವೊಬ್ಬ ಓಬಿಸಿ ನನ್ನ ಏಳಿಗೆ ಸಹಿಸೋದಿಲ್ಲ ಎಂದಿದ್ದೀರಿ. ನೀವೊಬ್ಬ ಬಲಜಿಗ, ನಾನು ಬಲಿಜಿಗ ಮುಖಂಡರಾದ ಸಿ.ವಿ. ವೆಂಕಟರಾಯಪ್ಪ, ಕೆ.ವಿ. ನವೀನ್ ಕಿರಣ್, ಸಂಸದ ಪಿ.ಸಿ. ಮೋಹನ್. ಎಂ ಎಸ್. ರಾಮಯ್ಯ ಮತ್ತು ಅವರ ಕುಟುಂಬ ಹಾಗೂ ಕಾಲಜ್ಞಾನಿ ಕೈವಾರ ತಾತಯ್ಯ ಸೇರಿದಂತೆ ವಂಶಸ್ಥರಲ್ಲಿ ಸಾಕಷ್ಟು ಮಂದಿಯನ್ನು ಕಂಡಿದ್ದೇನೆ ಹಾಗೂ ಅವರ ಬಗ್ಗೆ ಕೇಳಿದ್ದೇನೆ. ಅವರು ಯಾರೂ ಹೀಗೆ ಅಹಂಭಾವದಿಂದ ಮಾತಾಡಿಲ್ಲ. ನನಗೆ ನೀವು ಬಲಿಜಿಗನೇ ಅಲ್ಲವೋ ಎಂಬ ಬಗ್ಗೆ ಅನುಮಾನ ಇದೆ. ಇಷ್ಟೆಲ್ಲಾ ಮಾತಾಡೋಕೆ ಮತ್ತು ಶಾಸಕರಾಗೋಕೆ ನಿಮಗೆ ಅವಕಾಶ ಮಾಡಿಕೊಟ್ಟಿದ್ದೆ ಜೆ.ಡಿ.ಎಸ್ ಕಾರ್ಯಕರ್ತರು ಅನ್ನೋದು ಮರೀಬೇಡಿ. ನಿಮ್ಮ ಮುಖ ನೋಡಿ ಯಾರೂ ಓಟಾಕಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿದರು.