ಸಾವಯವ ಕೃಷಿಕನಿಗೆ ವಿಜಯಪುರ ರತ್ನ ಪ್ರಶಸ್ತಿ

KannadaprabhaNewsNetwork |  
Published : Sep 17, 2024, 12:47 AM IST
ತಾಲೂಕಿನ ಮುಳವಾಡ ಗ್ರಾಮದ ಯುವ ರೈತ ಸಂಗಮೇಶ ಬಿಜಾಪೂರವರು ಸಾವಯವ  ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರ್ತಿಸಿ ವಿಜಯಪುರ ಗಜಾನನ ಉತ್ಸವ ಮಹಾಮಂಡಲದವರು ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರ: ತಾಲೂಕಿನ ಮುಳವಾಡ ಗ್ರಾಮದ ಯುವ ರೈತ ಸಂಗಮೇಶ ಬಿಜಾಪೂರ ಸಾವಯವ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರ್ತಿಸಿ ವಿಜಯಪುರ ಗಜಾನನ ಉತ್ಸವ ಮಹಾಮಂಡಲದಿಂದ ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಕನ್ನಡಪ್ರಭ ವಾರ್ತೆ ಕೊಲ್ಹಾರ: ತಾಲೂಕಿನ ಮುಳವಾಡ ಗ್ರಾಮದ ಯುವ ರೈತ ಸಂಗಮೇಶ ಬಿಜಾಪೂರ ಸಾವಯವ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರ್ತಿಸಿ ವಿಜಯಪುರ ಗಜಾನನ ಉತ್ಸವ ಮಹಾಮಂಡಲದಿಂದ ವಿಜಯಪುರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಜಯಪುರ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಗಜಾನನ ಉತ್ಸವ ಮಹಾಂಡಲ ವತಿಯಿಂದ ಭಾನುವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಸಂಸದ ರಮೇಶ ಜಿಗಜಿಣಗಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಮ್ಸ್ ಕೃಷಿ ಅಧಿಕಾರಿ ಲಿಂಗರಾಜ ತಾಳಿಕೋಟಿ, ಮುಖಂಡ ಜಗದೀಶ ಮುಚ್ಚಂಡಿ, ಹಿರಿಯ ಪತ್ರಕರ್ತ ಸಂಗಮೇಶ ಚೂರಿ ಸೇರಿ ಇತರರು ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಸಂಗಮೇಶ ಬಿಜಾಪೂರ ಮಾತನಾಡಿ, ಮುಳವಾಡ ಗ್ರಾಮದಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವುದನ್ನು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ವಿಜಯಪುರ ಗಜಾನನ ಉತ್ಸವ ಮಹಾಮಂಡಲದ ಪಧಾಧಿಕಾರಿಗಳು ನನ್ನ ಸಾಧನೆಯನ್ನು ಗುರ್ತಿಸಿ ಪ್ರಶಸ್ತಿ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌