ವಿಜಯಪುರ ಕೆನರಾ ಬ್ಯಾಂಕ್ ಚಿನ್ನ ಕಳವು: ಹುಬ್ಬಳ್ಳಿಯಲ್ಲಿ ಸ್ಥಳ ಮಹಜರು

KannadaprabhaNewsNetwork |  
Published : Jul 04, 2025, 11:46 PM IST
ವಿಜಯಪುರದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ ನೆರೆಲ್ಲಾನನ್ನು ಹುಬ್ಬಳ್ಳಿಗೆ ಕರೆತಂದ ಪೊಲೀಸರು ಸ್ಥಳ ಮಹಜರು ಮಾಡಿದರು. | Kannada Prabha

ಸಾರಾಂಶ

ಕೆನರಾ ಬ್ಯಾಂಕ್ ಕಳ್ಳತನ ಮಾಡಿಕೊಂಡ ಚಿನ್ನ ಹುಬ್ಬಳ್ಳಿಗೆ ತೆಗೆದುಕೊಂಡು ಬಂದಿದ್ದ ದರೋಡೆಕೋರರು ಸುರಕ್ಷಿತ ಸ್ಥಳವೆಂದು ಶಾಲೆಯಲ್ಲಿ ಚಿನ್ನ ಬಚ್ಚಿಟ್ಟಿದ್ದರು. ಇದೇ ಶಾಲೆಯ ಚೇರಮನ್ ಆಗಿದ್ದ ಶೇಖರ್ ನೆರೆಲ್ಲಾ ಕಳ್ಳತನದ ಪ್ರಮುಖ ಆರೋಪಿಯಾಗಿದ್ದಾನೆ.

ಹುಬ್ಬಳ್ಳಿ: ವಿಜಯಪುರದ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳತನದ ಪ್ರಮುಖ ಆರೋಪಿ ಚಂದ್ರಶೇಖರ ನೆರೆಲ್ಲಾನನ್ನು ಹುಬ್ಬಳ್ಳಿಗೆ ಕರೆತಂದ ಪೊಲೀಸರು ಸ್ಥಳ ಮಹಜರು ಮಾಡಿದರು.

ನಗರದ ವಿವಿಧೆಡೆ ಸ್ಥಳ ಮಹಜರು ಮಾಡಿದ್ದು, ಚಿನ್ನ ಕರಗಿಸಲು ಬಳಸಿದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಶ್ವಾಪುರದಲ್ಲಿನ ಮನೆ ಹಾಗೂ ಗದಗ ರಸ್ತೆಯಲ್ಲಿನ ಸೆಂಟ್ ಆ್ಯಂಡ್ರಸ್ ಶಾಲೆಯಲ್ಲಿಯೇ ಚಿನ್ನ ಕರಗಿಸಿದ್ದ ಕಳ್ಳರನ್ನು ಸ್ಥಳಕ್ಕೆ ಕರೆತಂದು, ಸ್ಥಳ ಮಹಜರು ಮಾಡಿದ್ದಾರೆ.

ಕೆನರಾ ಬ್ಯಾಂಕ್ ಕಳ್ಳತನ ಮಾಡಿಕೊಂಡ ಚಿನ್ನ ಹುಬ್ಬಳ್ಳಿಗೆ ತೆಗೆದುಕೊಂಡು ಬಂದಿದ್ದ ದರೋಡೆಕೋರರು ಸುರಕ್ಷಿತ ಸ್ಥಳವೆಂದು ಶಾಲೆಯಲ್ಲಿ ಚಿನ್ನ ಬಚ್ಚಿಟ್ಟಿದ್ದರು. ಇದೇ ಶಾಲೆಯ ಚೇರಮನ್ ಆಗಿದ್ದ ಶೇಖರ್ ನೆರೆಲ್ಲಾ ಕಳ್ಳತನದ ಪ್ರಮುಖ ಆರೋಪಿಯಾಗಿದ್ದಾನೆ.

ಏನಿದು ಪ್ರಕರಣ?: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಣಣದಲ್ಲಿನ ಕೆನೆರಾ ಬ್ಯಾಂಕ್ ನಲ್ಲಿ ಕಳೆದ ಮೇ 25 ರಂದು ಕಳ್ಳತನ ನಡೆದಿತ್ತು. ಬ್ಯಾಂಕ್ ಲಾಕರ್ ಕೀ ತೆಗೆದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಲಾಗಿತ್ತು. ಬರೋಬ್ಬರಿ 58 ಕೆಜಿ 975 ಗ್ರಾಂ ಚಿನ್ನಾಭರಣಗಳು ಹಾಗೂ ₹5.20 ಲಕ್ಷ ನಗದು ಕದ್ದು ಕಳ್ಳರು ಪರಾರಿಯಾಗಿದ್ದರು.

ಪ್ರಕರಣ ಬೆನ್ನುಹತ್ತಿದ್ದ ವಿಜಯಪುರ ಜಿಲ್ಲೆಯ ಪೊಲೀಸರು ಅದೇ ಬ್ಯಾಂಕಿನ ಹಿಂದಿನ ವ್ಯವಸ್ಥಾಪಕ ಹಾಗೂ ಹಾಲಿ ಹುಬ್ಬಳ್ಳಿಯ ಗದಗ ರೋಡ್‌ನಲ್ಲಿರುವ ಕೋಠಾರಿ ನಗರದ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ ಮಿರಿಯಾಲ (41), ಹುಬ್ಬಳ್ಳಿ ಜನತಾ ಕಾಲನಿಯ ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ(38) ಮತ್ತು ಹುಬ್ಬಳ್ಳಿ ಚಾಲುಕ್ಯ ನಗರದ ಸುನೀಲ ಮೋಕಾ (40) ಎಂಬುವವರನ್ನು ಬಂಧಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪ್ರಮುಖ ಆರೋಪಿಯನ್ನು ಹುಬ್ಬಳ್ಳಿಗೆ ಕರೆತಂದು ಮಹಜರು ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ