ಸಂವಿಧಾನ ಪ್ರಬುದ್ಧ ಶ್ರೇಷ್ಠತೆಯನ್ನು ಎತ್ತಿಹಿಡಿದಿದೆ.

KannadaprabhaNewsNetwork |  
Published : Jan 30, 2026, 01:15 AM IST
60 | Kannada Prabha

ಸಾರಾಂಶ

ಪ್ರಜಾಪ್ರಭುತ್ವ, ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸಿ ರಾಷ್ಟ್ರವನ್ನು ಒಗ್ಗೂಡಿಸಿದ ಶಕ್ತಿ ದೇಶದ ಸಂವಿಧಾನಕ್ಕಿದೆ.

ಕನ್ನಡಪ್ರಭ ವಾರ್ತೆ ಟಿ. ನರಸೀಪುರ ಪಟ್ಟಣದ ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವದಲ್ಲಿ ತಹಸೀಲ್ದಾರ್ ಟಿ.ಜಿ. ಸುರೇಶ್ ಆಚಾರ್ ಧ್ವಜಾರೋಹಣ ನೆರವೇರಿಸಿದರು.ನಂತರ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ದಲ್ಲಿ ಮಾತನಾಡಿದ ನಂತರ, ದೇಶದ ಸರ್ವರಲ್ಲೂ ಭಾತೃತ್ವ ಮತ್ತು ಸಾಮರಸ್ಯವನ್ನು ಪ್ರತಿಪಾದಿಸುವ ಭಾರತೀಯ ಸಂವಿಧಾನ ಪ್ರಬುದ್ಧ ಭಾರತದ ಶ್ರೇಷ್ಠತೆಯನ್ನು ಎತ್ತಿಹಿಡಿದಿದೆ. ರಾಷ್ಟ್ರದಲ್ಲಿ ಒಕ್ಕೂಟದ ಆಡಳಿತ ನಡೆಸಲು ಪೂರಕವಾದ ಕಾನೂನುಗಳನ್ನು ರೂಪಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.ನಿವೃತ್ತ ಉಪ ಪ್ರಾಂಶುಪಾಲೆ ಬಿ.ಸಿ. ಇಂದಿರಮ್ಮ ಮಾತನಾಡಿ, ಪ್ರಜಾಪ್ರಭುತ್ವ, ಪ್ರಜಾತಂತ್ರ ವ್ಯವಸ್ಥೆಯನ್ನು ಜಾರಿಗೊಳಿಸಿ ರಾಷ್ಟ್ರವನ್ನು ಒಗ್ಗೂಡಿಸಿದ ಶಕ್ತಿ ದೇಶದ ಸಂವಿಧಾನಕ್ಕಿದೆ. ಸಾಮಾಜಿಕವಾಗಿ ಸಮಾನ ಅವಕಾಶಗಳನ್ನು ಎಲ್ಲರಿಗೂ ಕಲ್ಪಿಸುವ ಭಾರತೀಯ ಸಂವಿಧಾನ ದೇಶದ ಒಕ್ಕೂಟದ ವ್ಯವಸ್ಥೆಯನ್ನು ಬಲಗೊಳಿಸಿದೆ ಎಂದರು.ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಗೂ ಅಂಬೇಡ್ಕರ್ ಕುರಿತಾದ ಗೀತೆಗಳಿಗೆ ನರ್ತಿಸಿ ಮನೋರಂಜನೆ ನೀಡಿದರು. ಬಿಇಒ ಎಸ್.ಸಿ. ಶಿವಮೂರ್ತಿ, ತಾಪಂ ಪ್ರಭಾರ ಇಓ ಕೆ. ರಂಗಸ್ವಾಮಿ, ಪೊಲೀಸ್ ಇನ್‌ಸ್ಪೆಕ್ಟರ್‌ ಧನಂಜಯ, ಸಮಾಜ ಕಲ್ಯಾಣಾಧಿಕಾರಿ ಕೆ.ಡಿ. ವಿನೂತನ್, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರಾದ ಎನ್.ಕೆ. ಕೆಂಪರಾಜು, ಎಂ. ರಾಜಣ್ಣ, ರೂಪ, ಶಾಂತ, ಪಂಚಲಿಂಗಪ್ಪ,

ಪಿಡಬ್ಲ್ಯೂಡಿ ಎಇಇ ಎಸ್. ಸತೀಶ್ ಚಂದ್ರನ್, ಜಿ.ಪಂ ಎಇಇ ಪಿ ಎನ್.ಚರಿತಾ, ಸೆಸ್ಕ್ ಎಇಇ ಕೆ.ವಿ. ವೀರೇಶ್, ಬಿಆರ್ ಪಿ ನಾಗೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ. ವಿ.ಶಿವಶಂಕರ ಮೂರ್ತಿ, ತಾಲೂಕು ವೈದ್ಯಾಧಿಕಾರಿ ಡಾ.ಎಂ.ಕೆ. ರವಿಕುಮಾರ್, ಗ್ರೇಡ್ ಟು ತಹಸೀಲ್ದಾರ್ ರಾಜಾಕಾಂತ್, ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಶಿರಸ್ತೇದಾರ್ ಮಂಜುಳಾ, ಬಾಬು ಜಗಜೀವನ್ ರಾಂ ಸಂಘದ ಮಾಜಿ ಅಧ್ಯಕ್ಷ ಸಿ. ಪುಟ್ಟಯ್ಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ