ದುರ್ಗುಣ ದೂರವಾಗಿಸಿ ದೈವಿಗುಣ ಧರಿಸುವುದೇ ವಿಜಯದಶಮಿ

KannadaprabhaNewsNetwork |  
Published : Oct 07, 2024, 01:36 AM IST
06-ಎಂಎಸ್ಕೆ-01: | Kannada Prabha

ಸಾರಾಂಶ

ನವದುರ್ಗೆಯರನ್ನು ತಾಯಿರೂಪ, ಜಗದಂಭೆರೂಪದಲ್ಲಿ ಪೂಜಿಸುತ್ತಾರೆ. ವಿಜಯದಶಮಿ ಅಸುರರನ್ನು ಸಂಹಾರ ಮಾಡಿದ ನಿಜವಾದ ಅರ್ಥವಾಗಿದೆ

ಕನ್ನಡಪ್ರಭ ವಾರ್ತೆ ಮಸ್ಕಿ

ತಾಲೂಕಿನ ಬಳಗಾನೂರು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಶರನ್ನವರಾತ್ರಿ ಆಚರಣೆ ನಿಮಿತ್ತ ಹಮ್ಮಿಕೊಂಡ ನವದುರ್ಗೆಯರ ಭವ್ಯ ಮೆರವಣಿಗೆ ಶಾಂತಿ ಯಾತ್ರೆಗೆ ಮಸ್ಕಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ ಹೇಮಾವತಿ ಅಕ್ಕನವರು ಚಾಲನೆ ನೀಡಿದರು.

ನಂತರ ಮಾತನಾಡಿ, ದೇಶದಲ್ಲಿ ನವರಾತ್ರಿ ಶ್ರದ್ಧೆ ಭಕ್ತಿಯಿಂದ ಪೂಜೆಸಲ್ಲಿಸಲು ಮಂತ್ರ ಪಠಿಸುತ್ತಾರೆ. ಈಶ್ವರನ ಮುಂದೆ ನವಶಕ್ತಿಯರ ಹೆಸರಿದೆ, ರಾಜರಾಜೇಶ್ವರಿ, ಭುವನೇಶ್ವರಿ ಅಂದರೆ ಈಶ್ವರನಿಂದ ಶಕ್ತಿಯನ್ನು ಪಡೆದವರು. ನವದುರ್ಗೆಯರನ್ನು ತಾಯಿರೂಪ, ಜಗದಂಭೆರೂಪದಲ್ಲಿ ಪೂಜಿಸುತ್ತಾರೆ. ವಿಜಯದಶಮಿ ಅಸುರರನ್ನು ಸಂಹಾರ ಮಾಡಿದ ನಿಜವಾದ ಅರ್ಥವಾಗಿದೆ. ಪ್ರತಿಯೊಬ್ಬ ಮನುಷ್ಯರಲೇ ಅಡಗಿರುವಂತಹ ದುರ್ಗುಣಗಳನ್ನು ದೂರ ಮಾಡಿ ದೈವಿಗುಣಗಳನ್ನು ಧಾರಣೆ ಮಾಡಿದಾಗ ನಿಜವಾದ ವಿಜಯದಶಮಿ ಆಗುತ್ತದೆ ಎಂದರು.

ಪಟ್ಟಣದ ಬೀದಿ ಬೀದಿಯಲ್ಲಿ ಶಾಂತಿ ಯಾತ್ರೆ ಮಾಡುತ್ತಾ ಆಂಧ್ರದಿಂದ ಆಗಮಿಸಿರುವ ಬ್ರಹ್ಮಕುಮಾರಿ ಶಿಕ್ಷಕಿಯರಾದ ಆರತಿ ಅಕ್ಕ, ವೇದಕ್ಕ, ನಂದಕ್ಕ, ಹಿರೇಮಣಿ ಅಕ್ಕ, ಸವಿತಕ್ಕ, ನಾಗಮಣಿ ಅಕ್ಕ, ಮಾನಸಕ್ಕ, ಅಕ್ಕಂದಿರು ಆಗಮಿಸಿ ನವಶಕ್ತಿಯರ ಮುಖಾಂತರ ಜ್ಯೋತಿ ಪ್ರಜ್ವಲಿಸಿ ಶುಭವಾಗಲಿದೆ ಎಂದರು. ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ಶಿಕ್ಷಕಿಯರು, ಮುಖಂಡರಾದ ಮರಿಯಪ್ಪ ಅಂಬ್ಲಿ, ಬಸವರಾಜ ಅಂಬ್ಲಿ, ಸಿದ್ದಯಸ್ವಾಮಿ, ಅಮರೇಶ ಹೆಂಬಾ, ಬಸವರಾಜ ಕರಡಕಲ್, ರಾಘವೇಂದ್ರಕುಲಕರ್ಣಿ, ಮಂಜುಳಾ ಮಸ್ಕಿ ಸೇರಿದಂತೆ ಪಟ್ಟಣ ಹಾಗೂ ಮಸ್ಕಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಬಿರಾರ್ಥಿಗಳು ಸದ್ಭಕ್ತರು ಪಾಲ್ಗೊಂಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು
ನಾಯಕತ್ವ ಬದಲಾವಣೆ ಗೊಂದಲದ ನಡುವೆಯೇ ಕಸರತ್ತು ಸಿದ್ದರಾಮಯ್ಯ ಬಜೆಟ್‌ ತಯಾರಿ