ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ 150 ಬಸ್‌ಗಳು ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ಸಂಸ್ಥೆ ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್‌ವೊಂದು ವೋಲ್ವೋ ಬಸ್‌ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಬಿ.ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್‌ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್.ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ಸಂಸ್ಥೆ ಒಪ್ಪಂದವಿದೆ. ಮೊದಲು 20 ಬಸ್‌ಗಳನ್ನು ಸಂಸ್ಥೆ ಖರೀದಿಸಿತ್ತು. 2012ರ ವೇಳೆ 100 ಬಸ್‌ಗಳಿಗೆ ಆರ್ಡರ್ ಮಾಡಿದ್ದೆವು. ಈಗ 150 ಬಸ್‌ಗಳನ್ನು ಖರೀದಿಸಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್‌ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.