ವಿದ್ಯಾದಾನ ಮಹಾದಾನಃ ರಚನಾ ಶ್ರೀನಿವಾಸ್

KannadaprabhaNewsNetwork |  
Published : Mar 10, 2024, 01:30 AM IST
ಪ್ರೀಮಿಯರ್ ಪಬ್ಲಿಕ್ ಸ್ಕೂಲ್.ನಲ್ಲಿ ಸರಸ್ವತಿ ಪೂಜಾ ಸಮಾರಂಭ | Kannada Prabha

ಸಾರಾಂಶ

ವಿದ್ಯಾದಾನ ಮಹಾದಾನ ಎಂದು ರಚನಾ ಶ್ರೀನಿವಾಸ್ ಹೇಳಿದ್ದಾರೆ.

- ಪ್ರೀಮಿಯರ್ ಪಬ್ಲಿಕ್ ಸ್ಕೂಲ್.ನಲ್ಲಿ ಸರಸ್ವತಿ ಪೂಜಾ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ವಿದ್ಯಾದಾನ ಮಹಾದಾನ ಎಂದು ರಚನಾ ಶ್ರೀನಿವಾಸ್ ಹೇಳಿದ್ದಾರೆ.

ಶ್ರೀ ತುಂಗಭದ್ರಾ ವಿದ್ಯಾ ಸಂಸ್ಥೆ, ಪ್ರೀಮಿಯರ್ ಪಬ್ಲಿಕ್ ಸ್ಕೂಲ್‌ನಿಂದ ಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಸರಸ್ವತಿ ಪೂಜಾ ಮತ್ತು ಪ್ರೀಮಿಯರ್ ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪೋಷಕರು ಮಕ್ಕಳ ಆಸೆಗಳಿಗೆ ಹೆಚ್ಚು ಒತ್ತು ಕೊಡಬೇಕು, ಸಂಸ್ಕೃತಿ ಸಂಸ್ಕಾರ ಬಹಳ ಮುಖ್ಯ, ಸಂಸ್ಥೆಯ ಅಭಿವೃದ್ಧಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಸಹಕಾರವಿದೆ ಎಂದು ಹೇಳಿದರು.

ಶ್ರೀ ತುಂಗಭದ್ರ ಬಿ.ಇಡಿ.ಕಾಲೇಜು ನಿರ್ದೇಶಕ ಡಾ.ಮಹಂತಗೌಡ ಪಾಟೀಲ್ ಮಾತನಾಡಿ ಅತ್ಯುತ್ತಮ ಪ್ರತಿಭೆಗಳು ಎಲ್ಲರಲ್ಲೂ ಇರುತ್ತದೆ. ಅದನ್ನು ಪೋಷಿಸಬೇಕಾದುದು ಪೋಷಕರು ಮತ್ತು ಶಿಕ್ಷಕರು. ಶಾಲೆ ಎನ್ನುವುದು ಒಂದು ಪವಿತ್ರ ಸ್ಥಳ, ಸಾಧನೆ ಮಾಡಲು ವಿದ್ಯೆ ಅಗತ್ಯಎಂದು ಹೇಳಿದರು.

ಶ್ರೀ ತುಂಗಭದ್ರ ಬಿ.ಇಡಿ.ಕಾಲೇಜು ಪ್ರಿನ್ಸಿಪಾಲ್ ಶಂಕರ್ ಎಸ್.ಕೆ.ಮಾತನಾಡಿ ಗುಣಾತ್ಮಕ ಶಿಕ್ಷಣ ನೀಡಬೇಕು, ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ, ವಿದ್ಯಾರ್ಥಿಗಳ ಸಾಮರ್ಥ್ಯ ಹೊರಸೆಳೆಯುವ ಪ್ರಯತ್ನವನ್ನು ಶಿಕ್ಷಕರು ನಿರ್ವಹಿಸಬೇಕು ಇದಕ್ಕೆ ಪೋಷಕರ ಸಹಕಾರ ಅಗತ್ಯ ಎಂದು ಹೇಳಿದರು.

ಮಿಯರ್ ಪಬ್ಲಿಕ್ ಸ್ಕೂಲ್ ನ ಪ್ರಿನ್ಸಿಪಾಲ್ ಜಯಂತಿ ಮಾತನಾಡಿದರು. ಮುಖಂಡರಾದ ಮಣಿಕಂಠ, ಶುಭ, ಚೈತ್ರ ನಿರ್ಮಲ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.9ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಶ್ರೀ ತುಂಗಭದ್ರಾ ವಿದ್ಯಾ ಸಂಸ್ಥೆ, ಪ್ರೀಮಿಯರ್ ಪಬ್ಲಿಕ್ ಸ್ಕೂಲ್ನಿಂದ ಏರ್ಪಡಿಸಿದ್ದ ಸರಸ್ವತಿ ಪೂಜಾ ಮತ್ತು ಪ್ರೀಮಿಯರ್ ಸಂಭ್ರಮ ಸಮಾರಂಭವನ್ನು ಶ್ರೀ ತುಂಗಭದ್ರ ಬಿ.ಇಡಿ.ಕಾಲೇಜಿನ ಪ್ರಿನ್ಸಿಪಾಲ್ ಶಂಕರ್ ಎಸ್.ಕೆ. ಉದ್ಘಾಟಿಸಿದರು. ಶ್ರೀ ತುಂಗಭದ್ರ ಬಿ.ಇಡಿ.ಕಾಲೇಜು ನಿರ್ದೇಶಕ ಡಾ.ಮಹಂತಗೌಡ ಪಾಟೀಲ್, ಎಸ್.ಕೆ.ಪ್ರೀಮಿಯರ್ ಪಬ್ಲಿಕ್ ಸ್ಕೂಲ್ ಪ್ರಿನ್ಸಿಪಾಲ್ ಜಯಂತಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ