ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲ್‌ ವೇಳಾಪಟ್ಟಿ ಪರಿಷ್ಕರಣೆ

KannadaprabhaNewsNetwork |  
Published : Jun 18, 2025, 11:49 PM ISTUpdated : Jun 18, 2025, 11:50 PM IST
32 | Kannada Prabha

ಸಾರಾಂಶ

ವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು 2025 ರ ಡಿಸೆಂಬರ್‌ ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲು ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುವಿಜಯಪುರ-ಮಂಗಳೂರು ಸೆಂಟ್ರಲ್-ವಿಜಯಪುರ (07377/07378) ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಅವಧಿಯನ್ನು 2025 ರ ಡಿಸೆಂಬರ್‌ ವರೆಗೆ ವಿಸ್ತರಿಸಿ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಈ ರೈಲುಗಳು ಈಗಿರುವ ಮಾರ್ಗ, ನಿಲುಗಡೆಗಳು ಹಾಗೂ ಬೋಗಿಗಳ ಸಂಯೋಜನೆಯೊಂದಿಗೆ ಮುಂದುವರಿಯಲಿವೆ. ಇದಲ್ಲದೆ ಜುಲೈ 1, 2025 ರಿಂದ ಜಾರಿಗೆ ಬರುವಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್‌ನ ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ.ಈ ಹಿಂದೆ ಜೂನ್ 30, 2025 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07377 ವಿಜಯಪುರ-ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಜುಲೈ 1 ರಿಂದ ಡಿಸೆಂಬರ್ 31, 2025 ರವರೆಗೆ ವಿಸ್ತರಿಸಲ್ಪಟ್ಟಿದೆ. ಅದೇ ರೀತಿ, ಜುಲೈ 1, 2025 ರವರೆಗೆ ಸಂಚರಿಸಲಿದೆ ಎಂದು ಸೂಚಿಸಲಾಗಿದ್ದ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ಜುಲೈ 2, 2025 ರಿಂದ ಜನವರಿ 1, 2026 ರವರೆಗೆ ವಿಸ್ತರಿಸಲಾಗಿದೆ.ಪರಿಷ್ಕೃತ ವೇಳಾಪಟ್ಟಿ ಇಂತಿದೆ:ಪರಿಷ್ಕೃತ ವೇಳಾಪಟ್ಟಿಯಂತೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ 14.35 ಗಂಟೆಗೆ ಹೊರಡುವ ಬದಲು 16.45 ಗಂಟೆಗೆ ಹೊರಡಲಿದೆ. ನಂತರ ರೈಲು ಬಂಟವಾಳಕ್ಕೆ 17.30/17.32 , ಕಬಕ ಪುತ್ತೂರು18.00/18.02 , ಸುಬ್ರಹ್ಮಣ್ಯ ಮಾರ್ಗ 18.50/19.00, ಸಕಲೇಶಪುರಕ್ಕೆ 21.20/21.30 ಗಂಟೆಗೆ, ಹಾಸನಕ್ಕೆ 22.20/22.30 ಗಂಟೆಗೆ, ಅರಸೀಕೆರೆಗೆ 23.20/23.25 ಗಂಟೆಗೆ, ಕಡೂರಿಗೆ 23.59/00.01 ಗಂಟೆಗೆ, ಬೀರೂರಿಗೆ 00.08/00.09 ಗಂಟೆಗೆ, ಚಿಕ್ಕಜಾಜೂರಿಗೆ 01.10/01.12 ಗಂಟೆಗೆ, ದಾವಣಗೆರೆಗೆ 01.48/01.50 ಗಂಟೆಗೆ, ಹರಿಹರಕ್ಕೆ 02.03/02.05 ಗಂಟೆಗೆ, ರಾಣಿಬೆನ್ನೂರಿಗೆ 02.25/02.27 ಗಂಟೆಗೆ, ಬ್ಯಾಡಗಿಗೆ 02.44/02.46 ಗಂಟೆಗೆ ಮತ್ತು ಎಸ್‌ಎಂಎಂ ಹಾವೇರಿಗೆ 03.00/03.02 ಗಂಟೆಗೆ ಆಗಮಿಸಿ ಹೊರಡಲಿದೆ.ಯಲವಿಗಿಗೆ 03.32/03.33 ಗಂಟೆಗೆ, ಎಸ್‌ಎಸ್‌ಎಸ್ ಹುಬ್ಬಳ್ಳಿಗೆ 04.40/04.50 ಗಂಟೆಗೆ, ಬಾಗಲಕೋಟೆಗೆ 07.56/07.58 ಗಂಟೆಗೆ, ಆಲಮಟ್ಟಿಗೆ 08.37/08.38 ಗಂಟೆಗೆ ಮತ್ತು ಬಸವನ ಬಾಗೇವಾಡಿ ರೋಡ್‌ಗೆ 08.59/09.00 ಗಂಟೆಗೆ ಆಗಮಿಸಿ ಹೊರಡಲಿದೆ. ಈ ರೈಲು ಮೊದಲು 09.35 ಗಂಟೆಗೆ ತಲುಪುತ್ತಿದ್ದ ವಿಜಯಪುರಕ್ಕೆ ಪರಿಷ್ಕೃತ ವೇಳಾಪಟ್ಟಿಯಂತೆ 11.15 ಗಂಟೆಗೆ ತಲುಪಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ