ಅ.2ರಂದು ವಿಜಯದಶಮಿ ಮೆರವಣಿಗೆ: ವಾಹನಗಳ ಮಾರ್ಗ ಬದಲು

KannadaprabhaNewsNetwork |  
Published : Sep 30, 2025, 12:00 AM IST
ಕ್ಯಾಪ್ಷನ29ಕೆಡಿವಿಜಿ31 ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ | Kannada Prabha

ಸಾರಾಂಶ

ದಾವಣಗೆರೆ ನಗರದಲ್ಲಿ ಆಚರಿಸುವ ವಿಜಯದಶಮಿ ಹಬ್ಬದ ಮೆರವಣಿಗೆ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಹಾಗೂ ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳ ಸಂಚಾರ ಮಾರ್ಗಗಳ ಬದಲಾವಣೆಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ. ಅ.2ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮಾತ್ರ ಈ ಆದೇಶ ಅನ್ವಯವಾಗಿದೆ ಎಂದಿದ್ದಾರೆ.

- ಬೆಳಗ್ಗೆ 10ರಿಂದ ಸಂಜೆ 4 ಗಂಟೆ ಹಾಗೂ ಮಧ್ಯಾಹ್ನ 2ರಿಂದ ರಾತ್ರಿ 9 ಗಂಟೆವಗೂ ಮಾತ್ರ ಅನ್ವಯ: ಡಿಸಿ ಆದೇಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರದಲ್ಲಿ ಆಚರಿಸುವ ವಿಜಯದಶಮಿ ಹಬ್ಬದ ಮೆರವಣಿಗೆ ಸಂಬಂಧ ಸಾರ್ವಜನಿಕರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಹಾಗೂ ಈ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳ ಸಂಚಾರ ಮಾರ್ಗಗಳ ಬದಲಾವಣೆಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಆದೇಶಿಸಿದ್ದಾರೆ. ಅ.2ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮಾತ್ರ ಈ ಆದೇಶ ಅನ್ವಯವಾಗಿದೆ ಎಂದಿದ್ದಾರೆ.

1. ಜಗಳೂರು ಕಡೆಯಿಂದ ಬರುವ ಎಲ್ಲ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಬೇತೂರು ಹಳ್ಳದ ಸಮೀಪ ಇರುವ ರಿಂಗ್ ರಸ್ತೆ ಮೂಲಕ ಟಿಪ್ಪು ಸರ್ಕಲ್ ಮುಖಾಂತರ ಚಲಿಸಿ ನಂತರ ಆಖ್ತರ್ ರಜಾ ಸರ್ಕಲ್, ಆರ್‌ಟಿಒ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಳೇ ಪಿ.ಬಿ. ರಸ್ತೆ ಮುಖಾಂತರ ಸಂಚರಿಸುವುದು. ಪ್ರಯಾಣಿಕ ವಾಹನಗಳಾದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಅಲ್ಲಿಂದಲೇ ವಾಪಸ್ ಹೊರಡುವುದು. ಆ ದಿನ ಕೆ.ಆರ್.ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಶೋಭಾಯಾತ್ರೆ ಮೆರವಣಿಗೆ ಮುಗಿಯುವರೆಗೂ ಯಾವುದೇ ಬಸ್‌ಗಳು ಕಾರ್ಯನಿರ್ವಹಿಸುವಂತಿಲ್ಲ.

2.ಹರಪನಹಳ್ಳಿ ಕಡೆಯಿಂದ ಕಂಚಿಕೆರೆ ಮಾಗಾನಹಳ್ಳಿ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬರುವ ಎಲ್ಲ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮಾಗಾನಹಳ್ಳಿ ರಸ್ತೆಯ ಹಳ್ಳದ ಹತ್ತಿರ ಇರುವ ಚೌಡಮ್ಮ ದೇವಸ್ಥಾನ ಕ್ರಾಸ್‌ನಿಂದ ಬೂದಾಳ್ ರಸ್ತೆ ಕಡೆಗೆ ಚಲಿಸಿ ನಂತರ ಆರ್‌ಟಿಒ ಸರ್ಕಲ್ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಳೇ ಪಿ.ಬಿ. ರಸ್ತೆಯಲ್ಲಿ ಸಂಚರಿಸುವುದು. ಅದೇ ರೀತಿ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಟಿಪ್ಪು ಸರ್ಕಲ್‌ನಿಂದ ರಿಂಗ್ ರಸ್ತೆ ಮೂಲಕ ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು, ಇಲ್ಲಿಂದಲೇ ವಾಪಾಸ್ ಹೊರಡುವುದು.

3.ಮಾಗಾನಹಳ್ಳಿ ರಸ್ತೆಯ ಟಿಪ್ಪು ಸರ್ಕಲ್ ಕಡೆಯಿಂದ ಅರಳೀಮರ ಸರ್ಕಲ್ ನಂತರ ಕೆ.ಆರ್. ರಸ್ತೆ ಮುಖಾಂತರ ಅಶೋಕ ಎಲ್.ಸಿ. ಗೇಟ್ ಕಡೆಗೆ ಹಾಗೂ ಅಶೋಕ ಎಲ್.ಸಿ. ಗೇಟ್ ಕಡೆಯಿಂದ ಅರಳೀಮರ ಸರ್ಕಲ್ ನಂತರ ಟಿಪ್ಪು ಸರ್ಕಲ್ ಹಾಗೂ ವೆಂಕಟೇಶ್ವರ ಸರ್ಕಲ್ ಕಡೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಯಾವುದೇ ಭಾರಿ ಹಾಗೂ ಲಘು ಸರಕು ಹಾಗೂ ಪ್ರಯಾಣಿಕ ವಾಹನಗಳು ಸಂಚರಿಸದಂತೆ ನಿಷೇಧ ಮಾಡಿದೆ.

4.ಅಗ್ನಿಶಾಮಕ ಠಾಣೆ ಫ್ಲೈ ಓವರ್ ಕಡೆಯಿಂದ ಎಪಿಎಂಸಿ ಲಿಂಕ್ ರಸ್ತೆ ಮೂಲಕ ವೆಂಕಟೇಶ್ವರ ಸರ್ಕಲ್ ಕಡೆಗೆ ಬರುವ ಎಲ್ಲ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಪ್ರಯಾಣಿಕ ವಾಹನಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರಿಗೆ ಮಟ್ಟಿಕಲ್ ಮುಖಾಂತರ ವೆಂಕಟೇಶ್ವರ ಸರ್ಕಲ್ ಕಡೆಗೆ ಬಾರದೇ ಖಾಸಗಿ ಬಸ್‌ಗಳು ಹಳೇ ಪಿ.ಬಿ. ರಸ್ತೆಯಲ್ಲಿ ಬರುವ ಖಾಸಗಿ ಬಸ್ ನಿಲ್ದಾಣದಿಂದ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಡಿಸಿಎಂ ಅಂಡರ್ ಬ್ರಿಡ್ಜ್ ಮೂಲಕ ಆವರಗೆರೆ ಮಾರ್ಗವಾಗಿ ಬಾಡಾ ಕ್ರಾಸ್ ಮೂಲಕ ಎನ್.ಎಚ್ ರಸ್ತೆಯಲ್ಲಿ ಸಂಚರಿಸುವುದು.

5.ವೆಂಕಟೇಶ್ವರ ಸರ್ಕಲ್‌ನಿಂದ ಎಪಿಎಂಸಿ ಫ್ಲೈ ಓವರ್ ವರೆಗೆ ವೆಂಕಟೇಶ್ವರ ಸರ್ಕಲ್‌ನಿಂದ ಅರಳೀಮರ ಸರ್ಕಲ್‌ವರೆಗೆ ಕೆ.ಆರ್. ರಸ್ತೆ ಗಣೇಶ ಗುಡಿ ಕ್ರಾಸ್‌ನಿಂದ ಹಾಸಬಾವಿ ಸರ್ಕಲ್‌ವರೆಗೆ, ಹಾಸಬಾವಿ ಸರ್ಕಲ್‌ನಿಂದ ಗ್ಯಾಸ್ ಕಟ್ಟೆ ಸರ್ಕಲ್‌ವರೆಗೆ, ಗ್ಯಾಸ್ ಕಟ್ಟೆ ಸರ್ಕಲ್‌ನಿಂದ ಕಾಳಿಕದೇವಿ ರಸ್ತೆವರಿಗೆ, ಕಾಳಿಕಾ ದೇವಿ ರಸ್ತೆಯಿಂದ ಹಗೇದಿಬ್ಬ ಸರ್ಕಲ್ ಮಾರ್ಗವಾಗಿ ದುರ್ಗಾಂಬಿಕಾ ದೇವಸ್ಥಾನದವರೆಗೆ, ದುರ್ಗಾಂಬಿಕಾ ದೇವಸ್ಥಾನದಿಂದ ಹೊಂಡದ ಸರ್ಕಲ್ ಮಾರ್ಗವಾಗಿ ಅರುಣ ಎಲ್.ಸಿ. ಗೇಟ್‌ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ವಾಹನಗಳು ಸಂಚರಿಸದಂತೆ ಹಾಗೂ ಯಾವುದೇ ರೀತಿಯ ವಾಹನಗಳು ನಿಲುಗಡೆ ಆಗದಂತೆ ನಿಷೇಧಿಸಿದೆ.

- - -

(ಬಾಕ್ಸ್‌) * ಮಧ್ಯಾಹ್ನ 2ರಿಂದ ರಾತ್ರಿ 9 ಗಂಟೆವರೆಗೆ ಬದಲಾಗಿರುವ ಮಾರ್ಗಗಳ ವಿವರ 1.ಹರಿಹರ ಕಡೆಯಿಂದ ಬಾತಿ ಮೂಲಕ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಬರುವ ಎಲ್ಲ ಭಾರಿ ವಾಹನಗಳು ಅಂದರೆ ಸರಕು ಲಾರಿಗಳು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ಹರಿಹರ ನಗರದಿಂದ ದಾವಣಗೆರೆ ಕಡೆಗೆ ಬರುವ ಹಳೇ ಪಿ.ಬಿ. ರಸ್ತೆಗೆ ಬಾರದೇ ಹರಿಹರದಿಂದ ನೇರವಾಗಿ ಶಿವಮೊಗ್ಗ ಬೈಪಾಸ್ ಮುಖಾಂತರ ಹೊಸ ಎನ್‌ಎಚ್-48 ರಸ್ತೆ ಮೂಲಕ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ದಾವಣಗೆರೆ ನಗರಕ್ಕೆ ಬಂದು ಸರಕು ಲಾರಿಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ರಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್ಸು ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ನಂತರ ಖಾಸಗಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಬಂದು ಹಳೇ ಪಿ.ಬಿ. ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ, ಹತ್ತಿಸಿಕೊಂಡು ವಾಪಾಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.

2.ಚಿತ್ರದುರ್ಗದ ಕಡೆಯಿಂದ ಬರುವ ಎಲ್ಲ ಭಾರಿ ಮತ್ತು ಲಘು ಸರಕು ಸಾಗಾಣಿಕ ವಾಹನಗಳು ಡಿಸಿಎಂ ಅಂಡರ್ ಪಾಸ್ ಹತ್ತಿರದ ದನದ ಮಾರ್ಕೆಟ್ ಕ್ಲಾಸ್ ಮುಖಾಂತರ ಎಪಿಎಂಸಿಗೆ ಹೋಗುವುದು. ಕೆಎಸ್‌ಆರ್‌ಟಿಸಿ ಬಸ್ ಗಳು ಮೇಲ್ಕಂಡ ಮಾರ್ಗದಲ್ಲಿ ಬಾಡಾ ಕ್ರಾಸ್ ಮುಖಾಂತರ ಅವರಗೆರೆ ಮಾರ್ಗವಾಗಿ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದು ನಂತರ ಅದೇ ಮಾರ್ಗವಾಗಿ ವಾಪಸ್‌ ಬೆಂಗಳೂರು, ಬೆಳಗಾವಿ ಕಡೆಗೆ ಹೋಗುವುದು. ಖಾಸಗಿ ಬಸ್‌ಗಳು ಮೇಲ್ಕಂಡ ಮಾರ್ಗದಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಜನರನ್ನು ಇಳಿಸಿ, ಹತ್ತಿಸಿಕೊಂಡು ವಾಪಸ್ ಅದೇ ಮಾರ್ಗದಲ್ಲಿ ಸಂಚರಿಸುವುದು.

3.ಹಳೇ ಪಿ.ಬಿ. ರಸ್ತೆಯ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಎಂ.ಜಿ. ಸರ್ಕಲ್‌ವರೆಗೆ ಯಾವುದೇ ರೀತಿಯ ಭಾರಿ ಮತ್ತು ಲಘು ಸರಕು ಸಾಗಾಣಿಕೆ ವಾಹನಗಳು ಮತ್ತು ಭಾರಿ ಮತ್ತು ಲಘು ಪ್ರಯಾಣಿಕರ ವಾಹನಗಳು ಸಂಚರಿಸದಂತೆ ನಿಷೇಧಿಸಿದೆ.

- - -

-29ಕೆಡಿವಿಜಿ31: ಜಿ.ಎಂ.ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ