13ರಂದು ವಿದುಷಿ ದಿವ್ಯಾ ನಾಯ್ಕ ಭರತನಾಟ್ಯ ರಂಗ ಪ್ರವೇಶ

KannadaprabhaNewsNetwork | Published : Apr 11, 2025 12:32 AM

ಸಾರಾಂಶ

ಕಾರ್ಯಕ್ರಮದಲ್ಲಿ ವಿದುಷಿ ದಿವ್ಯಾ ನಾಯ್ಕ ಅವರು ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ವರ್ಣ, ದೇವರನಾಮ, ತಿಲ್ಲಾನ ಹಾಗೂ ವಿಶೇಷ ಏಕವ್ಯಕ್ತಿ ರೂಪಕ ಗಂಗಾ ವನ್ನು ಪ್ರದರ್ಶಿಸಲಿದ್ದಾಳೆ.

ಹಾವೇರಿ: ಶಿರಸಿಯ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರ ಹಾವೇರಿ ಶಾಖೆ ವತಿಯಿಂದ ಏ.13ರಂದು ಸಂಜೆ 4.30ಕ್ಕೆ ನಗರದ ಗೆಳೆಯರ ಬಳಗ ಪ್ರಾಥಮಿಕ ಶಾಲೆಯ ಕಲಾಭವನದಲ್ಲಿ ವಿದುಷಿ ದಿವ್ಯಾ ನಾಯ್ಕ ಅವರ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ್ ಭಟ್ಟ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ವಿದುಷಿ ದಿವ್ಯಾ ನಾಯ್ಕ ಅವರು ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಜತಿಸ್ವರ, ಶಿವಸ್ತುತಿ, ವರ್ಣ, ದೇವರನಾಮ, ತಿಲ್ಲಾನ ಹಾಗೂ ವಿಶೇಷ ಏಕವ್ಯಕ್ತಿ ರೂಪಕ ಗಂಗಾ ವನ್ನು ಪ್ರದರ್ಶಿಸಲಿದ್ದಾಳೆ. ಬಳಿಕ ಗುರುಗಳಾದ ಸಹನಾ ಭಟ್ಟ ಅವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ ವಹಿಸಿಕೊಳ್ಳಲಿದ್ದಾರೆ ಎಂದರು.ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಎನ್.ಆರ್. ಬಿರಸಾಲ, ಸಾಹಿತಿ ಹನುಮಂತಗೌಡ ಗೊಲ್ಲರ, ಪತ್ರಕರ್ತ ವಿಜಯ ಹೂಗಾರ, ಗೋಟಗೋಡಿ ಜಾನಪದ ವಿವಿಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ವೆಂಕನಗೌಡ ಪಾಟೀಲ ಭಾಗವಹಿಸಲಿದ್ದಾರೆ. ಗುರುಗಳಾದ ಹುಬ್ಬಳ್ಳಿಯ ಡಾ. ಸಹನಾ ಭಟ್ಟ, ಇವರ ನಿರ್ದೇಶನದಲ್ಲಿ ಸಂಪೂರ್ಣ ಕಾರ್ಯಕ್ರಮ ಮೂಡಿಬರಲಿದೆ ಎಂದರು.ವಿದುಷಿ ದಿವ್ಯಾ ಅವರ ತಂದೆ ಹನುಮಂತ ನಾಯ್ಕ ಮಾತನಾಡಿದರು. ಪ್ರೀತಿಯ ಮೂಲಕ ವಿಶ್ವವನ್ನೇ ಗೆದ್ದ ದಿವ್ಯಪುರುಷ

ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರ ಜನಸಂಪರ್ಕ ಕಚೇರಿಯಲ್ಲಿ ಗುರುವಾರ ಭಗವಾನ ಮಹಾವೀರ ಜಯಂತಿ ಆಚರಿಸಲಾಯಿತು.

ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಮುಖಂಡರು, ಸತ್ಯ, ಅಹಿಂಸೆ, ಕ್ಷಮೆ ಮುಂತಾದ ಮಾನವೀಯ ಮೌಲ್ಯಗಳ ನೆಲೆಯಲ್ಲಿ ಧಾರ್ಮಿಕ ಚಿಂತನೆಗಳನ್ನು ಪ್ರಚುರಪಡಿಸಿ ಪ್ರೀತಿಯ ಮೂಲಕ ವಿಶ್ವವನ್ನೇ ಗೆದ್ದ ದಿವ್ಯಪುರುಷ ಭಗವಾನ ಮಹಾವೀರರ ಬದುಕು ಮತ್ತು ಬೋಧನೆಗಳು ಸರ್ವಕಾಲಕ್ಕೂ ಆದರಣೀಯ. ಮಹಾವೀರರ ಚಿಂತನೆಗಳು ಭಾಷಣಗಳಿಗೆ ಸೀಮಿತವಾಗದೇ ಬದುಕಿನ ಭಾಗವಾಗಬೇಕಿದೆ. ವಿಶ್ವಪ್ರೇಮ, ಭ್ರಾತೃತ್ವಗಳು ಸಮಾಜವನ್ನು ಬೆಸೆಯಬೇಕಿದೆ. ಯುದ್ಧ ಮಾಡದೇ ಜಗತ್ತು ಹೇಗೆ ಗೆಲ್ಲಬಹುದು ಎಂದು ಬದುಕಿ ತೋರಿಸಿಕೊಟ್ಟ ಮಹಾವೀರರ ಶಾಂತಿ, ಅಹಿಂಸೆ ಮತ್ತು ಸಮಾನತೆಯ ಮಂತ್ರವನ್ನು ನಾವೆಲ್ಲರೂ ಪಾಲಿಸುವ ಸಂಕಲ್ಪ ಮಾಡೋಣ ಎಂದರು.ಯುವ ಕಾಂಗ್ರೆಸ್ ತಾಲೂಕಾಧ್ಯಕ್ಷ ಸಂತೋಷ ದುಂಡಣ್ಣನವರ, ಮುಖಂಡರಾದ ನಾಗಯ್ಯ ಹಿರೇಮಠ, ನಾಗಣ್ಣ ನಡುವಿನಮನಿ, ರಾಜೇಂದ್ರ ಜಿನ್ನಣ್ಣವರ, ಶ್ರೀಕಾಂತ ದುಂಡಣ್ಣವರ, ನಾಗರಾಜ ಬೊಮ್ಮಣ್ಣವರ, ವರ್ಧಮಾನ ಮಂತಗಿ, ಸುರೇಶ ನಡುವಿನಮನಿ, ಅಶೋಕ ಕಾಡನವರ, ರಾಜಕುಮಾರ ಶಿರಪಂತಿ, ಅರುಣ ಉಮ್ಮಣ್ಣನವರ, ಶೇಖರ ಹರಿಜನ, ಪ್ರಕಾಶ ನಾಯ್ಕ ಇತರರು ಇದ್ದರು.

Share this article