ಹೆಸ್ಕಾಂ ಇಲಾಖೆಯಲ್ಲಿ ಎಚ್ಚರಿಕೆಯ ಕಾರ್ಯ ಅವಶ್ಯ-ಖಾದ್ರಿ

KannadaprabhaNewsNetwork |  
Published : Mar 11, 2026, 02:15 AM IST
ಶಿಗ್ಗಾಂವಿ ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಾಗೂ ಲೈನ್‌ಮನ್ ದಿವಸ್ ಕಾರ್ಯಕ್ರಮದಲ್ಲಿ ಲೈನ್‌ಮನ್‌ಗಳನ್ನ ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ ಸನ್ಮಾನಿಸಿದರು. | Kannada Prabha

ಸಾರಾಂಶ

ಹೆಸ್ಕಾಂ ಇಲಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆ, ಸಿಬ್ಬಂದಿಗಳ ಸುರಕ್ಷತೆಯ ಜೊತೆಗೆ ಎಚ್ಚರಿಕೆಯ ಕಾರ್ಯ ಅವಶ್ಯವಾಗಿದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ ಹೇಳಿದರು.

ಶಿಗ್ಗಾಂವಿ: ಹೆಸ್ಕಾಂ ಇಲಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಜವಾಬ್ದಾರಿ ಎಲ್ಲರ ಮೇಲಿದ್ದು, ಗುಣಮಟ್ಟದ ವಿದ್ಯುತ್ ಪೂರೈಕೆ, ಸಿಬ್ಬಂದಿಗಳ ಸುರಕ್ಷತೆಯ ಜೊತೆಗೆ ಎಚ್ಚರಿಕೆಯ ಕಾರ್ಯ ಅವಶ್ಯವಾಗಿದೆ ಎಂದು ಹೆಸ್ಕಾಂ ನಿಗಮದ ಅಧ್ಯಕ್ಷ ಸೈಯದ್ ಅಜೀಂಪೀರ ಖಾದ್ರಿ ಹೇಳಿದರು.ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಾಗೂ ಲೈನ್‌ಮನ್ ದಿವಸ್ ಕಾರ್ಯಕ್ರಮದಲ್ಲಿ ಲೈನ್‌ಮನ್‌ಗಳನ್ನ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯುತ್ ಅವಘಡಗಳನ್ನ ತಗ್ಗಿಸುವಲ್ಲಿ ಫೀಡರ್‌ಗಳ ನಿರ್ವಹಣೆ ಮುಖ್ಯವಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸಿಬ್ಬಂದಿಗಳ ಕುಟುಂಬದ ನಷ್ಟ ಅರಿತು ಕಾರ್ಯ ಮಾಡುವ ಅವಶ್ಯಕತೆ ಇದೆ, ಎಲ್ಲರ ಹಿತ ಹಿಲಾಖೆಯ ಹಿತವಾಗಿದೆ. ಆ ನಿಟ್ಟಿನಲ್ಲಿ ಸುರಕ್ಷತೆ ಮುಖ್ಯ ಎಂದರು.

ಹೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಸಿ.ಬಿ. ಹೊಸಮನಿ, ವಿ.ಎಸ್. ಮರಿಗೌಡ್ರ ಹಾಗೂ ಸಿಬ್ಬಂದಿ ಜಾಕಿರ್ ಪರಾಖಿ, ನಿಂಗಪ್ಪ ಹಳವಳ್ಳಿ, ರಮೇಶ ವನಳ್ಳಿ, ಮಂಜುನಾಥ ಮನ್ನಣ್ಣನವರ, ಶಿವಪ್ಪ ಗಂಜಿಗಟ್ಟಿ, ಗುಡ್ಡಪ್ಪ ಬಳ್ಳಾರಿ, ಪಕ್ಕಿರಪ್ಪ ಮಂಚಿನಕೊಪ್ಪ, ನಿಸ್ಸಾರಹ್ಮದ ಮುಲ್ಲಾನವರ, ಮುಸ್ತಾಕ ಅಹ್ಮದ ತಹಸೀಲ್ದಾರ್, ಅಣ್ಣಪ್ಪ ನಡಟ್ಟಿ, ರುದ್ರೇಶ ಗುಡಗೇರಿ, ಮಹೇಶ ಹುಲಸೋಗಿ, ಮಹಾಲಿಂಗಪ್ಪ ಕುಂಬಾರ, ಸಂಜೀವ ಪಾಳೆದ, ರವಿ ಕೊಣಪ್ಪನವರ, ಇಸ್ಮಾಯಿಲ್ ಅಕ್ಕಿ, ಬೀರೆಶಕುಮಾರ ಜಟ್ಟೆಪ್ಪನವರ ಸೇರಿದಂತೆ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನಕಾಚಲಪತಿ ಜಾತ್ರೆ ಸಜ್ಜುಗೊಂಡ ಕನಕಗಿರಿ
ಕಾರ್ಖಾನೆ ಸಮಸ್ಯೆ ಪರಿಹಾರಕ್ಕೆ ಶೀಘ್ರ ಎಚ್‌ಡಿಕೆ ಭೇಟಿ