ಸಾವಿರಾರು ಜನರ ಬದುಕಿಗೆ ಆಸರೆಯಾದ ವಿಜಯಪುರ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌

KannadaprabhaNewsNetwork |  
Published : Feb 27, 2026, 03:15 AM IST
ಕನ್ನಡಪ್ರಭ ಸಹಕಾರ ಶಿರೋಮಣಿ ಪ್ರಶಸ್ತಿ ಪಡೆದ ಬ್ಯಾಂಕ ಅಧ್ಯಕ್ಷೆ ಸೌಮ್ಯ ಕಲ್ಲೂರಗೆ ಸನ್ಮಾನ | Kannada Prabha

ಸಾರಾಂಶ

3 ದಶಕಗಳಿಂದ ನಮ್ಮ ಬ್ಯಾಂಕ್ ನಿರಂತರ ಸೇವೆ ಸಲ್ಲಿಸುತ್ತಿದೆ. ದಿವಂಗತ ಆರ್.ಆರ್‌.ಕಲ್ಲೂರ ಹಾಗೂ ಮೀನಾಕ್ಷಿ ಕಲ್ಲೂರ ದೂರದೃಷ್ಟಿಯಿಂದ ಆರಂಭವಾದ ಈ ಬ್ಯಾಂಕ್ ಸಾವಿರಾರು ಜನರ ಬದುಕಿಗೆ ಆಸರೆಯಾಗಿದೆ ಎಂದು ಸಹಕಾರ ಶಿರೋಮಣಿ ಪ್ರಶಸ್ತಿ ಪುರಸ್ಕೃತೆ ಹಾಗೂ ವಿಜಯಪುರ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ ಅಧ್ಯಕ್ಷೆ ಸೌಮ್ಯ ಕಲ್ಲೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

3 ದಶಕಗಳಿಂದ ನಮ್ಮ ಬ್ಯಾಂಕ್ ನಿರಂತರ ಸೇವೆ ಸಲ್ಲಿಸುತ್ತಿದೆ. ದಿವಂಗತ ಆರ್.ಆರ್‌.ಕಲ್ಲೂರ ಹಾಗೂ ಮೀನಾಕ್ಷಿ ಕಲ್ಲೂರ ದೂರದೃಷ್ಟಿಯಿಂದ ಆರಂಭವಾದ ಈ ಬ್ಯಾಂಕ್ ಸಾವಿರಾರು ಜನರ ಬದುಕಿಗೆ ಆಸರೆಯಾಗಿದೆ ಎಂದು ಸಹಕಾರ ಶಿರೋಮಣಿ ಪ್ರಶಸ್ತಿ ಪುರಸ್ಕೃತೆ ಹಾಗೂ ವಿಜಯಪುರ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ ಅಧ್ಯಕ್ಷೆ ಸೌಮ್ಯ ಕಲ್ಲೂರ ಹೇಳಿದರು.

ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ನೀಡುವ ಸಹಕಾರ ಶಿರೋಮಣಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕಿನ ನಿರ್ದೆಶಕರು ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಸಹಕಾರಿ ಬ್ಯಾಂಕ್ ಎನಿಸಿಕೊಂಡಿರುವ ನಮ್ಮ ಬ್ಯಾಂಕ್‌ಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡವು ಸಹಕಾರ ಶಿರೋಮಣಿ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ. ಬ್ಯಾಂಕಿನ ಸಮಸ್ತ ನಿರ್ದೇಶಕರು, ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರ ಶ್ರಮ ಹಾಗೂ ಸಹಕಾರದಿಂದ ಈ ಪ್ರಶಸ್ತಿ ಬ್ಯಾಂಕಿಗೆ ಬಂದಿದೆ. ಬ್ಯಾಂಕಿಗೆ ಪ್ರಶಸ್ತಿ ನೀಡಿ ಗೌರವಿಸಿದ ಕನ್ನಡಪ್ರಭ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.ಈ ವೇಳೆ ಬ್ಯಾಂಕಿನ ನಿರ್ದೇಶಕರಾದ ಸುನಂದಾ ಬಿರಾದಾರ, ಅನ್ನಪೂರ್ಣ ಶಿರಾಡೋಣ, ಇಂದುಮತಿ ಸಜ್ಜನ, ಪದ್ಮಜಾ ಪಾಟೀಲ, ಶೈಲಜಾ ನಾಡಗೌಡ, ಸ್ಮೀತಾ ಪಾಟೀಲ, ರೇಖಾ ನಂದಿ, ಚಂದ್ರಕ್ಕ ಮೇತ್ರಿ, ಸವಿತಾ ಬಿರಾದಾರ, ರೇಖಾ ಕಲ್ಲೂರ, ಕಸ್ತೂರಿಬಾಯಿ ಬರಗಿ ಇದ್ದರು.ರಾಜ್ಯದಲ್ಲಿ ಮೊದಲ ಸಹಕಾರಿ ಬ್ಯಾಂಕ್ ಎನಿಸಿಕೊಂಡಿರುವ ನಮ್ಮ ಬ್ಯಾಂಕ್‌ಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ತಂಡವು ಸಹಕಾರ ಶಿರೋಮಣಿ ಪ್ರಶಸ್ತಿ ನೀಡಿರುವುದು ಸಂತೋಷವಾಗಿದೆ. ಬ್ಯಾಂಕಿನ ಸಮಸ್ತ ನಿರ್ದೇಶಕರು, ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರ ಶ್ರಮ ಹಾಗೂ ಸಹಕಾರದಿಂದ ಈ ಪ್ರಶಸ್ತಿ ಬ್ಯಾಂಕಿಗೆ ಬಂದಿದೆ. ಬ್ಯಾಂಕಿಗೆ ಪ್ರಶಸ್ತಿ ನೀಡಿ ಗೌರವಿಸಿದ ಕನ್ನಡಪ್ರಭ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.

-ಸೌಮ್ಯ ಕಲ್ಲೂರ, ವಿಜಯಪುರ ಜಿಲ್ಲಾ ಮಹಿಳಾ ಸಹಕಾರ ಬ್ಯಾಂಕ್‌ ಅಧ್ಯಕ್ಷೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಲು ತೂರಾಟ: ಜಿಲ್ಲಾಡಳಿತಕ್ಕೆ 15 ಗಡುವು ನೀಡಿದ ಹಿಂದೂ ಸಂಘಟನೆಗಳು
ಬರಿದಾದ ಸರ್ಕಾರಿ ಖಜಾನೆ, ಅಭಿವೃದ್ಧಿ ಸಂಪೂರ್ಣ ಮರೀಚಿಕೆ