ವಿಜಯಪುರ: ಜಿಲ್ಲೆಯ ೯ ಸಕ್ಕರೆ ಕಾರ್ಖಾನೆಗಳಲ್ಲಿ ೨೦೨೩-೨೪ನೇ ಸಾಲಿನ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿದ್ದು, ಈವರೆಗೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ೧೧.೭೬ ಲಕ್ಷ ಮೆಟ್ರಿಕ್ ಟನ್ ಕಬ್ಬನ್ನು ನುರಿಸಿದ್ದು, ನ.೨೯ ರವರೆಗೆ ₹೧೫೯.೯೨ ಕೋಟಿ ಹಣವನ್ನು ರೈತರಿಗೆ ಪಾವತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದರು.
ಜಿಲ್ಲೆಯ ಸಾಯಿಬಸವ ಮಲಘಾಣ ಸಕ್ಕರೆ ಕಾರ್ಖಾನೆಯವರು ₹೪.೯೦, ಇಂಡಿಯನ್ ಶುಗರ್ಸ್ ಹಾವಿನಾಳ ₹೧೦.೫೮, ಶ್ರೀ ಬಾಲಾಜಿ ಶುಗರ್ಸ್ ಯರಗಲ್ಲ ₹೪೯.೦೭, ಕೆಪಿಆರ್ ಶುಗರ್ಸ್ ಆಲಮೇಲ ₹೨೫.೧೧, ಜಮಖಂಡಿ ಶುಗರ್ಸ್ ಯುನಿಟ್-೨ ನಾದ ಕೆಡಿ ₹೧೪.೯೧, ಸಂಗಮನಾಥ ಶುಗರ್ಸ್ ಯರಗಲ್ಲ ಬಿಕೆ ₹೧೮.೧೯, ಭೀಮಾಶಂಕರ ಶುಗರ್ಸ್ ₹೧೧.೮೩ ಹಾಗೂ ಶ್ರೀ ಬಸವೇಶ್ವರ ಶುಗರ್ಸ್ ಕಾರಜೋಳ ₹೨೫.೩೦ ಕೋಟಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿದ್ದಾರೆ. ರೈತರಿಂದ ಪಡೆದುಕೊಂಡು ಕಬ್ಬು ನುರಿಸಿದ ಕೂಡಲೇ ಆಯಾ ರೈತರಿಗೆ ಹಣ ನೀಡಲು ಎಲ್ಲ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ವ್ಯವಸ್ಥಾಪಕ ನಿರ್ದೇಶಕರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.