ವಿದ್ಯಾದಾನ ಎಂಬುದು ಸರ್ವ ಶ್ರೇಷ್ಠ- ನಿವೃತ್ತ ಪ್ರಾಚಾರ್ಯ ಮರಿಗೌಡ್ರ

KannadaprabhaNewsNetwork |  
Published : Feb 16, 2025, 01:45 AM IST
1998-99.ನೇ ಸಾಲಿನ ಕಲ್ಪವೃಕ್ಷ ಸ್ನೇಹ ಬಳಗದ ವತಿಯಿಂದ ಗುರು ವಂದನಾ ಕಾರ್ಯಕ್ರಮದಲ್ಲಿ ಭರತ ನಾಟ್ಯ ಶಿಕ್ಷಕಿ ಅವರ ನೃತ್ಯ ಪ್ರದರ್ಶನ ಗಮನ ಸೆಳೆಯಿತು. | Kannada Prabha

ಸಾರಾಂಶ

ವಿದ್ಯಾದಾನ ಎಂಬುದು ಸರ್ವ ಶ್ರೇಷ್ಠವಾದ ದಾನ. ಅದನ್ನು ಕಲಿಸುವ ಗುರುಗಳು ಕಲಿಸುವ ವಿಷಯದ ಬಗ್ಗೆ ಅಪಾರ ಜ್ಞಾನ ಹೊಂದಿ ಮಕ್ಕಳಿಗೆ ಬೋಧನೆ ಮಾಡಿದರೆ ಉತ್ತಮ, ಕಾಟಾಚಾರದ ಶಿಕ್ಷಕ ವೃತ್ತಿ ಸಮಾಜಕ್ಕೆ ಮಾರಕ ಎಂದು ನಿವೃತ್ತ ಪ್ರಾಚಾರ್ಯ ಡಿ.ಆರ್. ಮರಿಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ರಟ್ಟೀಹಳ್ಳಿ: ವಿದ್ಯಾದಾನ ಎಂಬುದು ಸರ್ವ ಶ್ರೇಷ್ಠವಾದ ದಾನ. ಅದನ್ನು ಕಲಿಸುವ ಗುರುಗಳು ಕಲಿಸುವ ವಿಷಯದ ಬಗ್ಗೆ ಅಪಾರ ಜ್ಞಾನ ಹೊಂದಿ ಮಕ್ಕಳಿಗೆ ಬೋಧನೆ ಮಾಡಿದರೆ ಉತ್ತಮ, ಕಾಟಾಚಾರದ ಶಿಕ್ಷಕ ವೃತ್ತಿ ಸಮಾಜಕ್ಕೆ ಮಾರಕ ಎಂದು ನಿವೃತ್ತ ಪ್ರಾಚಾರ್ಯ ಡಿ.ಆರ್. ಮರಿಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕುಡುಪಲಿ ಗ್ರಾಮದ ಜಿ.ಬಿ. ಶಂಕರರಾವ್ ಮಹಾವಿದ್ಯಾಲಯ ಆವರಣದಲ್ಲಿ ನಡೆದ 1998-99ನೇ ಸಾಲಿನ ಕಲ್ಪವೃಕ್ಷ ಸ್ನೇಹ ಬಳಗದ ವತಿಯಿಂದ ಗುರು ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಕ ವೃತ್ತಿ ಎಂಬುದು ಪುಣ್ಯದ ಕೆಲಸ, ಅದನ್ನು ಕಲಿಸುವ ಗುರುಗಳು ಸಮಾಜಕ್ಕೆ ಮಾದರಿಯಾಗಿರಬೇಕು, ವೃತ್ತಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದರು.

ಕಲಿತಂತ ಶಾಲೆ ಹಾಗೂ ಕಲಿಸಿದಂತ ಗುರುಗಳನ್ನು ಯಾವ ವಿದ್ಯಾರ್ಥಿ ಗೌರವದಿಂದ ನಡೆದುಕೊಳ್ಳುತ್ತಾನೋ ಆ ವಿದ್ಯಾರ್ಥಿ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯ, ಆ ನಿಟ್ಟಿನಲ್ಲಿ ಕುಡುಪಲಿ ಗ್ರಾಮದ 1998-99 ನೇ ಸಾಲಿನ ವಿದ್ಯಾರ್ಥಿಗಳು ಸನ್ಮಾರ್ಗದತ್ತ ಹೆಜ್ಜೆ ಹಾಕುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಹಾಗೂ ಕಲ್ಪವೃಕ್ಷ ಸ್ನೇಹ ಬಳಗದ ಟ್ರಸ್ಟ ಸ್ಥಾಪನೆ ಮಾಡಿ ಸಮಾಜ ಸುಧಾರಣೆಗೆ ಬಳಕೆ ಮಾಡಲು ನಿರ್ಧರಿಸಿರುವುದು ಅವರ ಸಮಾಜಮುಖಿ ಗುಣಗಳು ಮತ್ತೊಬ್ಬರಿಗೆ ಮಾದರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ನಿವೃತ್ತ ಶಿಕ್ಷಕ ಎಸ್.ಪಿ. ಬಾಗೂರ ಮಾತನಾಡಿ, ಕಲ್ಪವೃಕ್ಷ ಸ್ನೇಹ ಬಳಗದ ಹಳೇ ವಿದ್ಯಾರ್ಥಿಗಳಿಂದ ಗುರು ವಂದನೆ ಸ್ವೀಕರಿಸಿದ್ದು ನಮ್ಮೆಲ್ಲ ಶಿಕ್ಷಕ ವೃಂದಕ್ಕೆ ಅತ್ಯಂತ ಸಂತಸವನ್ನುಂಟು ಮಾಡಿದೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ನಡುವೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳಬೇಕು, ಆಗ ಮಾತ್ರ ಶಿಕ್ಷಣದಲ್ಲೇನಾದರು ಸಾಧಿಸಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ಕಲ್ಪವೃಕ್ಷ ಸ್ನೇಹ ಬಳಗದ ವತಿಯಿಂದ ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕಿ ಗೌರಮ್ಮ ಬೆನಕಣ್ಣನವರ, ಪ್ರೇಮಾ ದೊಡ್ಡಗೌಡ್ರ, ಪ್ರಾಥಮಿಕ ಶಾಲೆಯ ಶಿಕ್ಷಕ ಎ.ಎಮ್. ಹೊಸಕುರುಬರ, ಸಿ.ಎಂ. ಸೈಯದ, ಎ.ಎನ್. ಕೊರಕಲಿ, ಎನ್.ಬಿ. ನಾಗೇಂದ್ರಪ್ಪ, ವಿ.ವಿ. ದೊಡ್ಡಗೌಡ್ರ, ಆರ್.ಬಿ. ಹನಗೋಡಿಮಠ, ಎಸ್.ಆರ್. ಲಲಿತಮ್ಮ, ಪಿ.ಹೆಚ್. ಮೇದೂರ, ಎಂ.ಆರ್. ಮರಿಗೌಡರ, ಜಾಫರಸಾಬ ಶೆತಸನದಿ, ವಿಶ್ವನಾಥ ಮಠದ, ಪ್ರೌಢ ಶಾಲೆ ವಿಭಾಗದ ಎಸ್.ಬಿ. ಬಾಗೂರ, ಎಂ.ಹೆಚ್. ಬಡಿಗೇರ, ಎಸ್.ಬಿ. ಬೆನಕಣ್ಣನವರ, ಎಸ್.ಬಿ. ಪಾಟೀಲ್, ಆರ್.ಎಂ. ದೇವರಮನಿ, ಶಕುಂತಲಾ ಎಂ. ಕಾಲೇಜ್ ವಿಭಾಗದ ಡಿ.ಆರ್. ಮರಿಗೌಡ್ರ, ಬಸವರಾಜ ಎಂ., ಆರ್. ಎಸ್. ಹೊಸಗೌಡ್ರ, ಎನ್.ಎಫ್. ಜಾಡರ, ವಿ.ಸಿ. ಪಾಟೀಲ್, ವಿ.ಎಸ್. ಹೆಗಡೆ, ಎಸ್.ಎನ್. ಮೆಳ್ಳಿಹಳ್ಳಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಹನುಮಂತಗೌಡ ಮರಿಗೌಡರ, ವಾಗೀಶ ಹಿರೇಮಠ, ನಾಗಮ್ಮ ಮೂಲಿಮನಿ, ಸತೀಶ ಹಲಗೇರಿ, ಮಾದೇವಕ್ಕ ಮಾಳಿಗೇರ, ಆರ್.ಬಿ. ರಡ್ಡಿ, ಭರಮಜ್ಜಿ ಮರಿಗೌಡರ, ರಾಜೇಸಾಬ ಮಡ್ಲೂರ, ಶರಣಪ್ಪ ಕುಸಗೂರ, ಕುಮಾರ ರುದ್ರಪ್ಪನವರ ಹಾಗೂ ಮುಂತಾದ ಹಳೇ ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ