ಕನ್ನಡಪ್ರಭ ವಾರ್ತೆ ತಾಳಿಕೋಟೆ: ಸಿದ್ದೇಶ್ವರ ಶ್ರೀಗಳ ಜೀವನ ಇಡೀ ಜನಾಂಗಕ್ಕೆ ಮಾದರಿಯಾಗಿದ್ದು, ಇಂತಹ ದಾರ್ಶನಿಕ ಸಂತರನ್ನು ಕಂಡ ವಿಜಯಪುರ ಜಿಲ್ಲೆ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದ ಬಳಿ ಸಿದ್ದೇಶ್ವರ ಶ್ರೀಗಳ ಎರಡನೇ ಪುಣ್ಯ ಸ್ವರಣೋತ್ಸವ ಅಂಗವಾಗಿ ಗುರುನಮನ ಮಹೋತ್ಸವದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರ. ಸಿದ್ದೇಶ್ವರ ಶ್ರೀಗಳ ಪ್ರವಚನ ನಮ್ಮ ದೇಶದವರಷ್ಟೇ ಅಲ್ಲದೇ ಅನ್ಯ ದೇಶದವರೂ ಮೆಚ್ಚಿಕೊಂಡಿದ್ದಾರೆ. ಅವರ ಸರಳ ಬದುಕು ಅನನ್ಯವಾದುದ್ದಾಗಿದೆ. ಬಸವಣ್ಣನವರು ಹುಟ್ಟಿದ ಈ ನೆಲದಲ್ಲಿ ಸಿದ್ದೇಶ್ವರ ಶ್ರೀಗಳು ಜನ್ಮ ತಾಳಿದ್ದು, ಮಾತನಾಡುವ ಬದಲು ಹೇಗೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ ಎಂದರು. ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ವೈದ್ಯರಾದ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಸಿದ್ದೇಶ್ವರ ಶ್ರೀಗಳು ಸರಳ ಬದುಕನ್ನು ನಡೆಸುವ ಮೂಲಕ ಇಡೀ ಜಗತ್ತಿಗೆ ಸರಳತೆಯ ಪಾಠ ಮಾಡಿದ ಮಹಾತ್ಮರು. ಅವರ ಇಡೀ ಬದುಕು ವೈರಾಗ್ಯದಿಂದ ಕೂಡಿತ್ತು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವದರೊಂದಿಗೆ ಅವರಿಗೆ ಗುರು ನಮನ ಸಲ್ಲಿಸೋಣವೆಂದರು.ಸೋಮಲಿಂಗ ಮಹಾಸ್ವಾಮಿಗಳು, ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಣ್ಣಪ್ಪ ಜಗತಾಪ, ಪರುಶುರಾಮ ತಂಗಡಗಿ, ಮುದುಕಪ್ಪ ಬಡಿಗೇರ, ಗಣ್ಯರಾದ ಕಾಶಿನಾಥ ಮುರಾಳ, ಮುರಿಗೆಪ್ಪ ಸರಸಟ್ಟಿ, ಮಹಾದೇವಪ್ಪ ಕುಂಬಾರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಬಾಬು ಹಜೇರಿ, ತಿಪ್ಪಣ್ಣ ಸಜ್ಜನ, ಮುತ್ತು ಕಶೆಟ್ಟಿ, ನಾಗಪ್ಪ ಚಿನಗುಡಿ, ಓಂ ತಿವಾರಿ, ಅಶೋಕ ಚಿನಗುಡಿ, ಐ.ಬಿ.ಬಿಳೇಭಾವಿ, ದತ್ತು ಉಭಾಳೆ, ಮಹಾಂತೇಶ ಮುರಾಳ, ಸುವರ್ಣಾ ಬಿರಾದಾರ, ಇಬ್ರಾಹಿಂ ಮನ್ಸೂರ, ಚಿಂತಪ್ಪ ಯಾಳಗಿ, ಪ್ರಕಾಶ ಕಶಟ್ಟಿ, ಜಗದೀಶ ಬಿಳೆಭಾವಿ, ಜಿ.ಎಸ್. ಜಮ್ಮಲದಿನ್ನಿ, ಆರ್.ವ್ಹಿ.ಜಾಲವಾದಿ, ಡಿ.ಕೆ.ಪಾಟೀಲ, ಪ್ರಭು ಬಿಳೇಬಾವಿ ಮತ್ತಿತರರು ಇದ್ದರು. ಪ್ರಭು ಸಣ್ಣಕ್ಕಿ ಪ್ರಾರ್ಥಿಸಿದರು.